ಶೈಕ್ಷಣಿಕ ಲೇಖನ: ಮಗುವಿನ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕಾಗಿ ಕಲಿಕಾ ಬಲವರ್ಧನ-2024

Ravi Talawar
ಶೈಕ್ಷಣಿಕ ಲೇಖನ: ಮಗುವಿನ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕಾಗಿ ಕಲಿಕಾ ಬಲವರ್ಧನ-2024
WhatsApp Group Join Now
Telegram Group Join Now

ಕಲಿಕೆ ಮತ್ತು ಬೋಧನೆಯು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ, ಸುಗಮಕಾರರಾದ ಶಿಕ್ಷಕರು ಮಕ್ಕಳ ಮನೋ ಸಾಮರ್ಥ್ಯ ಹಾಗೂ ಕಲಿಕಾ ಸಾಮರ್ಥ್ಯಗಳ ಆಧಾರದ ಮೇಲೆ ಪಠ್ಯದ ವಿಷಯವನ್ನು ಅರ್ಥೈಸಿ ಕೊಡುವುದು ಸುಲಭದ ಮಾತಲ್ಲ. ಬೋಧನೆ ಮತ್ತು ಕಲಿಕಾ ಪ್ರಕ್ರಿಯ ಸಂಕೀರ್ಣತೆಯನ್ನು ಹೋಗಲಾಡಿಸುವುದು ಬೋಧನೆಯನ್ನು ಅತ್ಯಂತ ಆಸಕ್ತಿದಾಯಕವಾಗಿ ಮಾಡುವುದು, ಕಲಿಕೆಯನ್ನು ಸಂತಸದಾಯಕವಾಗಿ ಮಾಡುವುದು ಸುಗಮಕಾರರಿಗೆ ಅತ್ಯಂತ ಜವಾಬ್ದಾರಿಯುತವಾದ ಕಾರ್ಯವಾಗಿದೆ.

ಈ ಸಂದರ್ಭದಲ್ಲಿ 2024-25ನೇ ಶೈಕ್ಷಣಿಕ ವರ್ಷವನ್ನು ಕಲಿಕಾ ಬಲವರ್ಧನ ವರ್ಷವನ್ನಾಗಿ ಆಚರಣೆ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ, ಇಲ್ಲಿ ಗುಣಮಟ್ಟದ ಬೋಧನೆ ಮಕ್ಕಳ ಕಲಿಕೆ ಹಾಗೂ ತಾಂತ್ರಿಕ ವಿಚಾರಗಳ ಅನ್ವಯ ಮಾಡಿಕೊಳ್ಳುವುದರ ಜೊತೆಗೆ ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿಕೊಟ್ಟಿದೆ.

