ಶಿಕ್ಷಣವೇ ದೊಡ್ಡ ಆಸ್ತಿ; ಉತ್ತಮ ಶಿಕ್ಷಣದಿಂದ ಮಕ್ಕಳು ಭವ್ಯ ಭಾರತ ಕಟ್ಟುವ ಶಕ್ತಿ ಪಡೆಯುತ್ತಾರೆ: ಲಕ್ಷ್ಮಣ ಸವದಿ

Pratibha Boi
ಶಿಕ್ಷಣವೇ ದೊಡ್ಡ ಆಸ್ತಿ; ಉತ್ತಮ ಶಿಕ್ಷಣದಿಂದ ಮಕ್ಕಳು ಭವ್ಯ ಭಾರತ ಕಟ್ಟುವ ಶಕ್ತಿ ಪಡೆಯುತ್ತಾರೆ: ಲಕ್ಷ್ಮಣ ಸವದಿ
WhatsApp Group Join Now
Telegram Group Join Now
ಅಥಣಿ: “ಚಿನ್ನ, ಬೆಳ್ಳಿ ಕದಿಯಬಹುದು, ಆದರೆ ಶಿಕ್ಷಣವನ್ನು ಯಾರೂ ಕಸಿಯಲು ಸಾಧ್ಯವಿಲ್ಲ. ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ. ಅವರಿಗೆ ಉತ್ತಮ ಶಿಕ್ಷಣ ನೀಡಿದರೆ ಭವ್ಯ ಭಾರತವನ್ನು ಕಟ್ಟುವ ಶಕ್ತಿ ಅವರಲ್ಲಿ ಮೂಡುತ್ತದೆ” ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಅಥಣಿ ತಾಲ್ಲೂಕಿನ ಗವಿಸಿದ್ದನ್ ಮಡ್ಡಿಯಲ್ಲಿ ಪಿ.ಎಂ. ಶ್ರೀ ಸರ್ಕಾರಿ ಉರ್ದು ಉನ್ನತಿ ಕರಿಸಿದ ಪ್ರೌಢಶಾಲೆ ಉದ್ಘಾಟಿಸಿ ಮಾತನಾಡಿದರು. ಬಹುದಿನಗಳಿಂದ ಮುಸ್ಲಿಂ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ನಿರೀಕ್ಷೆ ಇತ್ತು. ಈಗಾಗಲೇ ಮುರಾರ್ಜಿ ದೇಸಾಯಿ ಶಾಲೆ ಪ್ರಾರಂಭಿಸಲಾಗಿದ್ದು, ತಾಲ್ಲೂಕಿಗೆ ಮಂಜೂರಾಗಿರುವ ಒಂಬತ್ತು ಪ್ರೌಢಶಾಲೆಗಳನ್ನು ಹಂತ ಹಂತವಾಗಿ ಆರಂಭಿಸಲಾಗುವುದು ಎಂದು ಶಾಸಕ ಲಕ್ಷ್ಮಣ ಸವದಿ ತಿಳಿಸಿದರು.
ಅಥಣಿಯಲ್ಲಿ ಉರ್ದು ಮತ್ತು ಕನ್ನಡ ಪ್ರೌಢಶಾಲೆಗಳನ್ನು ಮಂಜೂರು ಮಾಡಲು ನಾನು ಪ್ರಯತ್ನಿಸುತ್ತಿದ್ದೆ. ಮಧು ಬಂಗಾರಪ್ಪ ಅವರು ತಾಲ್ಲೂಕಿಗೆ ಒಂಬತ್ತು ಪ್ರೌಢಶಾಲೆಗಳನ್ನು ಮಂಜೂರು ಮಾಡಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಸಚಾರ್ ಸಮಿತಿ ವರದಿಯ ಪ್ರಕಾರ, ಮುಸ್ಲಿಂ ಸಮುದಾಯವು ಹೆಚ್ಚು ಹಿಂದುಳಿದ ಮತ್ತು ಬಡತನದಲ್ಲಿರುವ ಸಮಾಜ. ಈ ನಿಟ್ಟಿನಲ್ಲಿ ಸರ್ಕಾರವು ಮುಸ್ಲಿಂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಿದೆ” ಎಂದು ಅವರು ವಿವರಿಸಿದರು.
