ಬಳ್ಳಾರಿ,ಆ.04 : ೧೨೧ ವರ್ಷಗಳ ಭವ್ಯ ಇತಿಹಾಸವುಳ್ಳ ಭಾರತದ ಸಹಕಾರ ಚಳುವಳಿ ವ್ಯಾಪ್ತಿಯಲ್ಲಿ, ಗಾತ್ರದಲ್ಲಿ ವಿಶ್ವಮಾನ್ಯತೆಯನ್ನು ಪಡೆದಿದೆ. ೧೯೦೪ ರಲ್ಲಿ ಆರಂಭವಾದ ಸಹಕಾರ ಚಳುವಳಿಯು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ದೊರಕಿಸಿಕೊಡಬೇಕೆಂಬ ಮಹತ್ತರ ಆಶಯವನ್ನು ಇರಿಸಿಕೊಂಡು ಹಲವಾರು ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸುತ್ತಾ ಭಾರತದೇಶದ ಆರ್ಥಿಕತೆಯ ಸುಭದ್ರತೆಗೆ ತನ್ನದೇ ಆದ ಚಾಪನ್ನು ಹೊಂದಿರುತ್ತದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಜಿ. ನಂಜನಗೌಡ, ನಿರ್ದೇಶಕರಾದ ಹನುಮಂತಯ್ಯ ಶೆಟ್ಟಿ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಪ್ರತಿಕಾ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡತನ ನಿವಾರಣೆ, ಉದ್ಯೋಗ ಸೃಷ್ಟಿ, ಸಮಾಜಿಕ ನ್ಯಾಯದಂತಹ ಕಾರ್ಯಕ್ರಮಗಳು ಚಳುವಳಿಯ ಪ್ರಜಾಪ್ರಭುತ್ವದ ತಳಹದಿಯ ಮೂಲಕ ಯಶಸ್ವಿಯಾಗಿ ಕಾರ್ಯಗತವಾಗುತ್ತಿವೆ. ಕೃಷಿ ಕ್ರಾಂತಿ, ಕ್ಷೀರಕ್ರಾಂತಿ, ರಸಗೊಬ್ಬರಕ್ಷೇತ್ರದಲ್ಲಿ ಸಹಕಾರ ಚಳುವಳಿ ದೊಡ್ಡಕೊಡುಗೆಯನ್ನೇ ನೀಡಿದೆ ಎಂದರು. ಜವಾಬ್ದಾರಿಯುತ ಸದಸ್ಯ, ಸ್ವಯಂ ಆಡಳಿತ ನಿರ್ವಹಣೆ, ಪ್ರಗತಿಪರ ಕಾರ್ಯಕ್ರಮಗಳು ಸೌಹಾರ್ದ ಸಹಕಾರಿಗಳ ಯಶಸ್ಸಿನ ತಳಹದಿ. ಸ್ವಾಯತ್ತತೆ, ಸ್ವಯಂ ಆಡಳಿತ ಹಾಗೂ ಸ್ವಯಂ ನಿಯಂತ್ರಣ” ಸೌಹಾರ್ದ ಸಹಕಾರಿಗಳ ಧೈಯವನ್ನಾಗಿಸಿಕೊಂಡು ೦೧- ಜನವರಿ ೨೦೦೧ರಲ್ಲಿ ಸೌಹಾರ್ದ ಸಹಕಾರಿ ಕಾಯ್ದೆಜಾರಿಗೆ ಬಂದ ನಂತರ ೨೦೦೨ರಲ್ಲಿ ಸರಿಯುಕ್ತ ಸಹಕಾರಿ ನೋಂದಣಿಯಾಗಿ ಕಾರ್ಯನಿರ್ವಹಿಸುತ್ತಿದೆ.೦೧ ಜನವರಿ ೨೦೨೫ಕ್ಕೆ ಸೌಹಾರ್ದ ಸಹಕಾರಿ ಕಾಯ್ದೆಜಾರಿಗೆ ಬಂದು ೨೫ ವರ್ಷಗಳಾಗಿದೆ. ಇದುರಜತ ಮಹೋತ್ಸವ ವರ್ಷವಾಗಿದೆ. ಕಾರಣ ಬೆಂಗಳೂರಿನಲ್ಲಿ ರಜತಾ ಮಹೋತ್ಸವವನ್ನು ಆಚರಿಸಲಾಗುವುದು ಎಂದು ಅವರು ತಿಳಿಸಿದರು
ಈ ಅವಧಿಯಲ್ಲಿ ಸರಕಾರದ ಸಾರ್ವಜನಿಕರ ಹಾಗೂ ಸಹಕಾರಿಗಳ ಮನ್ನಣೆಯನ್ನುಗಳಿಸಿ ಉತ್ತಮ ಪ್ರಗತಿ ಸಾಧಿಸುತ್ತ ಮುನ್ನಡೆಯುತ್ತಿದೆ ಎಂದು ತಿಳಿಸಿದರು. ಕರ್ನಾಟಕ ರಾಜ್ಯದಲ್ಲಿನ ಸೌಹಾರ್ದ ಸಹಕಾರ ಕ್ಷೇತ್ರದ ನೇತೃತ್ವವನ್ನು ವಹಿಸಿ, ಮಾತೃ ಸಂಸ್ಥೆಯಾಗಿ, ರಾಷ್ಟ್ರದ ಸಹಕಾರಿಕ್ಷೇತ್ರದಏಕೈಕ ಶಾಸನಬದ್ಧ ಸಂಸ್ಥೆಯಾಗಿ, ಕಾನೂನುಬದ್ಧವಾಗಿ ರಚನೆಯಾಗಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯು, ಶಾಸನಬದ್ಧ ಕಾರ್ಯಗಳ ಜೊತೆಗೆತರಬೇತಿ, ಶಿಕ್ಷಣ, ಪ್ರಚಾರ ಚಟುವಟಿಕೆಗಳನ್ನು ಕೂಡ ನಡೆಸುತ್ತ ಬಂದಿದೆ ಎಂದರು.
ಪ್ರತಿ ವರ್ಷದಂತೆ ಸಂಯುಕ್ತ ಸಹಕಾರಿಯ ಸಾಮಾನ್ಯ ಸಭೆಯನ್ನು ಜರುಗಿಸುವ ಮೊದಲು ರಾಜ್ಯದಾದ್ಯಂತ ಪ್ರವಾಸ ಮಾಡಿ ಸಹಕಾರ ಕ್ಷೇತ್ರದ ಜ್ವಲಂತ ವಿಷಯಗಳನ್ನು ಚರ್ಚಿಸುವುದು ಹಾಗೂ ಸಹಕಾರ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಸಂಪರ್ಕ ಸಭೆಗಳನ್ನು ಆಯೋಜಿಸಲು ಸಂಯುಕ್ತ ಸಹಕಾರಿಯು ನಿರ್ಧರಿಸಿದೆ. ಅದರಂತೆ ಬೀದರನಲ್ಲಿ ಸಭೆಯನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ಹನುಮಂತಯ್ಯ ಶೆಟ್ಟಿ ಸತ್ಯನಾರಾಯಣ ಕಲ್ಲಗುಡಿ ಮಂಜುನಾಥ್ ಸೂರ್ಯಕಾಂತ್ ರಾಖಲೆ ಇದ್ದರು.