ಹಸಿರು ಕ್ರಾಂತಿ ವರದಿ , ಜಮಖಂಡಿ;ಮೆರವಣಿಗೆ ಸಂದರ್ಭದಲ್ಲಾಗಲಿ, ಸೋಷಿಯಲ್ ಮೀಡಿಯಾಗಳ ಮುಖಾಂತರ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕೆಲಸ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುವದು ಎಂದು ಡಿವೈಎಸ್‌ಪಿ ಸೈಯದ್ ರೋಷನ್ ಜಮೀರ ಹೇಳಿದರು. ನಗರಠಾಣೆಯ ಸಭಾಭವನದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಶಾಂತಿಪಾಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಗಣೇಶಹಬ್ಬ ಜೊತೆಗೆ ಮುಸ್ಲಿಂ ಬಾಂಧವರ ಈದ್ ಮಿಲಾದ್ ಎರಡೂ ಹಬ್ಬಗಳು ಬಂದಿರುವದರಿಂದ ಅತ್ಯಂತ ಸಿಸ್ಥಿನಿಂದ ಹಬ್ಬವನ್ನು ಆಚರಿಬೇಕು, ಯಾವುದೇ ಅಹಿತ ಕರ ಘಟನೆಗಳು ನಡೆಯದಂತೆ ಸಭೆಗೆ ಹಾಜರಾಗಿರುವ ಹಿರಿಯರು ಕ್ರಮ ಜಗುಗಿಸಬೇಕು, ತಮ್ಮ ಸಮಾಜದ ಯುವಕರನ್ನು ವಾಲಂಟಿಯರ್‌ಗಳನ್ನಾಗಿ ನಿಯಮಿಸಿ ಶಾಂತಿಯುತವಾಗಿ ಹಬ್ಬ ಆಚರಿಸಬೇಕು ಈ ಕುರಿತು ಪ್ರಾರ್ಥನಾ ಸ್ಥಳಗಳಲ್ಲಿ ಮಾಹಿತಿ ನೀಡಬೇಕು ಎಂದು ಹೇಳಿದರು. ಸಿಪಿಐ ಮಲ್ಲಪ್ಪ ಮಡ್ಡಿ ಮಾತನಾಡಿ ಕಳೆದ ಎರಡು ವರ್ಷಗಳಿಂದ ಬಳಸುವ ಮಾರ್ಗದಲ್ಲೇ ಮೆರವಣಿಗೆಗೆ ಅನುಮತಿ ನೀಡಲಾಗಿದೆ. ಬೈಕ್‌ಗಳನ್ನು ಬೇಕಾಬಿಟ್ಟಿಯಾಗಿ ಚಲಾಯಿಸುವದು, ಶಾಂತಂತೆ ಕದಡುವಂತೆ ವರ್ತಿಸದಂತೆ ಯುವಕರಿಗೆ ತಿಳಿ ಹೇಳಬೇಕು ಎಂದು ತಿಳಸಿದರು. ರಫೀಕ್ ಬಾರಿಗಡ್ಡಿ, ಅಬುಬಕರ್ ಕುಡಚಿ, ರಾಕೇಶ್‌ಲಾಡ್, ಪ್ರದೀಪ ಮೆಟಗುಡ್, ಮಲ್ಲುಮಠ,ಗಣೇಶ ಶಿರಗಣ್ಣವರ, ನಗರಸಭೆ ಸದಸ್ಯರಾದ ಕುಶಾಲ ವಾಘಮೊರೆ, ಸುನೀಲ ಸಿಂಧೆ ಮಾತನಾಡಿದರು. ಜಮಖಂಡಿಯಲ್ಲಿ ಕಾಡಸಿದ್ದೇಶ್ವರ ದೇವಸ್ಥಾನ, ಅಬುಬಕರ್ ದರ್ಗಾಗಳಳಿವೆ ಇಲ್ಲಿ ಯಾವಾಗಲೂ ಕೋಮುಗಲಭೆಗಳಾದ ಇತಿಹಾಸ ಇಲ್ಲ ಆದ್ದರಿಂದ ಎಲ್ಲರೂ ಸೇರಿ ಹಬ್ಬಗಳನ್ನು ಶಾಂತಿಯಿಂದ ಆಚರಿಸುವದಾಗಿ ತಿಳಿಸಿದರು. ಕ್ರೈಂವಿಭಾಗದ ಪಿಎಸ್‌ಐ ನಾಗರಾಜ ಕಾಜಗಾರ, ನಗರಠಾಣಿ ಪಿಎಸ್‌ಐ ಅನೀಲ ಕುಂಬಾರ ವೇದಿಕೆಯಲ್ಲಿದ್ದರು.