ಆರೋಗ್ಯವಂತ ಬದುಕಿಗೆ ಪರಿಸರ ಮುಖ್ಯ ಪಾತ್ರ ವಹಿಸುತ್ತದೆ : ಆರ್. ಟಿ. ಪಾಟೀಲ

Ravi Talawar
ಆರೋಗ್ಯವಂತ ಬದುಕಿಗೆ ಪರಿಸರ ಮುಖ್ಯ ಪಾತ್ರ ವಹಿಸುತ್ತದೆ : ಆರ್. ಟಿ. ಪಾಟೀಲ
WhatsApp Group Join Now
Telegram Group Join Now

ರನ್ನ ಬೆಳಗಲಿ: ಜೂ.6., ಪಟ್ಟಣದ ನೆರೆಯ ನಾಗರಾಳ ಗ್ರಾಮದ ಶ್ರೀ ಮಾಧವಾನಂದ ಕನ್ನಡ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಬುಧವಾರದಂದು ಆಚರಿಸಲಾಯಿತು.

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಆರ್. ಟಿ. ಪಾಟೀಲ ಶಾಲಾ ಆವರಣದಲ್ಲಿ ಶಶಿಯನ್ನು ನಡುವುದರ ಮೂಲಕ ಚಾಲನೆ ನೀಡಿದ ಅವರು ಆರೋಗ್ಯವಂತ ಬದುಕಿಗೆ ಪರಿಸರ ಮುಖ್ಯ ಪಾತ್ರ ವಹಿಸುತ್ತದೆ. ಪರಿಸರ ಚೆನ್ನಾಗಿದ್ದರೆ ನಾವು ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ.
ಮಾನವ ತನ್ನ ದುರಾಸೆಗಳಿಂದ ಇಂದು ಪರಿಸರವನ್ನು ನಾಶ ಮಾಡುತ್ತಾ ಆಧುನಿಕ ವೇಗದ ಜೀವನದ ಕಡೆಗೆ ಹೋಗುತ್ತಿದ್ದಾನೆ. ಅಷ್ಟೇ ವೇಗದಲ್ಲಿ ತನ್ನ ಆರೋಗ್ಯವನ್ನು ಕೂಡ ಹಾಳು ಮಾಡಿಕೊಳ್ಳುತ್ತಿದ್ದಾನೆ. ಆದರಿಂದ ವಿದ್ಯಾರ್ಥಿಗಳಲ್ಲಿ ಪರಿಸರದ ಮಹತ್ವದ ಜ್ಞಾನವನ್ನು ಬಿತ್ತನೆ
ಮಾಡುವುದರ ಜೊತೆಗೆ ಪರಿಸರದ ಜೊತೆಗೆ ಬದುಕುವ ಕಲೆಯನ್ನ ರೂಢಿಸಬೇಕು ಎಂದು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.

ಮುಖ್ಯ ಗುರುಗಳಾದ ಎ.ಆರ್. ಯಡಹಳ್ಳಿಯವರು ಸ್ವಾಗತಿಸಿ ಪ್ರಾಸ್ತಾವಿಕ ವಿಚಾರವನ್ನು ಹೇಳಿದರು. ವೆಂಕಪ್ಪ ಬಿ ಪಾಟೀಲ ಉಪಾಧ್ಯಕ್ಷರು,ಯಮನಪ್ಪ ನದಾಫ್ ಸದಸ್ಯರು, ಆಯ್.ಆಯ್.ಅರಗಂಜಿ ಕಾರ್ಯದರ್ಶಿಗಳು,ವೆಂಕಪ್ಪ ಲದ್ದಿ ಎಸ್ ಡಿ ಎಂ ಸಿ ಅಧ್ಯಕ್ಷರು ಸರಕಾರಿ ಪ್ರೌಢ ಶಾಲೆ ನಾಗರಾಳ, ಶಿಕ್ಷಕರಾದ ಕೆ. ಎ.ಹೊಸಮನಿ,ಜಿ.ಆರ್ ನೆಸೂರ್, ಆರ್.ಜಿ.ಮಾದರ, ವಿ.ಎಂ. ಕಾಂಬಳೆ, ಜಿ.ಆರ್.ಹಾದಿಮನಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು, ಶಾಲೆಯ ಆಡಳಿತ ಮಂಡಳಿಯವರು ಹಾಗೂ ಸಿಬ್ಬಂದಿ ವರ್ಗ ಮುದ್ದು ವಿದ್ಯಾರ್ಥಿಗಳು, ಪಾಲಕ, ಪೋಷಕ, ಸಾರ್ವಜನಿಕರು ಹಾಜರಿದ್ದರು.

WhatsApp Group Join Now
Telegram Group Join Now
Share This Article