ಮುದ್ದೇಬಿಹಾಳ: ವಿಜಪುರ ಜಿಲ್ಲೆಯಲ್ಲಿ ಇತ್ತಿಚಿಗಷ್ಟೇ ನಡೆದ ಜಿಲ್ಲಾ ರೋಲರ್ ಸ್ಕೇಟಿಂಗ್‌ಅಸೋಶಿಯೇಷನ್‌ವತಿಯಿAದ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ಸ್ಕೇಟಿಂಗ್ ಕ್ರೀಡಾಕೂಟದಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚು ಪದಕಗಳನ್ನು ಪಡೆದುಕೊಂಡ ಮುದ್ದೇಬಿಹಾಳ ತಾಲೂಕಿನ ಏಕಲವ್ಯ ರೋರ‍್ಸ್ ಸ್ಕೇಟಿಂಗ್ ಅಕಾಡೆಮಿಯ ಕ್ರೀಡಾಪಟುಗಳಿಗೆ ಅಕಾಡೆಮಿವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜ ಸೇವಕ ಕಾಂಗ್ರೇಸ್ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ಮಾತನಾಡಿ, ಮಕ್ಕಳನ್ನು ವಿನೂತನವಾದ ಕ್ರೀಡೆಗಳಲ್ಲಿ ಭಾಗಿಯಾಗಿಸುವಲ್ಲಿ ಏಕಲವ್ಯ ರೋರ‍್ಸ್ ಸ್ಕೇಟಿಂಗ್ ಅಕಾಡೆಮಿ ಪರಿಶ್ರಮ ಸಾಕಷ್ಟಿದೆ. ಹಿಂದೆ ಕೇವಲ ಕ್ರೀಕೇಟ್, ಕಬ್ಬಡ್ಡಿ ಹಾಗೂ ಕರಾಟೆ ಕ್ರೀಡೆಗಳಲ್ಲಿ ನಮ್ಮ ಮಕ್ಕಳು ಭಾಗಿಯಾಗುವುದನ್ನು ನೋಡುತ್ತಿದ್ದೇವು. ಆದರೆ ಏಕಲವ್ಯ ರೋರ‍್ಸ್ ಸ್ಕೇಟಿಂಗ್ ಅಕಾಡೆಮಿವತಿಯಿಂದ ನಮ್ಮ ಮಕ್ಕಳಿಗೆ ಸ್ಕೇಟಿಂಗ್ ಹಾಗೂ ಏರ್‌ಗನ್ ಕ್ರೀಡೆಯಲ್ಲಿ ಭಾಗಿಯಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಇಂತಹ ಅಕಾಡೆಮಿಯನ್ನು ರಚಿಸಿರುವ ಶಿವುಕುಮಾರ ಶಾರದಳ್ಳಿ ಅವರ ಸಾಧನೆ ಅಮೋಘವಾದದ್ದು ಎಂದು ಹೇಳಿದರು.
ಸಮಾಜ ಹಿತ ಚಿಂತಕ ಅರವಿಂದ ಕೊಪ್ಪ ಮಾತನಾಡಿ, ಪಟ್ಟಣದ ಮಕ್ಕಳಲ್ಲಿ ಹೊಸದಾಗಿ ಕಲ್ಪನೆಯೊಂದಿಗೆ ಇರುವ ಅಲ್ಪಮಟ್ಟದ ಸೌಲಭ್ಯದಲ್ಲಿಯೇ ಸ್ಕೇಟಿಂಗ್ ಟ್ರೇನಿಂಗ್ ನೀಡುವಂತಹ ಕಾರ್ಯ ಏಕಲವ್ಯ ರೋರ‍್ಸ್ ಸ್ಕೇಟಿಂಗ್ ಅಕಾಡೆಮಿ ನಡೆಸುತ್ತಿದೆ. ಇಂತಹ ಅಕಾಡೆಮಿಗೆ ಸ್ಥಳೀಯ ಜನಪ್ರತಿನಿಧಿಗಳು ಇನ್ನೂ ಹೆಚ್ಚಿನ ಸೌಲಭ್ಯವನ್ನು ದೊರಕಿಸಿಕೊಟ್ಟರೆ ಮುದ್ದೇಬಿಹಾಳ ತಾಲೂಕಿನ ಪ್ರತಿಭೆಗಳನ್ನು ಹೊರ ರಾಜ್ಯ ಹಾಗೂ ದೇಶಗಳಲ್ಲಿ ಪ್ರಸಿದ್ಧಿ ಪಡಿಸುವ ಯೋಜನೆಯನ್ನು ಅಕಾಡೆಮಿಯ ದಕ್ಷ ತರಬೇತುದಾರ ಶಾರದಳ್ಳಿ ಅವರು ಹೊಂದಿದ್ದು ಇದಕ್ಕೆ ಸ್ಥಳೀಯರೆಲ್ಲರೂ ಕೈಜೋಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಕಾಂಗ್ರೇಸ್ ಎಸ್.ಸಿ ಮೋರ್ಚಾಧ್ಯಕ್ಷ ಶ್ರೀಕಾಂತ ಚಲವಾದಿ, ಮುಖಂಡ ಮಹಾಂತೇಶ ಬೂದಿಹಾಳಮಠ, ವಕೀಲರಾದ ಎಂ.ಆರ್.ಪಾಟೀಲ ಸೇರಿದಂತೆ ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸ್ಕೇಟಿಂಗ್ ಕ್ರೀಡಾ ವಿಜೇತರಿಗೆ ಸನ್ಮಾನ:
ಮುದ್ದೇಬಿಹಾಳ ತಾಲೂಕಿನ ಬಿಎಎಸ್ ಅಂತರಾಷ್ಟಿçÃಯ ಶಾಲೆಯ 10 ವಿದ್ಯಾರ್ಥಿಗಳಿಗೆ, ಎಂ.ಆರ್.ಇ.ಎA ಶಾಲೆಯ 9 ವಿದ್ಯಾರ್ಥಿಗಳಿಗೆ, ಮುದ್ದೇಬಿಹಾಳ ಆಕ್ಸ್ಫರ್ಡ ಪಾಟೀಲ ಶಾಲೆಯ 3 ವಿದ್ಯಾರ್ಥಿಗಳಿಗೆ, ಪ್ರಾರ್ಥನಾ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ, ನ್ಯೂ ಬ್ರಿಲಿಯಂಟ್ ಶಾಲೆ, ಬಿ.ಎಸ್. ಸೆಂಟ್ರಲ್ ಸ್ಕೂಲ್, ಚಿನ್ಮಯ ಜೆ.ಸಿ. ಶಾಲೆ, ಸಂತ ಕನಕದಾಸ ಶಾಲೆಯ ಹಾಗೂ ಆಕ್ಸ್ಫರ್ಡ ನಾಗರಬೆಟ್ಟ ಶಾಲೆ ತಲಾ ಓರ್ವ ಸೇರಿ ನಾಲ್ಕು ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
“ಈಗಾಗಲೇ ಏಕಲವ್ಯ ರೋರ‍್ಸ್ ಸ್ಕೇಟಿಂಗ್ ಅಕಾಡೆಮಿ ಮುಖ್ಯಸ್ಥ ಶಿವು ಶಾರದಳ್ಳಿ ಅವರಿಗೆ ಸ್ಥಳೀಯ ಪುರಸಭೆಗೆ ತಮ್ಮ ಅಕಾಡೆಮಿವತಿಯಿಂದ ಅಗತ್ಯವಿರುವ ಮೈದಾನ ಮಂಜೂರಾತಿಗೆ ಮನವಿ ಸಲ್ಲಿಸಲು ತಿಳಿಸಿದ್ದೇನೆ. ಅದನ್ನು ಕೂಡಲೇ ಸ್ಥಳೀಯ ಜನಪ್ರತಿನಿಧಗಳ ಗಮನಕ್ಕೆತಂದು ಅಕಾಡೆಮಿಗೆ ಬೇಕಾದ ಮೈದಾನದ ಸೌಲಭ್ಯವನ್ನು ಕಲ್ಪಿಸಿಕೊಡಲಾಗುವುದು.”
-ಗುರು ತಾರನಾಳ, ಅಧ್ಯಕ್ಷರು, ತಾಲೂಕಾ ಬ್ಲಾಕ್ ಕಾಂಗ್ರೇಸ್,ಮುದ್ದೇಬಿಹಾಳ.


