ಬಳ್ಳಾರಿ, ಅ. 18:ಉದ್ಯಮಗಳು ಮತ್ತು ಉದ್ಯೋಗಗಳನ್ನು ಹೆಚ್ಚಿಸಲು ಅಗತ್ಯವಿರುವ ಬಂಡವಾಳ – ತಾಂತ್ರಿಕ ; ಮಾರುಕಟ್ಟೆ – ಮಾನವ ಸಂಪನ್ಮೂಲಗಳ ಮಾರ್ಗದರ್ಶನ ನೀಡಲಿಕ್ಕಾಗಿಯೇ ನಮ್ಮ ಸಂಸ್ಥೆಯು ಇಂಕ್ಯುಬೇಷನ್ ಸೆಂಟರ್ ಪ್ರಾರಂಭಿಸಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾಗಿರುವ ಯಶವಂತರಾಜ್ ನಾಗಿರೆಡ್ಡಿ ಅವರು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಆಡಿಟೋರಿಯಂನಲ್ಲಿ ಶನಿವಾರ ನಡೆದ `ಲೀನ್ ಯೋಜನೆ, ಸಿ, `ಝೀರೋ ಡಿಫೆಕ್ಟ್, ಝೀರೋ ವೇಸ್ಟ್’ (ಲೀನ್) ಹಾಗೂ ರಫ್ತು’ ವಿಷಯದ ಒಂದು ದಿನದ ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಂದು ಉದ್ಯಮದಲ್ಲಿ ಪ್ರತಿ ನಿತ್ಯವೂ, ಪ್ರತಿ ಕ್ಷಣವೂ ಸವಾಲುಗಳು – ಸಂಕಷ್ಟಗಳು ಎದುರಾಗುವುದು ಸಹಜ. ಅಂಥಹಾ ಸವಾಲುಗಳು – ಸಂದರ್ಭಗಳನ್ನು ಯಶಸ್ವಿಯಾಗಿ ಎದುರಿಸಿ ಉದ್ಯಮದಲ್ಲಿ ಗೆಲುವು ಸಾಧಿಸಲು ನಮ್ಮ ಇಂಕ್ಯುಬೇಷನ್ ಸೆಂಟರ್ ಜ್ಞಾನವನ್ನು, ಕೌಶಲ್ಯಗಳನ್ನು, ಆತ್ಮಸ್ಥೆöÊರ್ಯವನ್ನು ನೀಡಲಿದೆ. ಪ್ರತಿಯೊಬ್ಬರೂ ಈ ವ್ಯವಸ್ಥೆಯ ಸದುಪಯೋಗ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಕೇವಲ ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ ಸೀಮಿತವಾದ ಸಂಸ್ಥೆಯಲ್ಲ. ಸಮಾಜದ ಪ್ರತಿಯೊಬ್ಬರಿಗೂ ನಮ್ಮ ಸಂಸ್ಥೆ ತಲುಪುತ್ತಿದೆ. ಅನೇಕರಿಗೆ ನಮ್ಮ ಯೋಜನೆಗಳು ತಲುಪುತ್ತಿವೆ. ಈ ನಿಟ್ಟಿನಲ್ಲಿ ರಫ್ತು ಸಲಹೆ, ಉತ್ಪನ್ನಗಳ ಗುಣಮಟ್ಟ, ಮಾರುಕಟ್ಟೆ ಇನ್ನಿತರೆಗಳ ಮಾಹಿತಿ ಪಡೆಯಲು ಇಂಕ್ಯುಬೇಷನ್ ಸೆಂಟರ್‌ನ ಸದುಪಯೋಗ ಪಡೆದುಕೊಳ್ಳಿರಿ ಎಂದರು.
ಬಳ್ಳಾರಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಬಿ. ಸೋಮಶೇಖರ್ ಅವರು, ಕೈಗಾರಿಕೆಗಳು ಮತ್ತು ಉತ್ಪನ್ನಗಳ ಉತ್ತೇಜನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ವಿವರಿಸಿ, `ಝೀರೋ ಡಿಫೆಕ್ಟ್, ಝೀರೋ ವೇಸ್ಟ್’ (ಲೀನ್) ಕುರಿತು ಸಮಗ್ರವಾಗಿ ವಿವರಿಸಿದರು.
ಬಳ್ಳಾರಿ ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ವಿ. ರಾಮಚಂದ್ರ ಅವರು ಮುಖ್ಯ ಅತಿಥಿಗಳಾಗಿ, ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ಅತಿ ಹೆಚ್ಚಿನ ಉದ್ಯೋಗ ಸೃಷ್ಟಿಸುತ್ತಿವೆ. ಉದ್ಯೋಗ ಸೃಷ್ಠಿಯಲ್ಲಿ ನಿರಂತರ ತೊಡಗಿಕೊಂಡಿರುವ ಉದ್ಯಮಗಳು ವಿವಿಧ ಕಾರ್ಯಾಗಾರಗಳು, ಸಂಸ್ಥೆಗಳು ನೀಡುವ ಸಲಹೆ – ಸೂಚನೆಗಳನ್ನು ಪಡೆದು, ಯಶಸ್ವಿಯಾಗಬೇಕು ಎಂದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಕೆ.ಸಿ. ಸುರೇಶಬಾಬು, ಬಳ್ಳಾರಿ ಜಿಲ್ಲಾ ಹತ್ತಿ ಗಿರಣಿಗಳ ಸಂಘದ ಅಧ್ಯಕ್ಷರಾದ ದಂಡಿನ್ ತಿಪ್ಪೇಸ್ವಾಮಿ, ವಿಟಿಪಿಸಿ ಧಾರವಾಡದ ಉಪ ನಿರ್ದೇಶಕರಾದ ಮಲ್ಲಿಕಾರ್ಜುನ ವೇದಿಕೆಯಲ್ಲಿದ್ದರು.
ಕಾಸಿಯಾದ ಕಾಸಿಯಾದ ಉಪಾಧ್ಯಕ್ಷರಾದ ನಿಂಗಣ್ಣ ಎಸ್. ಬಿರಾದಾರ ಅವರು ಅಧ್ಯಕ್ಷತೆವಹಿಸಿದ್ದರು. ಕಾಶಿಯದ ವ್ಯವಸ್ಥಾಪಕ ಸಮಿತಿ ಸದಸ್ಯ ಶಿವಕುಮಾರ್ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಆರ್. ಕೇಶವಮೂರ್ತಿ ಅವರು ವಂದನಾರ್ಪಣೆ ಸಲ್ಲಿಸಿದರು.