ನಲಿ-ಕಲಿಯಿಂದ ಪ್ರಾರಂಭವಾಗಿ ಉನ್ನತ ವರ್ಗಗಳ ವಿದ್ಯಾರ್ಥಿಗಳಿಗೆ ಕೇವಲ ಒಂದೇ ಭಾಷೆ ಹಾಗೂ ವಿಷಯವನ್ನು ಏಕಾಂಗಿಯಾಗಿ ಕಲಿಸುವುದು ಆಸಕ್ತಿದಾಯಕವಾದ ಕಲಿಕೆಯಾಗುವುದಿಲ್ಲ ಅದು ಕೇವಲ ತಾಂತ್ರಿಕ ಕಲಿಕೆಯಾಗುತ್ತದೆ ಯಾವಾಗ ಮಗುವಿನ ಮನಸ್ಸು ಆಸಕ್ತಿಯಿಂದ ಕಲಿಯುವ ಮನೋಭಾವ ಹೊಂದುತ್ತದೆಯೋ ಆವಾಗ ಅಲ್ಲಿ ಸುಗಮಕಾರರು ಹೊಸ ಹೊಸ ಅವಕಾಶಗಳನ್ನು ನಿರ್ಮಾಣ ಮಾಡಿಕೊಂಡು ಪ್ರತಿಶತ ನೂರರಷ್ಟು ವಿದ್ಯಾರ್ಥಿಗಳು ಮಾನಸಿಕವಾಗಿ ಪಾಲ್ಗೊಳ್ಳುವಂತೆ ಮಾಡಿದಾಗ ಸಾಮರ್ಥ್ಯ ಗಳಿಕೆಯಾಗುವಲ್ಲಿ ಪೂರ್ಣತೆ ಹೊಂದುತ್ತದೆ 1 2 3ನೇ ತರಗತಿಗೆ ಸಂಬಂಧಿಸಿದಂತೆ ಕೇವಲ ಒಂದು ಕಥೆಯನ್ನು ಹೇಳುವುದರ ಮೂಲಕ ವಿವಿಧ ವಿಷಯಗಳ ಕಲ್ಪನೆಯನ್ನು ಮಕ್ಕಳಿಗೆ ಕೊಡಲು ಸಾಧ್ಯವಿದೆ ಉದಾಹರಣೆಗೆ : ನಮ್ಮೆಲ್ಲರಿಗೆ ತಿಳಿದಿರುವ ಆಮೆ ಮತ್ತು ಮೊಲದ ಕಥೆ ಬಹಳ ಹಿಂದೆಯೇ, ಕಾಡಿನಲ್ಲಿ ಮೊಲವೊಂದು ವಾಸಿಸುತ್ತಿತ್ತು, ಅದು ಯಾವಾಗಲೂ ತನ್ನ ಓಟದ ವೇಗದ ಬಗ್ಗೆ ಹೆಮ್ಮೆಪಡುತ್ತದೆ. ಮೊಲ ಆಗಾಗ್ಗೆ ಆಮೆಯನ್ನು ನಿಧಾನವಾದ ಪ್ರಾಣಿ ಎಂದು ಕೀಟಲೆ ಮಾಡುತಿತ್ತು. ಒಂದು ಒಳ್ಳೆಯ ದಿನ, ಕಾಡಿನಲ್ಲಿ ಇತರ ಪ್ರಾಣಿಗಳ ಮುಂದೆ ತನ್ನ ಕೌಶಲ್ಯವನ್ನು ಪ್ರದರ್ಶಿಸುವ ಸಲುವಾಗಿ ಮೊಲ ಆಮೆಯನ್ನು ಓಟಕ್ಕೆ ಓಡಿಸಿದನು. ಮೊಲದ ಬಡಾಯಿಯಿಂದ ಬೇಸತ್ತ ಆಮೆ ಅಂತಿಮವಾಗಿ ಸವಾಲನ್ನು ಸ್ವೀಕರಿಸಿತು ಮತ್ತು ಓಟದಲ್ಲಿ ಸ್ಪರ್ಧಿಸಲು ನಿರ್ಧರಿಸಿತು.

