ಪರಿಸರ ರಕ್ಷಣೆ ಹಸಿರೇ ನಮ್ಮ ಉಸಿರಾಗಬೇಕು – ರಮೇಶ ಬುಲಬುಲೆ.

Ravi Talawar
ಪರಿಸರ ರಕ್ಷಣೆ ಹಸಿರೇ ನಮ್ಮ ಉಸಿರಾಗಬೇಕು – ರಮೇಶ ಬುಲಬುಲೆ.
WhatsApp Group Join Now
Telegram Group Join Now
ಅಥಣಿ : ಗಿಡಮರಗಳಿಲ್ಲದೆ ಮನುಷ್ಯನ ಬದುಕು ಅಸಾಧ್ಯ, ಏಕೆಂದರೆ ಮರಗಳನ್ನು ನೆಡುವುದರಿಂದ ನಮಗೆ ಉಸಿರಾಡಲು ಶುದ್ಧವಾದ ಆಮ್ಲಜನಕವನ್ನು ಒದಗಿಸುತ್ತವೆ, ಅನೇಕ ಜೀವಿಗಳಿಗೆ ಆಶ್ರಯ ನೀಡುತ್ತವೆ. ಹೀಗಾಗಿ ಪ್ರಕೃತಿ ಮಾತೆಯ ರಕ್ಷಣೆ ಮಾಡಬೇಕು, ಭವಿಷ್ಯಕ್ಕಾಗಿ ಪರಿಸರವನ್ನು ಉಳಿಸಬೇಕು, ಗಿಡ-ಮರಗಳನ್ನು ನೆಟ್ಟು ಪರಿಸರವನ್ನು ಉಳಿಸಿ ಬೆಳೆಸಬೇಕು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ರಮೇಶ ಬುಲಬುಲೆ ಹೇಳಿದರು.
ಅವರು ಪಟ್ಟಣದ ಶ್ರೀ ಸಿದ್ದೇಶ್ವರ ದೇವಸ್ಥಾನದ ರಸ್ತೆಯ ಬದಿಯಲ್ಲಿ ಅಥಣಿ ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಸಸಿ ನೆಡುವ ಕಾರ್ಯಕ್ರಮ ಚಿಕ್ಕದಾದರೂ ಬರುವ ದಿನಮಾನದಲ್ಲಿ ಮುಂದಿನ ಪೀಳಿಗೆಗೆ ಪರಿಸರವನ್ನು ಬೆಳೆಸುವ ರಕ್ಷಿಸುವ ಮನೋಭಾವನೆ ನಮ್ಮದಾಗಿದೆ. ಆರೋಗ್ಯಕರ ಮತ್ತು ಮಾಲಿನ್ಯ-ಮುಕ್ತ ವಾತಾವರಣವನ್ನು ಕಾಪಾಡಿಕೊಳ್ಳಲು ಮರಗಳನ್ನು ನೆಡುವುದು ಅನಿವಾರ್ಯ. ಗಿಡಮರಗಳಿಲ್ಲದೇ ಜೀವಸಂಕುಲದ ಬದುಕು ಬಹಳ ಕಷ್ಟ. ಹಸಿರೇ ನಮ್ಮ ಉಸಿರಾಗಬೇಕು. ಸುಂದರ ಪರಿಸರದ ಜೊತೆಗೆ ಆರೋಗ್ಯವಂತ ಸಮಾಜವನ್ನು ಕಟ್ಟಲು ಸಹಕಾರಿಯಾಗುತ್ತದೆ. ಅರಣ್ಯ ಇಲಾಖೆ ಹಾಗೂ ಪುರಸಭೆ ಆಡಳಿತ ಮಂಡಳಿಯ ಸಹಕಾರದೊಂದಿಗೆ ಗಿಡಮರಗಳನ್ನು ಸಂರಕ್ಷಣೆ ಮಾಡಲಾಗುವುದು. ಮುಂಬರುವ ದಿನಗಳಲ್ಲಿ ಲಯನ್ಸ್ ಕ್ಲಬ್ ಅಥಣಿ ವತಿಯಿಂದ ಪಟ್ಟಣದಲ್ಲಿ ಇನ್ನಷ್ಟು ಸಮಾಜಮುಖಿ ಸೇವೆಗಳನ್ನ ಹಮ್ಮಿಕೊಳ್ಳಲಾಗುವುದು ಎಂದರು.
