ಏಕತಾ ಮೆರವಣಿಗೆ (ಯೂನಿಟಿ ಮಾರ್ಚ್) ಮತ್ತು ನಶಾ ಮುಕ್ತ ಭಾರತ್ ಅಭಿಯಾನ” ಬಳ್ಳಾರಿಯಲ್ಲಿ ಆಯೋಜನೆ

Ravi Talawar
ಏಕತಾ ಮೆರವಣಿಗೆ (ಯೂನಿಟಿ ಮಾರ್ಚ್) ಮತ್ತು ನಶಾ ಮುಕ್ತ ಭಾರತ್ ಅಭಿಯಾನ” ಬಳ್ಳಾರಿಯಲ್ಲಿ ಆಯೋಜನೆ
WhatsApp Group Join Now
Telegram Group Join Now

ಬಳ್ಳಾರಿ, ಅಕ್ಟೋಬರ್ 31, : ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಹಾಗೂ ವ್ಯಸನಮುಕ್ತ ಭಾರತದ ಸಂದೇಶವನ್ನು ಹರಡುವ ಉದ್ದೇಶದಿಂದ ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ (ಬಿಐಟಿಎಂ), ಸಂಜಯ್ ಗಾಂಧಿ ಪಾಲಿಟೆಕ್ನಿಕ್ (ಎಸ್.ಜಿ.ಪಿ.) ಹಾಗೂ ಬಳ್ಳಾರಿ ಬಿಸಿನೆಸ್ ಕಾಲೇಜು (ಬಿಬಿಸಿ) ಸಂಯುಕ್ತವಾಗಿ “ಯೂನಿಟಿ ಮಾರ್ಚ್ ಮತ್ತು ನಶಾ ಮುಕ್ತ ಭಾರತ್ ಅಭಿಯಾನ” ಕಾರ್ಯಕ್ರಮವನ್ನು ಬಳ್ಳಾರಿಯಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮವು ಏಕತಾ ಪ್ರತಿಜ್ಞೆಯಿಂದ ಆರಂಭವಾಗಿ, ಬಳ್ಳಾರಿ ನಗರದ ಸುಧಾಕ್ರಾಸ್‌ನಿಂದ ಫೈರ್ ಆಫೀಸ್‌ವರೆಗೆ ಮುಖ್ಯ ರಸ್ತೆಗಳಲ್ಲಿ ವಿದ್ಯಾರ್ಥಿಗಳು ಏಕತಾ ಮೆರವಣಿಗೆ (ಯೂನಿಟಿ ಮಾರ್ಚ್) ನಡೆಸಿದರು. ದೇಶಭಕ್ತಿಯ ಘೋಷಣೆಗಳು ಮತ್ತು ವ್ಯಸನ ಮುಕ್ತ ಭಾರತದ ಸಂದೇಶಗಳನ್ನು ಒಳಗೊಂಡ ಫಲಕಗಳೊಂದಿಗೆ ವಿದ್ಯಾರ್ಥಿಗಳು ಸಾರಿದರು. ಸುಮಾರು 350 ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ಉತ್ಸಾಹಭರಿತವಾಗಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಯುವ ಪೀಳಿಗೆಯೇ ರಾಷ್ಟ್ರದ ಶಕ್ತಿ ಎಂಬುದನ್ನು ಉಲ್ಲೇಖಿಸಿ, ವ್ಯಸನ ಮುಕ್ತ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದೆಂದು ಘೋಷಣೆ ಮಾಡಿದರು. ವಿದ್ಯಾರ್ಥಿಗಳು ತಮ್ಮ ಕುಟುಂಬ ಹಾಗೂ ಸಮುದಾಯಗಳಲ್ಲಿ ವ್ಯಸನ ವಿರೋಧಿ ಜಾಗೃತಿಯನ್ನು ಹರಡುವಂತೆ ಪ್ರೇರೇಪಿಸಿದರು.

ಕಾರ್ಯಕ್ರಮವನ್ನು ಮೂರು ಸಂಸ್ಥೆಗಳ ವಿದ್ಯಾರ್ಥಿಗಳು ಮತ್ತು ಎನ್.ಎಸ್.ಎಸ್. ಘಟಕಗಳ ಸಂಯುಕ್ತ ಸಹಕಾರದಿಂದ, ಪ್ರಾಂಶುಪಾಲರು ಹಾಗೂ ಅಧ್ಯಾಪಕರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ದೈಹಿಕ ನಿರ್ದೇಶಕರಾದ ಅಶೋಕ್, ಲಕ್ಷಿö್ಮÃ ರೆಡ್ಡಿ, ಕಾಲೇಜಿನ ಅಧ್ಯಾಪಕರುಗಳಾದ ಸ್ನೇಹ, ಪಂಪನ ಗೌಡ, ದತ್ತಾತ್ರಯ, ಅಧೀಕ್ಷಕರಾದ ಬಸವರಾಜ್ ಬಿ, ಇತರರು ಉಪಸ್ಥಿತರಿದ್ದರು.

ಸಮಾರಂಭದ ಕೊನೆಯಲ್ಲಿ ಭಾಗವಹಿಸಿದ ಎಲ್ಲರೂ ಏಕತೆ, ಶಾಂತಿ ಮತ್ತು ವ್ಯಸನಮುಕ್ತ ಭಾರತದ ಸಂಕಲ್ಪವನ್ನು ಪುನರುಚ್ಚರಿಸಿದರು.

ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್, ಬಳ್ಳಾರಿ
(ಸಹಯೋಗದಲ್ಲಿ – ಸಂಜಯ್ ಗಾಂಧಿ ಪಾಲಿಟೆಕ್ನಿಕ್, ಬಳ್ಳಾರಿ ಮತ್ತು ಬಳ್ಳಾರಿ ವ್ಯಾಪಾರ ಕಾಲೇಜು, ಬಳ್ಳಾರಿ)

WhatsApp Group Join Now
Telegram Group Join Now
Share This Article