ಬಾಗಲಕೋಟೆ: ಇತ್ತೀಚಿನ ದಿನದಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಕೌಶಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಉದ್ಯೋಗದಾತರು ಕೌಶಲ್ಯನಿರತ ಉದ್ಯೋಗಿಗಳ ಆಕಾಂಕ್ಷೆಯಲ್ಲಿ ಇರುವುದರಿಂದ ನಮ್ಮ ಪದವಿಯಿಂದಲ್ಲ ಕೌಶಲ್ಯದಿಂದ ಉದ್ಯೋಗ ಸೃಷ್ಟಿಯಾಗುತ್ತಿವೆ ಎಂದು ಅಗಸ್ತ್ಯ ಫೌಂಡೇಶನ್ ವಿಜಯಪುರ ವಿಭಾಗದ ಕ್ಯಾಟಲೈಝರ್ ದಿನೇಶ್ ರಾಠೋಡ್ ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಅಗಸ್ತ್ಯ ಫೌಂಡೇಶನ್, ಮಹಾವಿದ್ಯಾಲಯದ ಪ್ಲೇಸ್ಮೆಂಟ್ ಸೆಲ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಹಾಗೂ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗಗಳ ಸಹಯೋಗದಲ್ಲಿ ಹಮ್ಮಿಕೊಂಡ ಸೃಜನಾತ್ಮಕ ಕೌಶಲ್ಯ ತರಬೇತಿ ಕುರಿತು ಮೂರು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ನಾವೆಲ್ಲರೂ ತಂತ್ರಜ್ಞಾನದ ಜೊತೆಗೆ ಸಾಗಬೇಕಾಗಿದೆ. ಎಐ ಎಲ್ಲ ಕ್ಷೇತ್ರದಲ್ಲಿಯೂ ಪ್ರಭಾವ ಬೀರುತ್ತಿದ್ದು ಅದರೊಂದಿಗೆ ಹೊಂದಿಕೊಳ್ಳುವುದು ಅವಶ್ಯಕ. ಪದವಿ ಮತ್ತು ಅಂಕಪಟ್ಟಿಗಳನ್ನು ಬದಿಗಿಟ್ಟು ಕೌಶಲ್ಯವನ್ನು ಅರಿಸುವ ದಿನಮಾನಗಳು ಹತ್ತಿರವಾಗಿದ್ದು ಬೇರೆ ಬೇರೆ ಕೌಶಲ್ಯಗಳಲ್ಲಿ ಪರಿಣಿತರಾಗಬೇಕು ಅದಕ್ಕಾಗಿ ನಿರಂತರ ಪ್ರಯತ್ನ ಮತ್ತು ಅಭ್ಯಾಸ ಅವಶ್ಯಕ ಎಂದರು.
ಪ್ರತಿಯೊಬ್ಬರ ಬಳಿಯೂ ವಿವಿಧ ಕೌಶಲ್ಯಗಳಿದ್ದು ಅವುಗಳನ್ನು ಹೊರಹಾಕುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಬೆಳಸಿಕೊಳ್ಳಬೇಕು ಅಗಸ್ತ್ಯ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ ಮೂರ ದಿನಗಳ ವಿಶೇ? ತರಭೇತಿಯಲ್ಲಿ ಅತ್ಯುತ್ತಮವಾಗಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಬೂಟ್ ಕ್ಯಾಂಪ್ ಗೆ ಆಯ್ಕೆ ಮಾಡಿ ವಿಶೇ? ತರಬೇತಿ ನೀಡಲಾಗುವುದು. ಕೌಶಲ್ಯ ಇದ್ದರೆ ಉದ್ಯೋಗವೇ ನಿಮ್ಮನರಸಿ ಬರುತ್ತದೆ. ನಾವು ಎಲ್ಲರಿಗಿಂತಲೂ ವಿಶಿ?ವಾಗಿರಬೇಕು. ಆಗ ನಮ್ಮಲ್ಲಿರುವ ಜ್ಞಾನವನ್ನು ಚಿಮ್ಮಿಸಲು ಸಾಧ್ಯ. ಶ್ರದ್ದೆ, ಪ್ರಯತ್ನದಿಂದ ಕೌಶಲ್ಯಾಭಿವೃದ್ಧಿ ಎಂದು ವಿದ್ಯಾರ್ಥಿಗಳಿಗೆ ಶ್ಲಾಘಿಸಿದರು.
ಅತಿಥಿಸ್ಥಾನ ವಹಿಸಿದ ಪ್ರಾಚಾರ್ಯರಾದ ಎಸ್.ಆರ್.ಮೂಗನೂರಮಠ ಅವರು ಮಾತನಾಡಿ ಪ್ರತಿಯೊಬ್ಬರೂ ಸಂವಹನ ಮತ್ತು ಎಐ ಬಳಸಿಕೊಂಡು ಕೆಲಸ ಮಾಡಬೇಕು. ಎಐಯಿಂದ ವಿ?ಯವನ್ನು ಉತ್ತಮವಾಗಿ ನಿರೂಪಿಸಲು ಸಹಾಯಕ. ಸಮುದಾಯದ ಅಗತ್ಯತೆಯನ್ನು ಪೂರೈಸುತ್ತದೆ. ಉದ್ಯೋಗ ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ನಿಲ್ಲಿಸುತ್ತದೆ. ಅಂತರ್ ಕೌಶಲ್ಯ, ಸಾಮರ್ಥ್ಯವನ್ನು ಅನಾವರಣಗೊಳಿಸಲು ಎಐ ಸಹಕಾರಿ. ಜೊತೆಗೆ ಕಡಿಮೆ ಸಮಯದಲ್ಲಿ ಸಮಸ್ಯೆಯನ್ನು ಬಗೆಹರಿಸುತ್ತದೆ. ಇದನ್ನು ಸಮರ್ಥವಾಗಿ ಬಳಸಿಕೊಂಡರೆ ನಿಮ್ಮಲ್ಲಿರುವ ಹೊಳಪು ಹೆಚ್ಚುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪ್ಲೇಸ್ಮೆಂಟ್ ಸೆಲ್ ಮುಖ್ಯಸ್ಥರಾದ ಎಸ್.ವಿ. ಕಟ್ಟಿ ಅವರು ಪ್ರಾಸ್ತವಿಕವಾಗಿ ಮಾತನಾಡಿದರು. ಐಕ್ಯೂಎಸಿ ಸಂಯೋಜಕರಾದ ಡಾ.ಎ.ಯು.ರಾಠೋಡ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಐ.ಬಿ. ಚಿಕ್ಕಮಠ, ಕಾರ್ಯಕ್ರಮ ಸಂಯೋಜಕರಾದ ಮಹಾಂತೇಶ ಪಿ.ದೊಡವಾಡ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.