ಓಟದ ದಿನದಂದು ಮೊಲ ಮತ್ತು ಆಮೆಯ ನಡುವಿನ ಸ್ಪರ್ಧೆಯನ್ನು ನೋಡಲು ಕಾಡಿನ ಎಲ್ಲಾ ಪ್ರಾಣಿಗಳು ಸೇರಿದ್ದವು. ಓಟವು ಒಂದು, ಎರಡು ಮತ್ತು ಮೂರು ಎಣಿಕೆಯಲ್ಲಿ ಪ್ರಾರಂಭವಾಯಿತು! ಮೊಲವು ತಕ್ಷಣವೇ ಓಡಲು ಪ್ರಾರಂಭಿಸಿತು ಮತ್ತು ಆಮೆ ತನ್ನ ಎಂದಿನ ನಿಧಾನಗತಿಯಲ್ಲಿ ಪ್ರಾರಂಭಿಸಿತು. ಶೀಘ್ರದಲ್ಲೇ ಮೊಲವು ಅಂತಿಮ ಗೆರೆಯಿಂದ ಸುಮಾರು ಕೆಲವು ಗಜಗಳಷ್ಟು ದೂರವನ್ನು ತಲುಪಿತು. ಆಮೆ ಹತ್ತಿರದಲ್ಲಿ ಎಲ್ಲಿಯಾದರೂ ಇದೆಯೇ ಎಂದು ಪರಿಶೀಲಿಸಲು
ಮೊಲ ಹಿಂತಿರುಗಿ ನೋಡಿತು. ಆದರೆ, ಆಮೆ ಬಹಳ ಹಿಂದೆಯೇ ಉಳಿದುಕೊಂಡಿದ್ದು, ಬಹುತೇಕ ಕಾಣಿಸಲಿಲ್ಲ .ಮೊಲ ಓಟವನ್ನು ಪೂರ್ಣಗೊಳಿಸುವ ಮೊದಲು ದಾರಿಯಲ್ಲಿ ಸ್ವಲ್ಪ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿತು. ಸಮಯ ಕಳೆದುಹೋಯಿತು ಮತ್ತು ಮೊಲ ಇದ್ದಕ್ಕಿದ್ದಂತೆ ಎಚ್ಚರವಾದಾಗ ಸೂರ್ಯ ಆಗಲೇ ಅಸ್ತಮಿಸುತ್ತಿದ್ದ. ಆಮೆ ಸುತ್ತಲೂ ಇದೆಯೇ ಎಂದು ಪರೀಕ್ಷಿಸಿತು. ಆಮೆಯನ್ನು ಅಂತಿಮ ಗೆರೆಯ ಸಮೀಪದಲ್ಲಿ ನೋಡಿದ ಮೊಲವು ಸಾಧ್ಯವಾದಷ್ಟು ವೇಗವಾಗಿ ಅದರ ಕಡೆಗೆ ಧಾವಿಸಿತು.ಆದಾಗ್ಯೂ, ಇದು ತುಂಬಾ ತಡವಾಗಿತ್ತು ಮತ್ತು ಅಂತಿಮವಾಗಿ ಆಮೆ ಅಂತಿಮ ಗೆರೆಯನ್ನು ದಾಟಿತು, ಆ ಮೂಲಕ ಸ್ಪರ್ಧೆಯನ್ನು
ಗೆದ್ದಿತು.

ಮೊಲ ಓಟ ಮುಗಿಯುವ ಹಂತಕ್ಕೆ ಬಂದಾಗ, ಆಮೆಗೆ ಓಟದಲ್ಲಿ ಸೋತಿದ್ದಕ್ಕಾಗಿ ಪ್ರಾಣಿಗಳೆಲ್ಲವೂ ಅವನನ್ನು ನೋಡಿ  ನಗುತ್ತಿದ್ದವು. ಆ ದಿನ, ಯಾವುದೋ ಒಂದು ವಿಷಯದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವುದು ನಿಮಗೆ ಪುರಸ್ಕಾರಗಳನ್ನು ಗಳಿಸುವುದಿಲ್ಲ, ಆದ್ದರಿಂದ ನೀವು ಇತರರನ್ನು ಅವರ ಸ್ವಂತ ವೇಗಕ್ಕಾಗಿ ಎಂದಿಗೂ ಅಪಹಾಸ್ಯ ಮಾಡಬಾರದು ಎಂಬ ಪಾಠವನ್ನು ಕಲಿತರು.* ಆಮೆ ಮತ್ತು ಮೊಲ ಇವು ಎರಡಕ್ಷರದ ಸರಳ ಪದಗಳು ಈ ಪದಗಳನ್ನು ಬರೆಯಲು ಹೇಳುವುದು, ಓದಿಸುವುದು, ಈ ಪದಗಳನ್ನು ವಿದ್ಯಾರ್ಥಿಗಳಿಂದ ಹೇಳಿಸುವುದು ಸುಗಮಕಾರರು ವಿದ್ಯಾರ್ಥಿಗಳ ಮುಂದೆ ಈ ಶಬ್ದಗಳನ್ನು ಜೋರಾಗಿ
ಸ್ವರಭರಿತವಾಗಿ ಉಚ್ಚಾರಣೆ ಮಕ್ಕಳಿಗೆ ಭಾಷಾ ಪದಗಳನ್ನು ಪರಿಚಯ ಮಾಡಿಕೊಳ್ಳುವುದರ ಮೂಲಕ ಕನ್ನಡ ಪದಗಳ ಕಲ್ಪನೆಯನ್ನು ಮೂಡಿಸಲು ಸರಳವಾಗಿದೆ.

