ಬಳ್ಳಾರಿ, ಜುಲೈ 1, ಬಳ್ಳಾರಿ ಸೇವಾ ಸಮಿತಿವತಿ ಯಿಂದ ಈ ದಿನದಂದು ಬಳ್ಳಾರಿ ನಗರದ ಡಿ.ಸಿ. ಕಾಲೋನಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂದ್ರಾಳ ರಾಮನಗರ ಶಾಲೆ, ವಿಜಯಪುರ ಕ್ಯಾಂಪ್ ಮೂರು ಶಾಲೆಗಳಿಗೆ ಶೈಕ್ಷಣಿಕ ಸಾಮಾಗ್ರಿ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಯಶವಂತರಾಜ್ ನಾಗಿರೆಡ್ಡಿ ಅವರು ನೆರವೇರಿಸಿದರು.
ಕಾರ್ಯಕ್ರಮದ ಅಂಗವಾಗಿ ಶಾಲೆಯ 250 ವಿದ್ಯಾರ್ಥಿಗಳಿಗೆ ಒಂದು ವರ್ಷದ ಅಗತ್ಯವಿರುವ ನೋಟಪುಸ್ತಕ, ಪೆನ್, ಪೆನ್ಸಿಲ್, ರಬ್ಬರ್, ಡ್ರಾಯಿಂಗ್ ಪುಸ್ತಕ, ಕಂಪಾಸ್ ಬಾಕ್ಸ್, ಎರೇಜರ್, ಶಾರ್ಪ್ನರ್, ಸ್ಕೆಚ್ ಪೆನ್, ಸ್ಕೇಲ್, ಬಳಪ ಹಾಗೂ ಶಾಲಾ ಬ್ಯಾಗ್ ಸೇರಿದಂತೆ ವಿವಿಧ ಶೈಕ್ಷಣಿಕ ಪ್ರೋತ್ಸಾಹದಾಯಕ ಕಲಿಕಾ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಿಡಿಸಿಸಿ&ಐ ಮಾಜಿ ಅಧ್ಯಕ್ಷರಾದ ಡಾ. ರಮೇಶ್ ಗೋಪಾಲ್ ಮಾತನಾಡಿ, ಮಕ್ಕಳಿಗೆ ದೇಶಭಕ್ತ ಭಗತ್ ಸಿಂಗ್ ರವರ ಸಾಹಸ ಕಥೆಗಳನ್ನು ಬೋಧಿಸಿ, ಅವರಂತೆ ಸಾಹಸಿಗಳಾಗುವಂತೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಶ್ರೀ ಜೆ.ಸಿ. ನಾಗೇಶ, ಬಳ್ಳಾರಿ ಸೇವಾ ಸಮಿತಿ ಅಧ್ಯಕ್ಷರಾದ ಶ್ರೀ ಸುರೇಂದ್ರ ಕುಮಾರ್ ಭಪ್ನಾ, ಬಳ್ಳಾರಿ ಸೇವಾ ಸಮಿತಿ ಕಾರ್ಯದರ್ಶಿಗಳಾದ, ಶ್ರೀ ವಿ. ರಾಮಚಂದ್ರ, ಕಿರಾಣಿ ಅಂಗಡಿಯ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ವೀರಾಂಜಿನೇಯಲು, ಬಿ.ಎಸ್.ಎಸ್ ಮಾಜಿ ಅಧ್ಯಕ್ಷರಾದ ಶ್ರೀ ಸತ್ಯನಾರಾಯಣ, ಶಾಲೆಯ ಮುಖ್ಯ ಗುರುಗಳಾದ, ತಿಪ್ಪೆಸ್ವಾಮಿ ಹಾಗೂ ಎಲ್ಲಾ ಸಹ ಶಿಕ್ಷಕರು ಉಪಸ್ಥಿತರಿದ್ದರು.