ವಿಜಯಪುರ,೨೪ ಜುಲೈ : ಜಿಲ್ಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಮನಸ್ಸಿಗೆ ಬಂದಂತೆ ಡೋನೆ?ನ್ ಹೆಸರಿನಲ್ಲಿ ದುಡ್ಡು ವಸೂಲಿ ಮಾಡುವ ದಂಧೆಯಾಗಿ ಮಾರ್ಪಾಡುಗಳಾಗಿದ್ದು ಖಂಡನೀಯ. ಶಿಕ್ಷಣ ವ್ಯಾಪಾರೀಕರಣದ ವಿರುದ್ಧ ದಲಿತ ವಿದ್ಯಾರ್ಥಿ ಪರಿ?ತ್ ಸತತ ಹೋರಾಟ ಮಾಡುತ್ತ ಬರುತ್ತಿದ್ದು, ಪರಿಣಾಮವಾಗಿ ಜಿಲ್ಲೆಯ ಎರಡು ಭ್ರ? ಬಿ.ಎಡ್ ಕಾಲೇಜುಗಳನ್ನು ೩ ವ?ಗಳ ಕಾಲ ಬ್ಯಾನ್ ಮಾಡಿಸುವಲ್ಲಿ ದಲಿತ ವಿದ್ಯಾರ್ಥಿ ಪರಿ?ತ್ ಯಶಸ್ವಿಯಾಗಿದೆ ಎಂದು ಪರಿ?ತ್ ಸಂಸ್ಥಾಪಕ ಅಧ್ಯಕ್ಷ ಶ್ರೀನಾಥ ಪೂಜಾರಿ ಹೇಳಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದುಡ್ಡು ಇದ್ದವರೆಗೆ ಮಾತ್ರ ಶಿಕ್ಷಣ ಎಂಬಂತೆ ಭ್ರ? ವ್ಯವಸ್ಥೆಯ ನಿರ್ಮಾಣ ಮಾಡಿಕೊಂಡಿದ್ದಾರೆ. ಶಿಕ್ಷಣ ಸೇವೆ ರೀತಿಯಲ್ಲಿ ನೀಡಬೇಕಾದ ಖಾಸಗಿ ಶಿಕ್ಷಣ ಸಂಸ್ಥೆಗಳು ಇಂದು ದುಡ್ಡು ಮಾಡುವ ಕೇಂದ್ರಗಳಾಗಿವೆ. ಇದರಿಂದಾಗಿ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಕೈಗೆಟುಕುದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಖಾಸಗಿ ಶಾಲೆಗಳಲ್ಲಿ ಡೊನೇ?ನ್ ಹಾವಳಿ ತಡೆಯಲು ಸರ್ಕಾರವು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ ಆದರೆ ಅವು ಯಾವು ಕೂಡ ಜಾರಿಗೆ ಬರುತ್ತಿಲ್ಲ. ಡೊನೇ?ನ್ ತಡೆಯಲು ಸರ್ಕಾರವು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ನಿಯಂತ್ರಣ ಪ್ರಾಧಿಕಾರಗಳನ್ನು ರಚಿಸಿದೆ. ಅಲ್ಲದೆ, ಡೊನೇ?ನ್ ಪಡೆದು ಶಾಲೆ ನಡೆಸುತ್ತಿರುವ ಶಾಲೆಗಳ ಮಾನ್ಯತೆಯನ್ನು ರದ್ದುಪಡಿಸುವ ಅಧಿಕಾರವನ್ನು ಈ ಪ್ರಾಧಿಕಾರಗಳಿಗೆ ನೀಡಲಾಗಿದೆ. ಆದರೆ ಈ ಪ್ರಾಧಿಕಾರ ಹೆಸರಿಗೆ ಮಾತ್ರ ಎಂಬಂತಾಗಿದೆ. ಡೋನೆ?