* ಈ ಕಥೆಯನ್ನು ಸ್ಪಷ್ಟ ಉಚ್ಚಾರಣೆಯೊಂದಿಗೆ ಹಾವಭಾವದೊಂದಿಗೆ ಆಸಕ್ತಿದಾಯಕವಾಗಿ ಈ ಕಥೆಯನ್ನು ಹೇಳುವುದರ ಮೂಲಕ ವಿದ್ಯಾರ್ಥಿಗಳ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಿದೆ ಹಾಗೂ ಹೀಗೆ ಹೇಳುವುದರಿಂದ ವಿದ್ಯಾರ್ಥಿಗಳು ಸಹಜವಾಗಿ ಈ ಕುರಿತು ಆಕರ್ಷಕರಾಗಿ ಕುತೂಹಲಗೊಂಡು ಸಂಪೂರ್ಣವಾಗಿ ಆಲಿಸಿಕೊಂಡಾಗ ಏಕಾಗ್ರತ ಸಾಮರ್ಥ್ಯ ಬೆಳೆದಿರುತ್ತದೆ .

* ಈ ಕಥೆಯ ವಿವರ ಕೊಡುವಾಗ ಸಹಜವಾಗಿ ವಿದ್ಯಾರ್ಥಿಗಳು ಕುತೂಹಲರಾಗಿ ಆಲೋಚನರಾಗಿ ವಿವರವನ್ನು ಗಮನವಿಟ್ಟು ಕೇಳಿಸಿಕೊಳ್ಳುವುದರಿಂದ ಬೌದ್ಧಿಕ ವಿಚಾರಣಾ ಆಲೋಚನಾ ಸಾಮರ್ಥ್ಯ ಬೆಳವಣಿಗೆ ಆಗುತ್ತದೆ.

* ಈ ಈ ಕಥೆಯನ್ನು ವಿವರಿಸುವಾಗ ಹೊಸ ಪದಗಳು ಕಾಣಿಸಿಕೊಳ್ಳುತ್ತವೆ ಉದಾಹರಣೆಗೆ : ನಿಧಾನ, ವೇಗ, ಪ್ರಾಣಿ, ಓಟ, ಸ್ಪರ್ಧೆ ಮತ್ತು ಅಪಹಾಸ್ಯ, ಈ ಪದಗಳನ್ನು ವಿಷಯವಾರು ವಿದ್ಯಾರ್ಥಿಗಳಿಗೆ ಕಲ್ಪನೆ ಮೂಡಿಸಲು ಸಾಧ್ಯವಿದೆ ನಿಧಾನ ಮತ್ತು ವೇಗ ವಿರುದ್ಧ ಪದಗಳು ಹಾಗೂ ವಿಜ್ಞಾನಕ್ಕೆ ಸಂಬಂಧಿಸಿದ ಪದಗಳು ಪ್ರಾಣಿ ಪರಿಸರಕ್ಕೆ ಸಂಬಂಧಿಸಿದ ಪದ ಓಟ ಮತ್ತು ಸ್ಪರ್ಧೆ ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದ ಪದಗಳು ಅಪಹಾಸ್ಯ ಕನ್ನಡ ಭಾಷಾ ಪದ
ಹೀಗೆ ವಿವಿಧ ಪದಗಳನ್ನು ಇನ್ನೂ ದೀರ್ಘವಾಗಿ ಆಲೋಚನೆ ಮಾಡುವ ಸಾಮರ್ಥ್ಯದೊಂದಿಗೆ ಮಕ್ಕಳಿಗೆ ಬೋಧಿಸಿದಾಗ ಇಲ್ಲಿ ಒಂದೇ ಕಥೆಯಲ್ಲಿ ವಿವಿಧ ವಿಷಯಗಳನ್ನು ಬಲವರ್ಧನೆ ಮಾಡಲು ಅವಕಾಶ ಸಿಗುತ್ತದೆ.

