ಸಮುದಾಯದ ಅಭಿವೃದ್ಧಿಯ ಅಡಿಪಾಯವೇ ಶಿಕ್ಷಣ: ರಾಘವೇಂದ್ರ ನೀಲನ್ನವರ

Ravi Talawar
ಸಮುದಾಯದ ಅಭಿವೃದ್ಧಿಯ ಅಡಿಪಾಯವೇ ಶಿಕ್ಷಣ: ರಾಘವೇಂದ್ರ ನೀಲನ್ನವರ
WhatsApp Group Join Now
Telegram Group Join Now

ರನ್ನ ಬೆಳಗಲಿ: ಮೇ.18., ಪಟ್ಟಣದ ಸದಾಶಿವ ನಗರದಲ್ಲಿರುವ ಶ್ರೀ ಮಹರ್ಷಿ ಭಗೀರಥ ಸಮುದಾಯ ಭವನದಲ್ಲಿ ಶ್ರೀ ಮಹರ್ಷಿ ಭಗೀರಥರ ಜಯಂತೋತ್ಸವ ಹಾಗೂ ಎಸ್.ಎಸ್.ಎಲ್.ಸಿ ಮತ್ತು  ಪಿಯುಸಿ ದ್ವಿತೀಯ ವರ್ಷದಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಸತ್ಕಾರ ಕಾರ್ಯಕ್ರಮವು ಶ್ರೀ ಭಗೀರಥ ಸೇವಾ ಸಂಘ ರನ್ನಬೆಳಗಲಿಯ ಆಶ್ರಯದಲ್ಲಿ ಮಂಗಳವಾರ ದಂದು ಜರುಗಿತು.

ಯೋಗ ಶಿಕ್ಷಕ, ಉಪನ್ಯಾಸಕರಾದ ರಾಘವೇಂದ್ರ ನೀಲಣ್ಣವರ ಸಮುದಾಯದ ಅಭಿವೃದ್ಧಿಯ ಅಡಿಪಾಯವೇ ಶಿಕ್ಷಣ ಆದ್ದರಿಂದ ಶಿಕ್ಷಣ ದಿಂದ ಯಾವ ಮಕ್ಕಳು ದೂರ ಉಳಿಯಬಾರದು, ಸಮಾಜದಲ್ಲಿ ಅಭಿವೃದ್ದಿಯ ಕ್ರಾಂತಿ ಆಗಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಣದ ಬೇರು ಕಹಿ ಯಾದರೆ ಫಲ ಮಾತ್ರ ಸಿಹಿ ಆಗಿರುತೆ ಎಂಬ ಅನುಭವದ ನುಡಿಯಂತೆ ಕಲಿಕೆಯ ಹಂತದಲ್ಲಿ ಎಷ್ಟೇ ಕಷ್ಟ ಅನುಭವಿಸಿದರು ಉತ್ತಮ ಸಾಧನೆ ಗೈದು ಅತ್ಯುತ್ತಮವಾದ ಉದ್ಯೋಗವನ್ನು
ಆಯ್ದುಕೊಂಡಾಗ ಸಮುದಾಯದ ಗೌರವ ಜೊತೆಗೆ ಕುಟುಂಬದ ಗೌರವ ಹೆಚ್ಚುತ್ತದೆ. ಅದರಂತೆ  ಒಳ್ಳೆಯ ನಾಗರಿಕರಾಗಿ ಬದುಕಲು ಸಾಧ್ಯವಾಗುತ್ತೆ ಎಂಬ  ವಿಚಾರವನ್ನು ತಿಳಿಸಿದರು.

