ತಿಕೋಟಾ,ಏ.06 : ಕಬ್ಬಿನ ತೋಟದಲ್ಲಿ ವಿದ್ಯುತ ತಂತಿ ಕಟ್ಟಾಗಿ ಬಿದ್ದು ಸ್ಪಾರ್ಕ ಸಂಭವಿಸಿ ಕಬ್ಬಿಗೆ ಬೆಂಕಿ ಹೊತ್ತಿಕೊಂಡು ಅಕ್ಕಪಕ್ಕದ ಸುಮಾರು ೩ ಎಕರೆ ಕಬ್ಬು ಸೇರಿದಂತೆ ವಿವಿಧ ಹಣ್ಣಿನ ಗಿಡ-ಮರಗಳು ಸಂಪೂರ್ಣ ಸುಟ್ಟು ಅಪಾರ ಪ್ರಮಾಣದ ನಷ್ಟವಾದ ಘಟನೆ ಶುಕ್ರವಾರದಂದು ತಿಕೊಟಾ ತಾಲೂಕಿನಲ್ಲಿ ನಡೆದಿದೆ. ತಿಕೋಟಾ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಿಕೋಟಾ ಹೋಬಳಿ ಸಿದ್ದಾಪೂರ (ಕೆ) ಭಾಗದಲ್ಲಿ ಬರುವ ಆನಂದ ಸಣ್ಣತಮ್ಮಪ್ಪ ವಿಜಾಪೂರ ಸರ್ವೆ ನಂಬರ ೩೬೫/೩ ಸುಮಾರು ೩ ಎಕರೆ ಕಬ್ಬು ಮತ್ತು ಅವಿನಾಶ ಈರಪ್ಪ ತೇಲಿ ೩೬೫/೧ ಇವರ ವಿವಿಧ ಹಣ್ಣಿನ ಮರಗಳು ಬೆಂಕಿಗೆ ಆಹುತಿಯಾಗಿವೆ. ತೋಟದಲ್ಲಿ ಬೆಂಕಿ ಹೊತ್ತಿಕೊಂಡಿದ್ದನ್ನು ಅಕ್ಕಪಕ್ಕದಲ್ಲಿದ ರೈತರು ನೋಡಿ ಮಾಲಿಕರಿಗೆ ಪೋನ ಮಾಡಿ ತಿಳಿಸಿದರು.
ತೋಟಕ್ಕೆ ಮಾಲೀಕರಾದ ಆನಂದ ಹಾಗೂ ಅವಿನಾಶ ಅವರು ಬಂದು ನೋಡುವಷ್ಟರಲ್ಲಿ ಬೆಂಕಿ ಸಾಕಷ್ಟು ಕಡೆ ಹರಡಿ ಮುಗಿಲೆತ್ತರಕ್ಕೆ ಬೆಂಕಿ ಕಾಣುತ್ತಿತ್ತು ನೇರೆದಿರುವ ರೈತರು ಹಾಗೂ ಅಗ್ನಿ ಶಾಮಕ ದಳ ಹಾಗೂ ವಿದ್ಯುತ್ ಇಲಾಖೆಯ ಅಧಿಕಾರಿಗಳು ಹಾಗೂ ತಲಾಟಿಯವರು ಕೂಡಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರೂ, ಅಷ್ಟರೊಳಗಾಗಿ ಅನಂದ ವಿಜಾಪೂರ ಇವರ ಕಬ್ಬಿನ ತೋಟ ಸುಟ್ಟು ಪಕ್ಕದ ಅವಿನಾಶ ಈರಪ್ಪ ತೇಲಿ ಅವರ ತೋಟಕ್ಕೂ ಬೆಂಕಿ ತಗುಲಿ ಅಂದಾಜು ೨೦ ಮಾವಿನ ಮರಗಳು, ೨೦ ತೆಂಗಿನ ಮರ ಸಂಪೂರ್ಣ ಸುಟ್ಟಿದ್ದು ಹಾಗೂ ೧೭೦ ದ್ರಾಕ್ಷಿ ಗಿಡಗಳು ಬೆಂಕಿಯ ಜಳದಿಂದ ಹಾನಿಗೀಡಾದ ಘಟನೆಯಿಂದ ರೈತರಿಬ್ಬರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ,