ಬಳ್ಳಾರಿ,ಅ.23.: ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಹೆಚ್ಚಿನ ಮಟ್ಟದಲ್ಲಿ ಅರ್ಹ ಶಿಕ್ಷಕರುಗಳು ಹೆಸರನ್ನು ನೋಂದಾಯಿಸಿಕೊಳ್ಳಲು ಬಳ್ಳಾರಿ ಜಿಲ್ಲಾ ಆಮ್ ಆದ್ಮಿ ಪಕ್ಷ ದಿಂದ ಮನವಿ ಮಾಡಿದೆ.ಪ್ರತಿ ಆರು ವರ್ಷಕ್ಕೆ ಒಮ್ಮೆ ನಡೆಯುವ ಶಿಕ್ಷಕರ ಕ್ಷೇತ್ರದಿಂದ ಪ್ರತಿನಿಧಿಯಾಗಿ ವಿಧಾನಪರಿಷತ್ತಿಗೆ ಆಯ್ಕೆಯಾಗುವ ಚುನಾವಣೆಯು ೨೦೨೬ ರಲ್ಲಿ ನಡೆಯಲಿದ್ದು, ಈಗಿರುವ ಆಧಿಸೂಚನೆಯ ಪ್ರಕಾರ ಅರ್ಹ ಶಿಕ್ಷಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ೬.೧೧.೨೦೨೫ ರವರೆಗೆ ಅವಕಾಶವಿರುತ್ತದೆ, ಬಳ್ಳಾರಿ ಮಹಾನಗರದ ವ್ಯಾಪ್ತಿಯ ಶಿಕ್ಷಕರು ಬಳ್ಳಾರಿಯ ಮಹಾನಗರ ಪಾಲಿಕೆಯ ಕಚೇರಿಯಲ್ಲಿ, ಹಾಗೂ ಕುರುಗೋಡು, ಕಂಪ್ಲಿ, ಸಿರುಗುಪ್ಪ, ಸಂಡೂರು, ಬಳ್ಳಾರಿ ತಾಲೂಕಿನ ಅರ್ಹ ಶಿಕ್ಷಕರು ಆಯಾ ತಹಸಿಲ್ದಾರರ ಕಚೇರಿಯಲ್ಲಿ ನಮೂನೆ ೧೯ ಹಾಗೂ ಅನುಬಂಧ – ೨ನ್ನು, ಸಲ್ಲಿಸುವುದರೊಂದಿಗೆ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಿಕೊಳ್ಳಬಹುದಾಗಿದೆ, ಆದ್ದರಿಂದ ಈ ಹಿಂದಿನ ಚುನಾವಣೆಗಳ ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರಿತ್ತು ಈಗ ಅದನ್ನೇ ನವೀಕರಿಸಬಹುದು ಎಂಬ ತಪ್ಪು ಗ್ರಹಿಕೆಬೇಡ, ಕಡ್ಡಾಯವಾಗಿ ಪ್ರತಿ ಆರು ವರ್ಷಕ್ಕೆ ಹೊಸ ಮತದಾರರ ಪಟ್ಟಿ ತಯಾರಿಸಲ್ಪಡುತ್ತದೆ, ಆದ್ದರಿಂದ ನಿಮ್ಮ ಸಹ ಶಿಕ್ಷಕರಿಗೂ ಸಹ ಹೆಚ್ಚಿನ ಮಟ್ಟದಲ್ಲಿ ಪ್ರಚಾರಪಡಿಸಿ, ಸುಭದ್ರ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ಸಲುವಾಗಿ ಹೆಚ್ಚಿನ ಮಟ್ಟದಲ್ಲಿ ಅರ್ಹ ಶಿಕ್ಷಕರು ಪಾಲ್ಗೊಳ್ಳಬೇಕಾಗಿ ಆಮ್ ಆದ್ಮಿ ರಾಷ್ಟ್ರೀಯ ಪಕ್ಷದ ಜಿಲ್ಲಾ ಅಧ್ಯಕ್ಷ ಜೆ.ವಿ.ಮಂಜುನಾಥ ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಟೋಲ್ ಫ್ರೀ ನಂಬರ್ ೧೯೫೦ ನ್ನು ಹಾಗೂ ಪಕ್ಷದ ಮಹಾನಗರ ಅಧ್ಯಕ್ಷ ಡಿ.ಚಕ್ರವರ್ತಿ -೯೯೮೦೯೦೯೩೩೮ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.