ಸಂಸ್ಕಾರಯುತ ಬದುಕಿಗೆ ಶಿಕ್ಷಣ ಅತ್ಯಗತ್ಯ : ಚಂದ್ರಶೇಖರ ಬಿ ಕಂದಕೂರ

Ravi Talawar
ಸಂಸ್ಕಾರಯುತ ಬದುಕಿಗೆ ಶಿಕ್ಷಣ ಅತ್ಯಗತ್ಯ : ಚಂದ್ರಶೇಖರ ಬಿ ಕಂದಕೂರ
WhatsApp Group Join Now
Telegram Group Join Now

ರೋಣ : ಮಲ್ಲಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂದಿಗವಾಡ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಅನುದಾನದ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಗ್ರಾಮ ಛಾವಡಿ ಮತ್ತು ಅರಿವು ಕೇಂದ್ರ (ಗ್ರಂಥಾಲಯ)ದ ಉದ್ಘಾಟನಾ ಸಮಾರಂಭವು ಇಂದು ವಿಜೃಂಭಣೆಯಿಂದ ನಡೆಯಿತು.

ತಹಶೀಲ್ದಾರದ ನಾಗರಾಜ್ ಕೆ ರೋಣ ಗ್ರಾಮ ಆಡಳಿತ ಅಧಿಕಾರಿ ಕೊಠಡಿಯನ್ನು ಉದ್ಘಾಟಿಸಿ, ಕರ್ನಾಟಕ ಸರಕಾರದ ಪೋತಿ ಖಾತೆ ಕಾರ್ಯಕ್ರಮ ದಡಿ ರಾಜ್ಯದ ಮೊದಲ ಪೋತಿ ಖಾತೆಯಾಗಿ ಈ ಕೊಠಡಿ ಆಗಿದೆ ಗ್ರಾಮಸ್ಥರು ಈ ಸೌಲಭ್ಯದ ಸದುಪಯೋಗ ವನ್ನು ಪಡೆಯಬೇಕೆಂದು ಕರೆ ನೀಡಿದ ಅವರು, ಕಂದಾಯ ಇಲಾಖೆಯ ಸಿಬ್ಬಂದಿಗಳಿಗೆ ಹಾಗೂ ಗ್ರಾಮ ಆಡಳಿತ ಅಧಿಕಾರಿ ಶ್ರೀ ವಾಯ್. ಡಿ. ಬಡಿಗೇರ ಇವರಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪೋತಿ ಖಾತೆಯಿಂದ ವಾರಸರಾದ ರೈತರಿಗೆ ಪಹಣಿಗಳನ್ನು ವಿತರಿಸಲಾಯಿತು.

ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ  ಚಂದ್ರಶೇಖರ ಕಂದಕೂರ ಇವರು ಅರಿವು ಕೇಂದ್ರದ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿ. ಮಕ್ಕಳು, ಯುವಕರು ಹಾಗೂ ವಯಸ್ಕರು ಮೊಬೈಲ್‌ನಿಂದ ದೂರವಿದ್ದು, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು. “ಸಂಸ್ಕಾರಯುತ ಬದುಕಿಗೆ ಶಿಕ್ಷಣ ಅತ್ಯಗತ್ಯ. ಎಲ್ಲರೂ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು. ಶಿಕ್ಷಣದಲ್ಲಿ ಶಿಕ್ಷೆ ಮತ್ತು ಬಹುಮಾನ ಎರಡೂ ಅವಶ್ಯಕ. ಶಿಕ್ಷಕರು ಮಕ್ಕಳನ್ನು ಶಿಸ್ತಿನಿಂದ ಕಲಿಸಿದಾಗ ಪೋಷಕರು ವಿರೋಧಿಸಬಾರದು. ಒಂದು ವೇಳೆ ಶಿಕ್ಷಕರು ಬುದ್ಧಿ ಕಲಿಸದಿದ್ದರೆ, ಮುಂದೆ ಪೊಲೀಸ್ ಸ್ಟೇಷನ್ ನಲ್ಲಿ ಬುದ್ಧಿ ಕಲಿಯಬೇಕಾಗುತ್ತದೆ,” ಎಂದು ಹಾಸ್ಯ ಚಟಾಕಿಯಿಂದ ತಿಳಿಸಿದರು. ಅಲ್ಲದೆ, ಗ್ರಾಮಸ್ಥರು ಪ್ರತಿವರ್ಷ ತಮ್ಮ ಮನೆ, ಜಾಗೆ ಮತ್ತು ನೀರಿನ ತೆರಿಗೆಯನ್ನು ಸಕಾಲದಲ್ಲಿ ಪಾವತಿಸಿ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು. ನೀರಿನ ಸಂರಕ್ಷಣೆ ಮತ್ತು ನೈರ್ಮಲ್ಯದ ಮಹತ್ವವನ್ನು ಒತ್ತಿ ಹೇಳಿದ ಅವರು, ನೀರಿನ ಅನಗತ್ಯ ಬಳಕೆ ತಡೆಗಟ್ಟುವಂತೆ ಸೂಚಿಸಿದರು.

ಈ ಕಾರ್ಯಕ್ರಮಕ್ಕೆ ತಹಶೀಲ್ದಾರದ   ನಾಗರಾಜ ಕೆ ಹಾಗೂ ತಾಲೂಕ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ   ಚಂದ್ರಶೇಖರ ಕಂದಕೂರ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಧಾರ್ಮಿಕ ಸಾನ್ನಿಧ್ಯವನ್ನು ವೇ.ಮೂ.  ಸಿದ್ದಯ್ಯ ಹಿರೇಮಠ ಇವರು ವಹಿಸಿದ್ದರ, ಅಧ್ಯಕ್ಷತೆಯನ್ನು  ಹನಮಂತಗೌಡ ಹೂಲ್ಲೂರ ಇವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಕರಿಯಮ್ಮ ಚಲವಾದಿ, ಸದಸ್ಯರಾದ ಶ್ರೀಮತಿ ಬಸಮ್ಮ ಟಕ್ಕೆದ, ಕಸ್ತೂರೆವ್ವ ಜಂಪಣ್ಣನವರ, ಮೈಲಾರಪ್ಪ ಕರಿಲಿಂಗಣ್ಣವರ, ಕಮಲಾಕ್ಷಿ ಭರಮಗೌಡ್ರ, ದ್ರಾಕ್ಷಾಯಣಿ ಹಡಪದ, ಸುಮಂಗಲಾ ಕೊಳ್ಳದ, ಗಿರಿಜವ್ವ ಹಟ್ಟಿ, ವಿಕ್ರಮ ದಾನರಡ್ಡಿ, ಯಲ್ಲಪ್ಪ ಮಳಗಿ, ವೀರನಗೌಡ ಕಟ್ಟಿ, ಸುರೇಶ ವತ್ತಟ್ಟಿ ಸೇರಿದಂತೆ ಗ್ರಾಮದ ಹಿರಿಯರು, ಗುರುಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ಪಂಚಾಯತಿ ಅಭಿವೃದ್ಧಿ ಅಧಿಕಾರಿ   ಡಿ. ಎಸ್. ಹಂಚಿನಾಳ ಇವರು ಸ್ವಾಗತ ಭಾಷಣ ಮಾಡಿದರು, ಹಾಗೂ   ಮುತ್ತು ಅರಹುಣಸಿ ಇವರು ವಂದನಾರ್ಪಣೆ ಸಲ್ಲಿಸಿದರು.

WhatsApp Group Join Now
Telegram Group Join Now
Share This Article