ಬಳ್ಳಾರಿ ಫೆ, 11- ಕಲಿಕೆಯೊಂದಿಗೆ ಗಳಿಕೆ ಒಂದು ನವೀನ ಉನ್ನತ ಶಿಕ್ಷಣ ಮಾದರಿಯಾಗಿದ್ದು ಸಾಂಪ್ರದಾಯಿಕ ಪದವಿಯೊಂದಿಗೆ ಕೈಗಾರಿಕಾ ತರಬೇತಿಯನ್ನು ಸಂಯೋಜಿಸುತ್ತದೆ. ಇದು ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾದ ಯೋಜನೆಯಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ನೋಡಲ್ Atleast ಆರ್.ನಾಗೇಶ್ ಅಭಿಪ್ರಾಯಪಟ್ಟರು
ಅವರು ನಗರದ ಸರಳಾದೇವಿ ಕಾಲೇಜಿನ ಸಭಾಂಗಣದಲ್ಲಿ ರೂಸಾ ಅನುದಾನದಡಿಯಲ್ಲಿ ವಾಣಿಜ್ಯಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ‘ ಕಲಿಕೆ ಮತ್ತು ಗಳಿಕೆ, ಅನುಷ್ಠಾನ, ಅಭಿವೃದ್ಧಿ ಮತ್ತು ಸವಾಲುಗಳು ‘ ವಿಶೇಷ
ಸಭೆಯನ್ನು ಉದ್ಘಾಟಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಓದುತ್ತಿರುವಾಗಲೇ ಕೆಲಸದ ಅನುಭವ ಮತ್ತು ಗಳಿಕೆಯ ಅವಕಾಶವನ್ನು ಕಲ್ಪಿಸಿ ಅವರಲ್ಲಿ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿ ಕೌಶಲ್ಯಗಳನ್ನು ಒದಗಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಜಿ.ಪ್ರಹ್ಲಾದ್ ಚೌದ್ರಿ ಯುವಸಮುದಾಯ ಶಿಕ್ಷಣದ ಇಂತಹ ಯೋಜನೆಗಳ ಲಾಭವನ್ನು ಸಮರ್ಪಕವಾಗಿ ಪಡೆಯಬೇಕೆಂದರು.
ಸಂಪನ್ಮೂಲ ವ್ಯಕ್ತಿಗಳಾದ ಶ್ರೀನಾಥ್ ಗಟ್ಟು,ಹರೀಶ್ ವಿ, ಉಜ್ವಲ್ ಕಿರಣ್,ಸಮೀರ್ ನರಸಾಪುರ, ಜೈನ ಎಂ ಹರನ್, ಡಾ.ಜಿಲಾನ್ ಭಾಷಾ, ಅರ್ಜುನ್ ಶತ್ರುಂಜಯ್ ಮಾತನಾಡಿದರು.
ಈ ಸಂದರ್ಭದಲ್ಲಿ ವಿಭಾಗದ ಮುಖ್ಯಸ್ಥ ಡಾ. ಕನ್ಯಾಕುಮಾರಿ ಉಡಗಿ, ಪ್ರಾಧ್ಯಾಪಕರಾದ ಡಾ. ಗುರುಬಸಪ್ಪ. ,ಡಾ.ಮಮತಾ, ಅತಿಥಿ ಉಪನ್ಯಾಸಕರಾದ ಗಂಗಾಧರ್,ಚೈತ್ರ ಹಾಗೂ ಬಳ್ಳಾರಿ, ದಾವಣಗೆರೆ, ಕೊಪ್ಪಳ ವಿವಿಯ ಸಂಲಗ್ನತೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು


