ರೇವಣಸಿದ್ದೇಶ್ವರ  ಶಾಲೆಯಲ್ಲಿ ಪರಿಸರ ಜಾಗ್ರತಿ ಕಾರ್ಯಕ್ರಮ

Ravi Talawar
ರೇವಣಸಿದ್ದೇಶ್ವರ  ಶಾಲೆಯಲ್ಲಿ ಪರಿಸರ ಜಾಗ್ರತಿ ಕಾರ್ಯಕ್ರಮ
WhatsApp Group Join Now
Telegram Group Join Now
ನೇಸರಗಿ: ಇಲ್ಲಿನ  ವಲಯದ ನೇಸರಗಿ  ಕಾರ್ಯ ಕ್ಷೇತ್ರದ ನೇಸರಗಿ ಮಲ್ಲಾಪುರ ಗ್ರಾಮದ   ರೇವಣಸಿದ್ದೇಶ್ವರ  ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ  ಗಿಡಕ್ಕೆ ನೀರು ಹಾಕುವುದರ ಮೂಲಕ ಹಾಗೂ ತರಗತಿವಾರು ಸಸಿ ವಿತರಣೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ವಾಸ್ತವಿಕವಾಗಿ ವಲಯದ ಮೇಲ್ವಿಚಾರಕರಾದ ಪ್ರವೀಣ  ಮಾತನಾಡಿ ವಿದ್ಯಾರ್ಥಿಗಳು ತಮ್ಮ ವ್ಯಾಸಂಗ ಸಮಯದಲ್ಲಿ  ಗಿಡಗಳನ್ನು ನೆಟ್ಟು ಸಂರಕ್ಷಣೆ ಮಾಡುವದರಿಂದ ದೇಶ ಸುರಕ್ಷತವಾಗಿರುತ್ತದೆ ಎಂದರು.
 ಪರಿಸರ  ಈ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಹಾಗೂ ಪರಿಸರ ಸಂರಕ್ಷಣೆ ಮಹತ್ವದ ಬಗ್ಗೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯರಾದ ಎಮ್ ಎಸ್  ಶರಣು  ಮಾತನಾಡಿ ಪರಿಸರ ರಕ್ಷಿಸಲು ನಾವೆಲ್ಲರೂ ಗಿಡಗಳನ್ನು ನೆಡಬೇಕು ಎಂದರು. ಇ ಸಂದರ್ಭದಲ್ಲಿ  ಶಾಲೆ ಎಲ್ಲಾ ಸಹ ಶಿಕ್ಷಕರು ಹಾಗೂ ಯೋಜನೆಯ ಕೃಷಿ ಮೇಲ್ವಿಚಾರಕರು  ಹಾಗೂ ಸ್ಥಳೀಯ ಸೇವಾ ಪ್ರತಿನಿಧಿಯವರು ಹಾಗೂ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದರು.
WhatsApp Group Join Now
Telegram Group Join Now
Share This Article