ಶ್ರೀ ಮಹರ್ಷಿ ಭಗೀರಥ ಸೇವಾ ಸಂಘದ ಅಧ್ಯಕ್ಷರಾದ ಮುದಕಪ್ಪ ದೋಬಸಿ, ಗೌರವಾಧ್ಯಕ್ಷರಾದ ಮಹಾದೇವ ಹಾದಿಮನಿ, ಉಪಾಧ್ಯಕ್ಷರಾದ ಭರಮಪ್ಪ  ಸೂರ, ಕಾರ್ಯದರ್ಶಿಯಾದ ವೆಂಕಟಪ್ಪ ಲಾಲಿಬುಡ್ಡಿ ಹಾಗೂ ಸದಸ್ಯರು ಸೇರಿಕೊಂಡು ೨೦೨೩-೨೪ನೇ ಸಾಲಿನಲ್ಲಿ ಪಿಯುಸಿ ದ್ವಿತೀಯ ವರ್ಷದಲ್ಲಿ ವೈಷ್ಣವಿ ಸೈದಾಪುರ  (೯೭%),ಆರತಿ ಬೀರಾಜನವರ (೯೫.೮೬%) ಭಾಗ್ಯವಂತಿ ಲಾಲಿಬುಡ್ಡಿ (೯೧%), ಕಲಾವತಿ ಲಾಲಿಬುಡ್ಡಿ(೯೦%), ಶಾಸಪ್ಪ  ಲಣ್ಣವರ(೮೯%)  ಈರಪ್ಪ ದೋಬಸಿ(೮೯%), ಗುರುರಾಜ ಪೂಜೇರಿ (೮೮%), ಸಾವಿತ್ರಿ ಧೋಬಸಿ (೮೪%),ಅಶ್ವಿನಿ ಲಾಲಿಬುಡ್ಡಿ (೮೪%) ಅದರಂತೆ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಪವಿತ್ರ ದೋಬಸಿ (೯೩.೪೪%), ಕರೆಪ್ಪ ಸಿದ್ದಾಪುರ(೯೩%), ಪರಮಾನಂದ ಸೂರಪ್ಪಗೊಳ(೯೨%), ಸ್ಪೂರ್ತಿ ಲಾಲಿಬುಡ್ಡಿ (೯೧%),
ಸ್ಪಂದನಾ ಲಾಲಿಬುಡ್ಡಿ(೯೦%) ವಿಜಯಲಕ್ಷ್ಮಿ ಸಿದ್ದಾಪುರ(೮೬.೮೦%),ಬೈರವಿ ಸಿದ್ದಾಪುರ(೮೬%),ಪೂಜಾ ರಬಕವಿ(೮೪.೮೦%), ಮುರಳಿ ಸಿದ್ದಾಪುರ (೮೪.೮೦%) ಈ ಎಲ್ಲಾ ಸಾಧಕ ವಿದ್ಯಾರ್ಥಿಗಳಿಗೆ ಗ್ರಂಥ ಬಹುಮಾನ ನೀಡಿ ಗೌರವಿಸಿ ಸನ್ಮಾನಿಸಿದರು.

ಭಗೀರಥ ದೇವಸ್ಥಾನದ ಅರ್ಚಕರಾದ ಅಲ್ಲಪ್ಪ ಬಿರಾಜನವರ, ಪಿಕೆಪಿಎಸ್ ಮಾಜಿ ಅಧ್ಯಕ್ಷರಾದ ಮುತ್ತಪ್ಪ ಸಿದ್ದಾಪುರ, ಶ್ರೀ ಸೂರ್ಯವಂಶ ಭಗಿರಥ ಸೌಹಾರ್ದ  ಹಕಾರಿ ಸಂಘದ ಅಧ್ಯಕ್ಷರಾದ ಮಹಾದೇವ ಜಗದಾಳ,ರಾಮಪ್ಪ ಜಮಖಂಡಿ, ಕಲ್ಲಪ್ಪ ರಬಕವಿ, ದುಂಡಪ್ಪ ಪೂಜೇರಿ, ಶ್ರೀಶೈಲ ಸಿದ್ದಾಪುರ, ದಯಾನಂದ  ದ್ದಾಪುರ, ಸಂಗಪ್ಪ ಹಿಪ್ಪಲಕರ, ಗೋವಿಂದ ಹಾದಿಮನಿ, ವಿಠ್ಠಲ ಬೀರಾಜನವರ, ಮಹಾದೇವ ಧರ್ಮಟ್ಟಿ, ಮಹಾಲಿಂಗ ಉಸಳಿ, ಶಿವಪ್ಪ ಲಾಲಿಬುಡ್ಡಿ, ಸಿದ್ದಪ್ಪ ನಾಗರಾಳ, ಲಕ್ಷ್ಮಣ ಹೊಸೂರ, ಗಂಗಪ್ಪ ಕಟ್ಟಿ, ವಿದ್ಯಾ ಸೈದಾಪುರ, ರೇಣುಕಾ ದೋಬಸಿ ಮತ್ತು ವಿದ್ಯಾರ್ಥಿ,ವಿದ್ಯಾರ್ಥಿನಿಯರು, ಪಾಲಕ,ಪೋಷಕರು  ಸಮುದಾಯದ ಹಿರಿಯರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article