ತಾಲೂಕಿನ ಹಿರೇಮಸಳಿ ಯುಬಿಎಚ್‌ಪಿಎಸ್ ಶಾಲೆಯಲ್ಲಿ ನಲಿ ಕಲಿ ೨ನೇ ಸಮಾಲೋಚನೆ ಸಭೆಯನ್ನುದ್ದೇಶಿಸಿ ಇ.ಸಿ.ಒ ನವಾಜಖಾನ ಪಠಾಣ ಮಾತನಾಡಿದರು.

Abushama Hawaldar
ತಾಲೂಕಿನ ಹಿರೇಮಸಳಿ ಯುಬಿಎಚ್‌ಪಿಎಸ್ ಶಾಲೆಯಲ್ಲಿ ನಲಿ ಕಲಿ ೨ನೇ ಸಮಾಲೋಚನೆ ಸಭೆಯನ್ನುದ್ದೇಶಿಸಿ ಇ.ಸಿ.ಒ ನವಾಜಖಾನ ಪಠಾಣ ಮಾತನಾಡಿದರು.
WhatsApp Group Join Now
Telegram Group Join Now

ಇಂಡಿ: ಪ್ರತಿಯೊಬ ಶಿಕ್ಷಕರು ವಿಷಯ ಪ್ರಬುದ್ದತೆ ಹೊಂದಿ ಸರಳ ಮಾದರಿಯಲ್ಲಿ ಆಕರ್ಷಕ ಬೋಧನಾ ಶೈಲಿಯನ್ನು ರೂಡಿಸಿಕೊಂಡು ಮಕ್ಕಳಿಗೆ ಮನ ಮುಟ್ಟುವ ಹಾಗೆ ಬೋದನೆ ಮಾಡಬೇಕು ಎಂದು ಇ.ಸಿ.ಒ ನವಾಜಖಾನ ಪಠಾಣ ಹೇಳಿದರು.
ಅವರು ತಾಲೂಕಿನ ಹಿರೇಮಸಳಿ ಯುಬಿಎಚ್‌ಪಿಎಸ್ ಶಾಲೆಯಲ್ಲಿ ನಲಿ ಕಲಿ ೨ನೇ ಸಮಾಲೋಚನೆ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಶಿಕ್ಷಕರು ಪ್ರತಿನಿತ್ಯ ಅಧ್ಯಯನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾತ್ರ ನಿರ್ದಿಷ್ಟವಾದ ಗುರಿ ಮುಟ್ಟಲು ಸಾಧ್ಯ. ಆ ನಿಟ್ಟಿನಲ್ಲಿ ಅಗತ್ಯ ಬೋದನಾ ಸಲಕರಣರಗಳೊಂದಿಗೆ ತರಗತಿ ಕೊಣೆಯಲ್ಲಿ ಹಸನ್ಮುಖಿಯಾಗಿ ಪಾಠ ಬೋದನೆಯಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.
ಈ ಸಮಾಲೋಚನಾ ಸಭೇಯಲ್ಲಿ ಇಂಡಿ ತಾಲೂಕಿನ ನಾಲ್ಕು ಉರ್ದು ಕ್ಲರ್ಸ್ಟನ್ ಸಿಆರ್‌ಪಿಗಳಾದ ಬಿ.ಡಿ.ಛಪ್ಪರಬಂದ, ಫರ್ವೇಜ ಪಟೇಲ, ಭಾಶಾ ಕುಮಸಗಿ, ಐ.ಎ.ಚಿಕ್ಕಲಗಾರ ಇವರ ನೇತೃತ್ವದಲ್ಲಿ ಸಭೆ ಜರುಗಿತು.
ಈ ಸಂದರ್ಭದಲ್ಲಿ ಸಿಆರ್‌ಪಿ ದಾದಾ ಶಾಮನವರ್, ಎಸ್.ಡಿಎಮ್‌ಸಿ ಅಧ್ಯಕ್ಷ ಬಶೀರ ಮುಲ್ಲಾ, ಮುಖ್ಯ ಗುರು ಅಬುತಾಲಿಬ ಹೊಸುರ, ರೇಮನಸಾಬ ಸೌದಾಗರ, ಡಾ|| ಇಬ್ರಾಹಿಂ ಉಸ್ತಾದ, ಎಮ್.ಡಿ.ಯುನುಸು ಬಿಳಗಿ, ಖಲಿಫಾ ಚೌಧರಿ, ಶ್ರೀಮತಿ ಕೆ.ಎ. ಶೇಖ, ವರದಿಗಾರ ಹಸನ ಮುಜಾವರ, ಮಹಮ್ಮದ ನಾಶಿರ ಇನಾಮದಾರ, ಸೇರಿದಂತೆ ಅನೇಕರು ಉಪಸ್ಥರಿದ್ದರು.

WhatsApp Group Join Now
Telegram Group Join Now
Share This Article