ಈ ವೇಳೆ ನ್ಯಾಯವಾದಿ ಅಮಿತ ಮಹಾಜನ,
ಅಶೋಕ ಹೊಸೂರ ಮಾತನಾಡಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಮಹತ್ವದ ಜವಾಬ್ದಾರಿಯಾಗಿದ್ದು. ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಯಬೇಕಾದರೆ ಪರಿಸರ ರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ನಂತರ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್ ಮಾತನಾಡಿ ಮುಖ್ಯವಾಗಿ ಪರಿಸರ ಪ್ರಜ್ಞೆ ಎಲ್ಲರಲ್ಲಿಯೂ ಬೆಳೆಯಬೇಕು. ಅಥಣಿ ಗ್ರೀನ್ ಸಿಟಿ ಮಾಡುವ ನಿಟ್ಟಿನಲ್ಲಿ ನಮ್ಮ ನೆಚ್ಚಿನ ಶಾಸಕರಾದ ಲಕ್ಷ್ಮಣ ಸವದಿ ಅವರು ಬ್ರಹತ್ ಅಭಿಯಾನ ಆರಂಭಿಸಿದ್ದು ನಾವೆಲ್ಲರೂ ಅವರಿಗೆ ಬೆಂಬಲವಾಗಿದ್ದೇವೆ. ಲಯನ್ಸ್ ಕ್ಲಬ್ ವತಿಯಿಂದ ಹಮ್ಮಿಕೊಂಡಿರುವ ವನಮಹೋತ್ಸವ ಕಾರ್ಯಕ್ರಮವು ಲಯನ್ಸ್ ಕ್ಲಬ್ ನ ಪರಿಸರ ಪ್ರಜ್ಞೆ ಎತ್ತಿ ತೋರಿಸುತ್ತದೆ. ಪುರಸಭೆ ವತಿಯಿಂದ ಏನು ಸಹಾಯ ಸಹಕಾರ ಬೇಕು ಅದನ್ನು ಮಾಡುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದ ಶೆಟ್ಟರ ಮಠದ ಮರುಳಸಿದ್ದ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ನಮ್ಮ ಹುಟ್ಟುಹಬ್ಬ ಮತ್ತು ಇನ್ನಿತರ ಸಂದರ್ಭದಲ್ಲಿ ಗಿಡ ಮರಗಳನ್ನು ನೆಟ್ಟು ಅವುಗಳನ್ನ ಪೋಷಿಸಬೇಕು ಆರೋಗ್ಯವಂತ ಸಮಾಜವನ್ನು ಕಟ್ಟಲು ಪ್ರತಿಯೊಬ್ಬರೂ ಗಿಡಮರಗಳನ್ನು ನೆಟ್ಟು ಅವುಗಳ ಸಂರಕ್ಷಣೆ ಮಾಡಲು ಸಂಕಲ್ಪ ಹೊಂದಬೇಕು ಎಂದು ಸಲಹೆ ನೀಡಿದ ಅವರು ಲಯನ್ಸ್ ಕ್ಲಬ್ ಸದಸ್ಯರು ಅಥಣಿಯ ಆರಾಧ್ಯ ದೈವ ಸಿದ್ದೇಶ್ವರ ದೇವಸ್ಥಾನದ ರಸ್ತೆ ಮಾರ್ಗದಲ್ಲಿ ಸಸಿಗಳನ್ನು ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಸಸಿಗಳನ್ನು ಪ್ರತಿಯೊಬ್ಬರೂ ದತ್ತು ಪಡೆದುಕೊಳ್ಳವ ಮೂಲಕ ಅವುಗಳ ಸಂರಕ್ಷಣೆ ಮಾಡಬೇಕೆಂದು ಮಾರ್ಗದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಆನಂದ ಟೋಣಪಿ. ವಿನೋದ ಕನಮಡಿ. ಸಂಗಮೇಶ ಮಮದಾಪೂರ, ಮೋಹನ ಕಾಂಬಳೆ, ಚಿದಾನಂದ ನರಗಟ್ಟಿ, ಬಸವರಾಜ ಬಾವನ್ನವರ, ಮಂಜುನಾಥ ಬಡಿಗೇರ, ಬಾಹುಸಾಹೇಬ ನಾಯಕ, ಡಾ. ಸಂಜೀವಕುಮಾರ ಗುಂಜಿಗಾಂವಿ. ಡಾ. ಮಹೇಶ ಕಾಪಶಿ. ಸೋಮು ವಾಂಗಿ. ಮಹಾಂತೇಶ ಕವಲಾಪೂರ. ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಅರಣ್ಯ ಅಧಿಕಾರಿ ಶಿವಾಜಿ ಮುಂಜೆ, ಅಬ್ದುಲಅಜೀಜ್ ಮುಲ್ಲಾ. ಮಲ್ಲಿಕಾರ್ಜುನ ಬುಟಾಳಿ,ರಾಜು ಬುಲಬುಲೆ. ಪ್ರಮೋದ ಬಿಳ್ಳೂರ, ಮಯೂರ ಟೊಣಪಿ, ಸಚಿನ ಬುಟಾಳಿ ಸೇರಿದಂತೆ ಲಯನ್ಸ್ ಕ್ಲಬ್‌ನ ಸರ್ವ ಸದಸ್ಯರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article