ನೇಸರಗಿ.ಸಮೀಪದ ವನ್ನೂರು ಗ್ರಾಮದ ಸರಕಾರಿ ಕಾಲೇಜ್ ಆವರಣದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಸಿಬಿಸಿ ಉಪಾಧ್ಯಕ್ಷರಾದ ಸತ್ಯ ನಾಯ್ಕ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆಯನ್ನು ಮಾಡಿದರು.
ಈ ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರಾದ ಪ್ರವೀಣ ದೊಡ್ಡಮನಿ ಅವರು ಯೋಜನೆಯ ಬಗ್ಗೆ ಹಾಗೂ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ಮಾತಾಡಿದರು. ಕಾರ್ಯಕ್ರಮದ ಅಧ್ಯಕ್ಷರಾದ ಕಾಲೇಜಿನ ಪ್ರಿನ್ಸಿಪಾಲರಾದ ಆರ್ ಎಸ್ ಬಸನ್ನನವರ್ ಮಾತನಾಡಿ ಪರಿಸರ ಸಂರಕ್ಷಣೆ ಮಾಡುವುದರ ಮೂಲಕ ಆಗುವ ಪ್ರಯೋಜನೆ ಬಗ್ಗೆ ಮಾಹಿತಿಯನ್ನು ನೀಡಿದರು, ವಿದ್ಯಾರ್ಥಿಗಳಿಗೆ ತಮ್ಮ ಒಂದು ಸವಿನೆನಪಿಗೋಸ್ಕರ ಒಂದು ಗಿಡವನ್ನು ನಾಟಿ ಮಾಡಿ ಪರಿಸರ ಉಳಿಸುವುದರ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಬೈಲಹೊಂಗಲ ತಾಲೂಕಿನ ಕೃಷಿ ಮೇಲ್ವಿಚಾರಕರಾದ ರವಿಯವರು, ಎಸ್ ಬಿ ಹೊಂಗಲ ಅವರು ನಿರೂಪಣೆ ಮಾಡಿದರು,ಶ್ರೀಮತಿ ಎಲ್ ಎ ಪಾಟೀಲ್ ಸ್ವಾಗತಿಸಿದರು, ಶ್ರೀಮತಿ ಸಿ ಬಿ ರೊಟ್ಟಿ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.