ಇಂಡಿ : ಪರಿಸರ ರಕ್ಷಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೇ ಪ್ರತಿ ದಿನ ನಾವು ಪರಿಸರ ಕಾಳಜಿ ಗಮನದಲ್ಲಿಟ್ಟುಕೊಂಡು ಸಮುದಾಯದಲ್ಲಿ ಮನೆಗೊಂದು ಗಿಡ ನೆಡುವಂತೆ ಜಾಗೃತಿ ಮೂಡಿಸಿ ಪ್ರಕೃತಿಯೊಂದಿಗೆ ಸಾಮರಸ್ಯದ ಬದುಕು ಕಟ್ಟಿಕೊಳ್ಳ ಬೇಕೆಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಅಧ್ಯಕ್ಷ ಜಯಾದ ಮನಿಯಾರ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಂಡಿ ತಾಲೂಕಿನ ವತಿಯಿಂದ ಚಿಕ್ಕಬೇವನೂರ ವಲಯದ ಅಹಿರಸಂಗದ ಪ್ರಭುಲಿಂಗ ದೇವಸ್ಥಾನದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಲಯ ಮೇಲ್ವಿಚಾರಕ ಅಶ್ವಿನಿ ಸಂಗೋಗಿ ಮಾತನಾಡಿ ವರ್ಷದಿಂದ ವರ್ಷಕ್ಕೆ ತೀರ್ವವಾಗಿ ಏರುತ್ತಿರುವ ತಾಪಮಾನ ನಿರಂತರ ವಾಯು ಮಾಲಿನ್ಯ, ಜಲಮಾಲಿನ್ಯ, ಭೂ ಮಾಲಿನ್ಯ ವನ್ನು ಪರಿಸರ ಎದುರಿಸುತ್ತಿದೆ ಎಂದರು.
ತಾಲೂಕಿನ ಕೃಷಿ ಮೇಲ್ವಿಚಾರಕ ಪ್ರಕಾಶ ಬಡಿಗೇರ ರೈತರ ಉಪಸ್ಥಿತಿಯಲ್ಲಿ ಸಸಿಗಳನ್ನು ನೆಟ್ಟರು. ಮತ್ತು ರೈತರಿಗೆ ಮತ್ತು ರೈತ ಮಹಿಳೆಯರಿಗೆ ಸಸಿ ವಿತರಣೆ ಮಾಡಿದರು. ಸಂಘಗಳ ಸದಸ್ಯರು, ಸೇವಾ ಪ್ರತಿನಿಧಿಗಳು,ಕಾವೇರಿಮಠ ಮತ್ತಿತರಿದ್ದರು.