ನ್ ತಡೆಗೂ ನಮಗೆ ಸಂಬಂಧವೇ ಇಲ್ಲ ಎಂಬ ಮನೋಭಾವ ಶಿಕ್ಷಣ ಇಲಾಖೆ ಹೊಂದಿದ್ದು, ಈ ಕುರಿತು ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ಜಿಲ್ಲೆಯ ಶಾಲಾ-ಕಾಲೇಜುಗಳು ಸರ್ಕಾರ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಶುಲ್ಕವನ್ನು ಪಡೆದುಕೊಳ್ಳುತ್ತಿದ್ದು, ಜಿಲ್ಲೆಯ ಯಾವುದೇ ಶಿಕ್ಷಣ ಸಂಸ್ಥೆಗಳು ನಿಯಮ ಪಾಲಿಸುತ್ತಿಲ್ಲ. ಇದರಿಂದ ಬಡ ಪೋ?ಕರ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳುತ್ತಿದೆ. ದಲಿತ ವಿದ್ಯಾರ್ಥಿ ಪರಿ?ತ್ ಈ ಖಾಸಗಿ ಶಿಕ್ಷಣ ಸಂಸ್ಥೆಗಳ ಡೋನೆ?ನ್ ಹಾವಳಿ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತ ಬರುತ್ತಿದೆ ಎಂದರು.
ದಲಿತ ವಿದ್ಯಾರ್ಥಿ ಪರಿ?ತ್ ಹೋರಾಟದ ಫಲವಾಗಿ ಜಿಲ್ಲೆಯ ಎರಡು ಃಇಜ ಕಾಲೇಜುಗಳನ್ನು ೩ ವ? ಬ್ಯಾನ್ ಹಾಗೂ ಎರಡು ಕಾಲೇಜುಗಳಿಗೆ ತಲಾ ೩೦ ಲಕ್ಷ ದಂಡ ಹಾಕಿಸುವಲ್ಲಿ ಇಂದು ಯಶಸ್ವಿಯಾಗಿದ್ದೇವೆ. ವಿಜಯಪುರ ನಗರದ ಎಸ್. ಎಮ್.ಆರ್.ಕೆ ಬಿ.ಎಡ್ ಕಾಲೇಜ ಹಾಗೂ ಕುಮಾರಿ ಮೋನಿಕಾ ಕನ್ನಿ ಬಿ.ಎಡ್ ಕಾಲೇಜ ನವರು ಬಿ.ಎಡ್ ಪ್ರವೇಶಾತಿ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿ ಹೆಚ್ಚುವರಿ ಡೋನೆ?ನ್ ಪಡೆಯುತ್ತಿರುವ ಬಗ್ಗೆ ಮತ್ತು ಪರಿಣಿತ ಇಲ್ಲದ ಉಪನ್ಯಾಸಕರು, ಭೋದಕರು ಹಾಗೂ ಶಿಕ್ಷಕರಿಂದ ಭೋದಿಸಲಾಗುತ್ತಿದೆ ಹಾಗೂ ಮೂಲಭೂತ ಸೌಕರ್ಯಗಳಿದ ಕಟ್ಟಡಗಳಲ್ಲಿ ಭೋದನೆ ಜೊತೆಗೆ ಹೆಚ್ಚುವರಿಯಾಗಿ ಡೋನೆ?ನ್ ಪಡೆದು ಪರೀಕ್ಷೆಗೆ ಮಾತ್ರ ಬರುವ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿರುವ ಬಗ್ಗೆ ಅಲ್ಲಿನ ವಿದ್ಯಾರ್ಥಿಗಳೆ ಖುದ್ದಾಗಿ ದಲಿತ ವಿದ್ಯಾರ್ಥಿ ಪರಿ?