ಶಾಲೆಯ 8 ಮತ್ತು 9ನೇ ತರಗತಿಗಳನ್ನು ನಡೆಸಲು ಕೊಠಡಿಗಳ ಕೊರತೆ ಇರುವುದರಿಂದ ಬೇಡಿಕೆ ಸಲ್ಲಿಸಿದ್ದೀರಿ. ನನ್ನ ವಿವೇಚನಾ ನಿಧಿಯಿಂದ 10 ಲಕ್ಷ ರೂ. ನೀಡಿ ಆದಷ್ಟು ಬೇಗ ಎರಡು ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಪ್ರಸ್ತುತ ಈ ಶಾಲೆ 10ನೇ ತರಗತಿವರೆಗೆ ನಡೆಯುತ್ತದೆ. ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತ ಮಕ್ಕಳಿಗಾಗಿ ಪಿಯು ಕಾಲೇಜು ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ನಂತರ ಮಾತನಾಡಿದ ಮುಖಂಡ ಎಸ್.ಕೆ. ಬುಟಾಳಿ, “ಯಾರೂ ಅಲ್ಪಸಂಖ್ಯಾತರ ಪರ ಯೋಚನೆ ಮಾಡುತ್ತಿರಲಿಲ್ಲ. ಶಾಸಕ ಲಕ್ಷ್ಮಣ ಸವದಿ ಅವರು ಮಾತ್ರ ಈ ಸಮಾಜದ ಬಗ್ಗೆ ಕಾಳಜಿ ವಹಿಸಿದ್ದಾರೆ. ಅವರ ಪ್ರಯತ್ನದ ಫಲವಾಗಿ ಇವತ್ತು ತಾಲ್ಲೂಕಿಗೆ ಒಂಬತ್ತು ಪ್ರೌಢಶಾಲೆಗಳು ಮಂಜೂರಾಗಿವೆ. ಇದರಲ್ಲಿ ಅಥಣಿ ಪಟ್ಟಣದ ಉರ್ದು ಶಾಲೆ ಕೂಡ ಒಂದಾಗಿದೆ ಒಂದೇ ತಾಲ್ಲೂಕಿಗೆ 9 ಪ್ರೌಡ ಶಾಲೆಗಳನ್ನು ತರುವದು  ಸಣ್ಣ ಕೆಲಸವಲ್ಲ. ಈ ಪ್ರೌಢಶಾಲೆಗಳು ಮುಸ್ಲಿಂ ಸಮಾಜದ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗಲಿವೆ” ಎಂದು ತಿಳಿಸಿದರು.
ಎಸ್.ಡಿ.ಎಂ.ಸಿ.ಅಧ್ಯಕ್ಷ್  ಮಸಿಉಲ್ಲಾ ಮುಲ್ಲಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳಿ, ಸದಸ್ಯೆ ವಿದ್ಯಾಶ್ರೀ ಹಳದಮಳ, ಎಸ್‌ಡಿಎಂಸಿ ಅಧ್ಯಕ್ಷ ಮಸಿವುಲ್ಲಾ ಮುಲ್ಲಾ, ಸಯ್ಯದ್ ಅಮೀನ್ ಗದ್ಯಾಳ, ದತ್ತಾ ವಾಷ್ಟರ್, ಯೂನುಸ್ ಮುಲ್ಲಾ, ಅಸ್ಲಂ ನಾಲಬಂದ್, ಮುಷ್ತಾಕ್ ಮುಲ್ಲಾ, ರಫೀಕ್ ಪಟೆಲ್, ಇಲಿಯಾಸ್ ಹಿಪ್ಪರಗಿ, ಅಬ್ದುಲ್ ಅಜೀಜ್ ಮುಲ್ಲಾ, ಆಶೀಫ್ ತಾಂಬೂಳಿ, ಬೀರಪ್ಪ ಯಂಕಂಚಿ, ಅಮಾನುಲ್ಲಾ ಮುಲ್ಲಾ, ವಿಲೀನ ರಾಜ್ ಯಳಮಲ್ಲೇ, ಐ.ಜಿ. ಬಿರಾದಾರ್, ಮಕ್ಸೂದ್ ಮುಲ್ಲಾ, ಸಯ್ಯದ್ ಗಡ್ಡೆಕರ್, ಅಧಿಕಾರಿಗಳಾದ ಎಂ.ಆರ್. ಮುಂಜಿ, ಜಿ.ಎಂ. ಹಿರೇಮಠ, ಎ.ಎಂ. ನದಾಫ್ ಸೇರಿದಂತೆ ಎಸ್‌ಡಿಎಂಸಿ ಸದಸ್ಯರು, ಸಿಬ್ಬಂದಿ ವರ್ಗ, ಅಂಜುಮನ್ ಸಂಸ್ಥೆಯ ಸದಸ್ಯರು ಮತ್ತು ಪುರಸಭೆ ಸದಸ್ಯರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article