ಎಂ.ಕೆ. ಹುಬ್ಬಳ್ಳಿ:ಒಬ್ಬ ವ್ಯಕ್ತಿಯ ನಡತೆ, ಕೌಶಲ್ಯ, ಭವಿಷ್ಯನ್ನು ರೂಪಿಸುವ ಶಿಕ್ಷಕ ವೃತ್ತಿ ತುಂಬಾ ಶ್ರೇಷ್ಠವಾದದ್ದು ಎಂದು ಎಪಿಜೆ ಅಬ್ದುಲ್ ಕಲಾಂರವರು ಹೇಳಿದ ವಾಕ್ಯ ದಿವಂಗತ ನಿವೃತ್ತ ಮುಖ್ಯ ಶಿಕ್ಷಕರು ಹಾಗೂ ಸಂಗೀತ ವಿದ್ವಾಂಸ ಡಿ. ಪಿ. ಹಿರೇಮಠ ಅವರಿಗೆ ಸಲ್ಲುವುದು.
ಹೌದು,ಶಿಕ್ಷಕ ವೃತ್ತಿಯೊಂದಿಗೆ ಶರಣ ಸಂಸ್ಕೃತಿ ಹಾಗೂ ಸಂಗೀತ ಶಿಕ್ಷಣವನ್ನು ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನ ಧಾರೆ ಎರೆದು ವಿದ್ಯಾರ್ಥಿಗಳ ಸರ್ವಾಗಿನ ಬೆಳವಣಿಗೆಗೆ ಶ್ರೇಮಿಸುವ ಮೂಲಕ ಅನೇಕ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿ ತಮ್ಮ ವೃತ್ತಿ ಜೀವನಕ್ಕೆ ಬೆಳಕ್ಕಾಗಿ, ತಮ್ಮ ಸಾರ್ಥಕ ಜೀವನ ಸಾಗಿಸಿವದರೊಂದಿಗೆ ಮಾದರಿಯಾಗಿ ಅನೇಕ ಕುಟುಂಬಗಳಿಗೆ ದಾರಿ ದೀಪವಾಗಿದರು.
ಪಶ್ಚಿಮ ಘಟ್ಟ (ಸಹ್ಯಾದ್ರಿ ಪರ್ವತ ಶ್ರೇಣಿ ) ಯ ಪ್ರಕೃತಿ ಸೌಂದರ್ಯದಿಂದ ಕೂಡಿದ ಖಾನಾಪೂರ ತಾಲೂಕಿನ ಹಿರೇಮುನವಳ್ಳಿ ಗ್ರಾಮದಲ್ಲಿ ನೀಲವ್ವ, ಪಡದಯ್ಯ ದಂಪತಿಗಳ ಉದರದಲ್ಲಿ 10 ಆಗಷ್ಟ 1925 ರಲ್ಲಿ ಸಂಗೀತ ವಿದ್ವಾಂಸ ದುಂಡಯ್ಯ ಹಿರೇಮಠರವರು ಜನಿಸಿದರು. ಪ್ರಾಥಮಿಕ ಶಿಕ್ಷಣ ಗ್ರಾಮದಲ್ಲಿ ಮುಗಿಸಿ ಮಾಧ್ಯಮಿಕ ಶಿಕ್ಷಣ ಬೈಲಹೊಂಗಲನ ತಾಲೂಕಿನನಾಗನೂರ ಗ್ರಾಮದಲ್ಲಿ ಪಡೆದು, ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯಲ್ಲಿ ಟಿಸಿಎಚ್ ಶಿಕ್ಷಣ ಮುಗಿಸಿ 1946 ರಲ್ಲಿ ಗಡಿ ಭಾಗದ ಅಥಣಿ ತಾಲೂಕಿನ ಚಿಕ್ಕ ಪಡಸಗಿಯಲ್ಲಿ ಶಿಕ್ಷಕರಾಗಿ ತಮ್ಮಶಿಕ್ಷಕ ವೃತ್ತಿ ಪ್ರಾರಂಭಿಸಿದ ಇವರು ಕಣಬರಗಿ, ಗಂದಿಗವಾಡ, ಖಾನಾಪೂರ, ಕಾದರವಳ್ಳಿ, ದೇವಲತ್ತಿ, ನಂದಗಡದಲ್ಲಿಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ ಎಂ.ಕೆ.ಹುಬ್ಬಳ್ಳಿಯಲ್ಲಿ ಮುಖ್ಯ ಶಿಕ್ಷಕರಾಗಿ ಹತ್ತು ವರ್ಷ ಸೇವೆ ಸಲ್ಲಿಸಿದರು.
ಈ ಶಿಕ್ಷಕ ವೃತ್ತಿಯ ಜೊತೆ ಬದುಕಿನಲ್ಲಿ ಮತ್ತೆ ಏನ್ನಾದರೂ ಸಾಧಿಸಬೇಕು ಎಂದು ಫನತೊಟ್ಟ ಇವರು ಕಾದರವಳ್ಳಿಯ ಅಪ್ಪಯ್ಯ ಶಿವಯೋಗಿಗಳವರ ಆಶೀರ್ವಾದ ಪಡೆದು, ಸಂಗೀತದ ಕಡೆಗೆ ಆಸಕ್ತಿ ತೋರಿ ಗಂದಿಗವಾಡದ ಸೋಮಪ್ಪ ಭಗವಾನದಾಸ, ಉಲ್ಲಿ ಪ್ರಧಾನ, ಮಹಾಂತಯ್ಯ ಹಿರೇಮಠ ಹಾಗೂ ಕಿತ್ತೂರಿನಮೊಸಳೆಯವರಿಂದ ಸಂಗೀತ ವಿದ್ಯೆಯನ್ನು ಕಲಿತು ವೃತ್ತಿಯೊಂದಿಗೆ ವಿಶಾರದ ಪರೀಕ್ಷೆ
ಪಾಸಾದರು. ಕುರಗುಂದದ ಶಿವಾನಂದಸ್ವಾಮಿಜಿಯವರೊಂದಿಗೆ ಕುಡಿ ಶಾಲೆ ಶಾಲೆಗೆ ತೆರಳಿ ವಿದ್ಯಾರ್ಥಿಗಳಿಗೆ ಸಂಗೀತ ಹಾಗೂ ಆರೋಗ್ಯ ಶಿಕ್ಷಣ ನೀಡಿದರು. ಸಂಗೀತ ಶಾಸ್ತ್ರ ಶಿಕ್ಷಕರಾಗಿ ರಾಷ್ಟೀಯ ಸಂಗೀತ ವಿದ್ಯಾಲಯದಲ್ಲಿ ಅನೇಕವಿದ್ಯಾರ್ಥಿಗಳಿಗೆ ಸಂಗೀತ ವಿದ್ಯಾಭ್ಯಾಸ ನೀಡುವಲ್ಲಿ ಯಶಸ್ವಿಯಾದರು.
ಮದ್ರಾಸಿಗೆ ಪಯಣ: ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿ ತಮ್ಮಲ್ಲಿ ಇರುವ ಕಲೆಯನ್ನು ನಾಡಿನ ಹತ್ತಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಿಸಲು ಹವಣಿಸಿದ ಇವರು ತಮ್ಮ ಶಿಷ್ಯರಾದ ಚಲನ ಚಿತ್ರದಲ್ಲಿ ಹಿನ್ನೆಲೆ ಶಹನಾಯಿ ವಾದ್ಯ ಸಂಗೀತಗಾರ ಬಾಳೇಶ ಭಜಂತ್ರಿ ಹಾಗೂ ವಿರೇಶ್ವರ ಮಾದ್ರಿ ಸಹಕಾರದೊಂದಿಗೆ ಮದ್ರಾಸಿನಲ್ಲಿ ಗುರು ಪಂಚಾಕ್ಷರ ಸಂಗೀತ ಪಾಠ ಶಾಲೆ ಪ್ರಾರಂಭಿಸಿರು. ಅದು ಅಲ್ಲದೆ ಬಸೇಂಟ ನಗರ ಅಡಿಯಾರ ವಾಲ್ ಸರ್ ವಾಕಂ ಇಲ್ಲಿಯೂ ಸಂಗೀತ ತರಗತಿಗಳನ್ನು ಪ್ರಾರಂಭಿಸಿದರು.
ವರ ನಟ ಡಾ.ರಾಜಕುಮಾರ, ಗಾನಯೋಗಿ ಪುಟ್ಟರಾಜ ಗವಾಯಿಗಳು ಹಿರೇಮಠರ ಸಂಗೀತ ಶಾಲೆಗೆ ಭೆಟ್ಟಿ ನೀಡಿ ಪ್ರಶಂಸೆ ವ್ಯಕ್ತ ಪಡಿಸಿದ್ದರು.ಮದ್ರಾಸಿನ ಸಂಗೀತ ಶಾಲೆಯಲ್ಲಿ 52 ಹಾಗು ಕೇರಳದ ತಿರುವನಂತಪುರದ ತಾನಸೇನಸುರಸಂಗಮ ಸಂಸ್ಥೆಯ ಸಹಯೋಗದಲ್ಲಿ 21 ವಿದ್ಯಾರ್ಥಿಗಳು ಸಂಗೀತ ಜ್ಞಾನಪಡೆದವರಾಗಿರುತ್ತಾರೆ. ಇವರ ಬಳಿ ಸಂಗೀತ ಕಲಿತ ವಿದ್ಯಾರ್ಥಿಗಳಾದ ವಾದ್ಯ ವಾದಕ ಎಲ್.ಮನೋಹರ, ಹಿನ್ನೆಲೆ ಗಾಯಕಿ ರಾಣಿ, ವಿಜಯಲಕ್ಷ್ಮಿಂ ಕ್ಯಾಸಿಯೋ ವಾದಕ ರಮೇಶ ರಾಜಾ, ರಾಗಸಂಯೋಜನೆಯಲ್ಲಿ ಖ್ಯಾತಿ ಪಡೆದ ಪೋನಂ ಫಿಲಿಪ್ಸ, ವಯಲಿನವಾದಕ ರವಿ ಪಂಚಾಕ್ಷರಿ, ಸೀತಾರ
ವಾದಕ ಎಚ್.ಈಶ್ವರ ರಾವ, ದೇವೇಂದ್ರ ಕುಮಾರ, ಹಿನ್ನೆಲೆ ಗಾಯಕಿ ಜಯಪ್ರದಾ ರೇಡಿಯೋಸ್ಟಾರ್ ಉಪೇಂದ್ರ ಕುಮಾರ ಇನ್ನೂ ಅನೇಕರು ಮದ್ರಾಸ್ ಫಿಲ್ಮಂ ಇಂಡಸ್ಟಿçಸ್‌ನಲ್ಲಿ ಸಾಕಷ್ಟು
ಹೆಸರು ಮಾಡಿದ್ದಾರೆ. ತಮಿಳು ನಾಡಿನಲ್ಲಿ ಅನೇಕ ಪ್ರತಿಷ್ಟಿತ ಪ್ರಶಸ್ತಿ ಪುರಸ್ಕಾರಗಳು ಹಿರೇಮಠ ಅವರ ಮೂಡಿಗೆರಿವೆ ಇದರಿಂದ ಕನ್ನಡಿಗರಿಗೆಅದರಲ್ಲೂ ಚನ್ನಮ್ಮನ ಕಿತ್ತೂರು ತಾಲೂಕಿನವರಿಗೆ ಹೆಮ್ಮೆ ತರುವ ಸಂಗತಿಯಾಗಿದೆ.
ಮರಳಿ ಗೂಡಿಗೆ: 1977 ರಲ್ಲಿ ಮರಳಿ ಎಂ. ಕೆ. ಹುಬ್ಬಳ್ಳಿ ಗಾಂಧಿ ನಗರದ ಸ್ವ ಗ್ರಹದಲ್ಲಿ ತಮ್ಮ ನಿವೃತ್ತ ಜೀವನದಲ್ಲಿ ತಮ್ಮ ಇಳಿ ವಯಸ್ಸಿನಲ್ಲೂ ಮಕ್ಕಳಿಗೆ ವಿದ್ಯಾದಾನ ಮಾಡಿ, ವೃತ್ತಿಯೊಂದಿಗೆ ಕನ್ನಡ ನಾಡು ನುಡಿಯ ಅಭಿವೃದ್ಧಿ, ಶರಣ ಸಂಸ್ಕೃತಿ, ಸಂಗೀತ ಶಿಕ್ಷಣ ಹೇಳಿಕೊಡುವದರೊಂದಿಗೆ ಸಮಾಜಕ್ಕೆ ಒಳ್ಳೆಯ ಸಂಗೀತಗಾರರನ್ನು ಕೊಡುಗೆಯಾಗಿ ನೀಡಲುಗುರು ಪಂಚಾಕ್ಷರ ಸಂಗೀತ ಪಾಠ ಶಾಲೆ ತೆರೆದು ಗ್ರಾಮೀಣ ಮಕ್ಕಳಿಗೆ ಸಂಗೀತಾಕ್ಷತರಿಗೆ ಸಂಗೀತ ಪಾಠಸೇವೆ ಪ್ರಾರಂಭಿಸಿದರು. ತಮ್ಮ ಕಲಾ ಶಿಷ್ಯ ಬಳಗವನ್ನು ಸೇರಿಸಿ ಪ್ರತಿ ಶನಿವಾರ ಸಂಗೀತ ಸಂಜೆಕಾರ್ಯಕ್ರಮ ನಡೆಸುತ್ತಿದ್ದರು. ಈ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಹಿರೇಬಾಗೇವಾಡಿಸಂಗೀತ ಶಿಕ್ಷರಾದ ಶಿವಲಿಂಗಪ್ಪ ಬೋಡಕಿ, ಬಸಪ್ಪ ರೊಟ್ಟಿ, ಡಾ. ದಫೇದಾರ, ಇಕ್ಬಾಲ್ ಸಂಗೊಳ್ಳಿ,ಮಂಜುನಾಥ ಭಜಂತ್ರಿ, ಬದ್ರಿಶ ಕುಲಕರ್ಣಿ, ಆನಂದ ಶಿರಕೋಳ ಈರಯ್ಯ ಶಾಹಾಪೂರಮಠ, ಮಲ್ಲಯ್ಯ ಹಿರೇಮಠ, ಶಿವಯ್ಯಾ ಹಿರೇಮಠ,ಇನ್ನು ಅನೇಕರು ಭಾಗವಹಿಸಿ ಈ ಸಂಗೀತ ಸಂಜೆಗೆ ಮತ್ತಷ್ಟು ಮೆರಗೂ ತರುತ್ತಿದ್ದರು.
ಸಾಹಿತ್ಯ ರಚನೆ: ವಚನ, ಭಾವಗೀತೆ ಮತ್ತು ರಂಗಗೀತೆಗಳಿಗೆ ರಾಗ ಸಂಯೋಜಿಸಿಶಾಸ್ತ್ರೀಯ, ಹಿಂದೂಸ್ಥಾನಿ ಸಂಗೀತದ ರಾಗಗಳಿಗೆ ಸಂಬಂದಿಸಿದಂತೆ ಪಠ್ಯ ಕ್ರಮವನ್ನುಕನ್ನಡ ಭಾಷೆಯಲ್ಲಿ 60ಕ್ಕೂ ಹೆಚ್ಚು ರಾಗಗಳ ಕುರಿತು ಕೈಬರಹ ಬರೆದು, ಹೊತ್ತಿಗೆಸಿದ್ಧಪಡಿಸುವುದರೊಂದಿಗೆ ಸಂಗೀತ ಶಾಸ್ತ್ರ ಹಾಗೂ ರಾಗಗಳ ಚರಿತ್ರೆ ಅನ್ಯ ಭಾಷೆಯಲ್ಲಿಅಧ್ಯಯನ ಮಾಡಿ ಕನ್ನಡ ಭಾಷೆಗೆ ಭಾಷಾಂತರಿಸಿ ಕೀರ್ತಿ ಇವರಿಗೆ ಸಲ್ಲುವುದು.
ಡಿ.ಪಿ.ಹಿರೇಮಠರ ಸಾಧನೆಯ ಮೇಲೆ 2005 ರ ಮೇ ತಿಂಗಳಲ್ಲಿ ಈ ಟಿ.ವಿ. ಕನ್ನಡ ವಾಹಿನಿ ಅಗ್ರರಾಷ್ಟೀಯ ಕಾರ್ಯಕ್ರಮದಲ್ಲಿ ಇವರ ಜೀವನ ಸಾಧನೆ ಕುರಿತು ಬೆಳಕು ಚಲ್ಲಿತು. ಇದೆವೇಳೆ ಬೈಲಹೊಂಗಲ ತಾಲೂಕಾ ಮಟ್ಟದ ರಾಜ್ಯೋತ್ಸವ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿಇವರನ್ನು ಸನ್ಮಾನಿಸಲಾಗಿತು. ಬೆಳಗಾವಿಯಲ್ಲಿ ನಡೆದ ಗಡಿನಾಡು ಉತ್ಸವದಲ್ಲಿ ಇವರನ್ನು ಸನ್ಮಾನಿಸಲಾಯಿತು. ಎಂ.ಕೆ.ಹುಬ್ಬಳ್ಳಿ, ಕಿತ್ತೂರು, ಕಾದರವಳ್ಳಿ ಇನ್ನು ಅನೇಕಗ್ರಾಮದ ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಪ್ರೋತ್ಸಾಹಿಸಿತು. ಪೆಬ್ರುವರಿ 7, 2011ರಂದು ವಿಧಿವಶರಾದರು ಸಹ ಅವರ ಸಾಧನೆ ಅವರ ನೆನಪು ಅಪಾರ ಶಿಷ್ಯ ಬಳಗದಲ್ಲಿ ಇನ್ನು
ಹಚ್ಚು ಹಸಿರಾಗಿ ಉಳಿದಿದೆ. ಇವರ ಸ್ಮರಣೆಗಾಗಿ ಪ್ರತಿ ವರ್ಷ ಇವರ ಮನೆಯಲ್ಲಿ ಸಂಗೀತಕಾರ್ಯಕ್ರಮಗಳು ಜರುತ್ತಿವೆ.
ವರದಿ: ಸಂಜೀವಕುಮಾರ ವೀ. ತಿಲಗರ
ಎಂ. ಕೆ. ಹುಬ್ಬಳ್ಳಿ.