ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಪ್ರಮುಖ ಅಸ್ತ್ರ :ನ್ಯಾಮಗೌಡ

Ravi Talawar
ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಪ್ರಮುಖ ಅಸ್ತ್ರ :ನ್ಯಾಮಗೌಡ
WhatsApp Group Join Now
Telegram Group Join Now
ಹಸಿರು ಕ್ರಾಂತಿ ವರದಿ ಜಮಖಂಡಿ: ಸಮುದಾಯ ಅಭಿವೃದ್ಧಿ ಹೊಂದಲು ಶಿಕ್ಷಣ ಪ್ರಮುಖ ಅಸ್ತವಾಗಿದೆ. ಮಹಿಳೆಯರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಸಂಸ್ಕೃತಿಯನ್ನು ಕಲಿಸಬೇಕೆಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ಸರಕಾರಿ ಪ್ರಾಥಮಿಕ ತಾಲೂಕ ಶಾಲೆ ಆವರಣದಲ್ಲಿ ಶುಕ್ರವಾರ ಸಿರಾಜ ಕಮೀಟಿ ಹಮ್ಮಿಕೊಂಡಿದ್ದ ಪ್ರವಾದಿ ಮೊಹಮದ್ ಪೈಗಂಬರರ ೧೫೦೦ನೇ ಜನ್ಮದಿನಾಚರಣೆ ಮತ್ತು ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಭಾರತೀಯ ಪರಂಪರೆಯಲ್ಲಿ ದೇವನೊಬ್ಬನಿದ್ದು ನಾಮಗಳು ಹಲವಾರು ಇವೆ. ಆಚರಣೆಯಲ್ಲಿ ವಿವಿಧತೆ ಇದ್ದರೂ ಒಳ್ಳೆಯ ಮನುಷ್ಯನಾಗಿ ಬದುಕು ಸಾಗಿಸಬೇಕೆನ್ನುವ ತತ್ವ ಅಡಗಿದೆ ಎಂದರು.
ಜಮಖಂಡಿ ಯಲ್ಲಿ ಗಣೇಶ ಹಬ್ಬವನ್ನು ಹಿಂದು-ಮುಸ್ಲಿ ಒಂದಾಗಿ ಆಚರಿಸುವ ಮೂಲಕ ರಾಜ್ಯಕ್ಕೆ ಮಾದರಿ ಆಗಿದೆ. ಪೈಗಂಬರರು ಮುಸ್ಲಿಂ ಸಮುದಾಯದ ಜಯಂತಿ ಆಚರಣೆ ಅಲ್ಲ, ಸಮಸ್ತ ದೇಶದ ಎಲ್ಲ ಧರ್ಮಗಳ ಆಚರಣೆ ಆಗಿದೆ. ಮುಸ್ಲಿಂ ಮಹಿಳೆಯರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದರೇ ಮಾತ್ರ ಸಮುದಾಯ ಅಭಿವೃದ್ಧಿ ಆಗಲಿದೆ ಎಂದರು.
ಡಿ.ವೈ.ಎಸ್.ಪಿ.ರೋಷನ ಜಮೀರ  ಮಾತನಾಡಿ, ಸಾಧು-ಸಂತರ ಮತ್ತು ಪೈಗಂಬರರ ಆದರ್ಶ ತತ್ವಗಳನ್ನು ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗುವುದೇ ನಿಜವಾದ ಜಯಂತಿ ಆಚರಣೆಯಾಗಬೇಕು. ಸರಕಾರಗಳು ಮುಸ್ಲಿಂ ಜನಾಂಗಕ್ಕೆ ಹೆಚ್ಚಿನ ಕೊಡುಗೆ ನೀಡಬೇಕು. ಮೀಸಲಾತಿ ಹೆಚ್ಚಿಸಬೇಕು. ಮುಸ್ಲಿಂ ಸಮುದಾಯ ಮಕ್ಕಳಿಗೆ ಶಿಕ್ಷಣ ನೀಡುವ ಗೌರವಿಸುವ ಸಂಸ್ಕೃತಿಯನ್ನು ಬೆಳಸಬೇಕು ಎಂದರು.
ಮುತ್ತಿನಕAತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚರ‍್ಯರು ಮಾತನಾಡಿದರು. ಓಲೇಮಠದ ಪ.ಪೂ. ಆನಂದದೇವರು, ಮೌಲಾನಾ ಜುನೇದ, ಮೌಲಾನಾ ಅಬು ಸಾಲಿಯಾನ ಸಾನಿಧ್ಯ ವಹಿಸಿದ್ದರು
ವೇದಿಕೆಯಲ್ಲಿ ಸಿರಿಯತ್ ಕಮೀಟಿ ಅಧ್ಯಕ್ಷ ಕುತಬುದ್ದೀನ ಬಿಜಾಪೂರ, ನಗರಸಭೆ ಅಧ್ಯಕ್ಷ ಈಶ್ವರ ವಾಳೆನ್ನವರ, ನಗರ ಪ್ರಾಧಿಕಾರ ಅಧ್ಯಕ್ಷ ಅನ್ವರ ಮೋಮಿನ, ನಜೀರ ಕಂಗನೊಳ್ಳಿ, ಸುಶೀಲಕುಮಾರ ಬೆಳಗಲಿ, ರಫೀಕ ಬಾರಿಗಡ್ಡಿ, ಮಾಮೂನ ಪಾರತನಳ್ಳಿ, ಕಾಶೀಂ ಅವಟಿ, ದಿಲಾವರ ಶಿರೋಳ, ಅಜೀಮ ಅವಟಿ, ಸಲೀಂ ಮುಧೋಳ, ತೌಫೀಕ ಪಾರತನಳ್ಳಿ, ಮುಬಾರಕ ಅಪರಾಧ, ಮಹಮ್ಮಮದ ಮುಲ್ಲಾ, ಸಿಪಿಐ ಮಲ್ಲಪ್ಪ ಮಡ್ಡಿ, ಪಿಎಸ್.ಐ ಅನೀಲ ಕುಂಬಾರ ಸಹಿತ ಹಲವರು ಇದ್ದರು.
WhatsApp Group Join Now
Telegram Group Join Now
Share This Article