ಕೊಲ್ಕತ್ತಾದಲ್ಲಿ ಶನಿವಾರದಿಂದ ಕಿರಿಯ ವೈದ್ಯರ ತುರ್ತು ಸೇವೆ ಪುನರಾರಂಭ

Ravi Talawar
ಕೊಲ್ಕತ್ತಾದಲ್ಲಿ ಶನಿವಾರದಿಂದ ಕಿರಿಯ ವೈದ್ಯರ ತುರ್ತು ಸೇವೆ ಪುನರಾರಂಭ
WhatsApp Group Join Now
Telegram Group Join Now

ಕೊಲ್ಕತ್ತಾ: ಕರ್ತವ್ಯದಲ್ಲಿದ್ದ ಕೊಲ್ಕತ್ತಾದ ಟ್ರೈನಿ ವೈದ್ಯೆಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಖಂಡಿಸಿ ಪಶ್ಚಿಮ ಬಂಗಾಳದಲ್ಲಿ ವೈದ್ಯರ ಪ್ರತಿಭಟನೆ ಇನ್ನೂ ಮುಂದುವರೆದಿದೆ. ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಈ ಪ್ರಕರಣ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಇದೀಗ ಕಿರಿಯ ವೈದ್ಯರು ನಾಳೆ ಪ್ರತಿಭಟನಾ ಮೆರವಣಿಗೆಯನ್ನು ಯೋಜಿಸಿದ್ದಾರೆ. ಹಾಗೇ, ಶನಿವಾರದಿಂದ ತುರ್ತು ಸೇವೆಗಳನ್ನು ಪುನರಾರಂಭಿಸಲು ನಿರ್ಧರಿಸಿದ್ದಾರೆ.

ಆದರೆ, ಕೆಲಸಕ್ಕೆ ಮರಳಿದರೂ ಕಿರಿಯ ವೈದ್ಯರು ನ್ಯಾಯಕ್ಕಾಗಿ ತಮ್ಮ ಬೇಡಿಕೆಯಲ್ಲಿ ದೃಢವಾಗಿ ಉಳಿದಿದ್ದಾರೆ. ಶುಕ್ರವಾರ ಮಧ್ಯಾಹ್ನ ಸ್ವಸ್ಥ ಭವನದಿಂದ ಸಿಬಿಐ ಕಚೇರಿಯವರೆಗೆ ಮೆರವಣಿಗೆ ನಡೆಸಲು ಯೋಜಿಸಿದ್ದಾರೆ. ತಮ್ಮ ಕುಂದುಕೊರತೆಗಳ ಬಗ್ಗೆ ಗಮನ ಸೆಳೆದು ಅಧಿಕಾರಿಗಳಿಂದ ಪರಿಹಾರ ಪಡೆಯುವುದು ಈ ಪ್ರತಿಭಟನೆ ಮೆರವಣಿಗೆಯ ಉದ್ದೇಶವಾಗಿದೆ.
ಕೊಲ್ಕತ್ತಾದ ಕಿರಿಯ ವೈದ್ಯರು ಈ ಶನಿವಾರದಿಂದ ತುರ್ತು ವೈದ್ಯಕೀಯ ಸೇವೆಗಳನ್ನು ಪುನರಾರಂಭಿಸುವುದಾಗಿ ಘೋಷಿಸಿದ್ದಾರೆ. ಈ ನಿರ್ಧಾರವು ಹಲವಾರು ದಿನಗಳ ಪ್ರತಿಭಟನೆ ಮತ್ತು ಸೇವೆಗಳಲ್ಲಿ ಅಡ್ಡಿಪಡಿಸಿದ ನಂತರ ಸರ್ಕಾರಕ್ಕೆ ಕೊಂಚ ರಿಲೀಫ್ ಉಂಟುಮಾಡಿದೆ. ವೈದ್ಯರ ಮುಷ್ಕರದಿಂದ ಕೊಲ್ಕತ್ತಾದ ಜನರು ವೈದ್ಯರ ಚಿಕಿತ್ಸೆ ಸಿಗದೆ ಸಾಕಷ್ಟು ತುಂದರೆ ಅನುಭವಿಸಿದ್ದರು. ಪ್ರತಿಭಟನೆ ಹಿಂಪಡೆಯುವಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಾಕಷ್ಟು ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ
WhatsApp Group Join Now
Telegram Group Join Now
Share This Article