ವಿದ್ಯಾರ್ಥಿಗಳು ಕಥೆ ಕೇಳುವುದು ಅಂದರೆ ತುಂಬಾ ಇಷ್ಟ ಪಡುತ್ತಾರೆ ಸುಗಮಕಾರರು ಕಥೆಯನ್ನು ಹೇಳುವಾಗ ವಿದ್ಯಾರ್ಥಿಗಳು ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಾರೆ ಕೇಳಿದ ಕಥೆಯನ್ನು ಕುತೂಹಲ ಭರಿತರಾಗಿ ಓದುತ್ತಾರೆ ಓದಿದ ಕಥೆಯನ್ನು ಶುದ್ಧ ಬರಹದೊಂದಿಗೆ ಬರೆಯುತ್ತಾರೆ. ಮೊಲ ಮತ್ತು ಆಮೆ ಎರಡು ಪ್ರಾಣಿಗಳು ಎರಡು ಎಂಬ ಪದ ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ಬರುತ್ತದೆ ಅದರಲ್ಲೂ ಮುಂದುವರೆದು ಆಮೆಗೆ ನಾಲ್ಕು ಕಾಲುಗಳು ಎರಡು ಕಣ್ಣುಗಳು ಒಂದು ಬಾಲ ಹಾಗೆಯೇ ಮೂಲಕ್ಕೆ ನಾಲ್ಕು ಕಾಲುಗಳು ಎರಡು  ಕಣ್ಣುಗಳು ಕಿವಿಗಳು ಬಾಲ ಒಂದು ವಿವರಿಸುವಾಗ ಮಕ್ಕಳಿಗೆ ಅಂಕಿಗಳ ಕಲ್ಪನೆ ಮೂಡುತ್ತದೆ.

ಹೀಗೆ ಒಂದು ಕಥೆಯನ್ನ ಪ್ರಸ್ತುತಪಡಿಸುವುದರ ಮೂಲಕ (ಒಂದು ವಿಷಯವನ್ನು ಪ್ರಸ್ತುತಪಡಿಸುವುದರ ಮೂಲಕ ) ಸುಗಮ ಕಾರು ವಿಷಯವನ್ನು ಸಂದರ್ಭಕ್ಕನುಗುಣವಾಗಿ ಇತರ ವಿಷಯದೊಂದಿಗೆ ಸಂಬಂಧಿಕರಿಸಿಕೊಂಡು ಕಲಿಕೆಯನ್ನು ಆಸಕ್ತಿದಾಯಕ ಮಾಡಿದರೆ ಕಲಿಕೆ ಬಲವರ್ಧನೆ ಆಗುವಲ್ಲಿ ಸಂಶಯವಿಲ್ಲ.

♦ ಸೋಮಲಿಂಗಪ್ಪ ಮಹದೇವಪ್ಪ ತಿರಕಣ್ಣವರ
ಸಹ ಶಿಕ್ಷಕರು ಸ.ಹಿ.ಪ್ರಾ.ಶಾಲೆ ಸಿದ್ದಸಮುದ್ರ
ತಾಲೂಕ : ಬೈಲಹೊಂಗಲ ಜಿಲ್ಲಾ : ಬೆಳಗಾವಿ
ಮೋ: 9741529218

 

WhatsApp Group Join Now
Telegram Group Join Now
Share This Article