ತ್ ಗೆ ಸಂಪರ್ಕಿಸಿ, ನಮಗೆ ನ್ಯಾಯ ದೊರಕಿಸಿ ಕೊಡಿ ಎಂದು ಕೇಳಿದ ಕಾರಣ ದಿನಾಂಕ ೧೨/೧೧/೨೦೨೪ ರಂದು ವಿದ್ಯಾರ್ಥಿಗಳಿಗೊಂದಿಗೆ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗಿತ್ತು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಈ ಎರಡು ಬಿ.ಎಡ್.ಮಹಾವಿದ್ಯಾಲಯಗಳ ವಿರುದ್ಧ ದಲಿತ ವಿದ್ಯಾರ್ಥಿ ಪರಿ?ತ್ ನ ದೂರು ನೀಡಿದ ಅದರನ್ವಯ ದಿನಾಂಕ: ೦೬.೧೨.೨೦೨೪ ರ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸಭೆಯ ತೀರ್ಮಾನದನ್ವಯ ಸಮಿತಿಯನ್ನು ರಚಿಸಲಾಗಿತ್ತು. ಸದರಿ ಸಮಿತಿ ಮಹಾವಿದ್ಯಾಲಯಗಳಿಗೆ ಭೇಟಿ ನೀಡಿ ಪರಿಶೀಲಿಸಿದ ವರದಿಯನ್ನು ವಿಶ್ವ ವಿದ್ಯಾಲಯದ ೯೪ನೇ ಸಾಮಾನ್ಯ ಸಭೆ ಹಾಗೂ ೨೦೨೫ನೇ ಸಾಲಿನ ೫ನೇ ಸೀಡಿಕೇಟ್ ಸಭೆಯಲ್ಲಿ ಪ್ರಸ್ತುತಪಡಿಸಲಾಯಿತು. ಈ ಸಭೆಯ ಸ್ನಾತಕೋತ್ತರ ಕೇಂದ್ರ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ವಿಜಯಪುರ ದಿನಾಂಕ ೦೮/೦೭/೨೦೨೫ ರಂದು ನಡೆದಿರುತ್ತದೆ. ಸಭೆಯಲ್ಲಿ
ಸಿಂಡಿಕೇಟ್ ಸದಸ್ಯರು ಸದರಿ ಮಹಾವಿದ್ಯಾಲಯಗಳಲ್ಲಿ ಕಟ್ಟಡ, ಪರಿಣಿತ ಬೋಧಕ ಸಿಬ್ಬಂದಿಗಳು ಇರುವುದಿಲ್ಲ. ಕೇವಲ ಪ್ರವೇಶಾತಿ ಸಂದರ್ಭದಲ್ಲಿ ಶುಲ್ಕವನ್ನು ಪಡೆದು ಪರೀಕ್ಷೆ ನಡೆಸಲಾಗುತ್ತಿದೆ. ಯಾವುದೇ ಬೋಧನಾ ಕಾರ್ಯ ಜರುಗುತ್ತಿಲ್ಲ ಎಂಬ ಮಾಹಿತಿಯನ್ನು ಸಭೆಗೆ ನೀಡಿದರು. ಸಮಿತಿಯು ಸಲ್ಲಿಸಿದ ವರದಿಯನ್ನು ಪರಿಶೀಲಿಸಿ, ಎಸ್, ಎಮ್, ಆರ್, ಕೆ ಬಿ.ಎಡ್ ಕಾಲೇಜು ವಿಜಯಪುರ ಹಾಗೂ ಕುಮಾರಿ ಮೋನಿಕಾ ಬಸವರಾಜ ಕನ್ನಿ ಬಿ.ಎಡ್ ಕಾಲೇಜು ಅಥಣಿ ರಸ್ತೆ, ವಿಜಯಪುರ ಈ ಮಹಾವಿದ್ಯಾಲಯಗಳನ್ನು ೨೦೨೫-೨೬ ಶೈಕ್ಷಣಿಕ ಸಾಲಿನಿಂದ ಪ್ರವೇಶಾತಿಗೆ ಅವಕಾಶ ನೀಡದೇ ೦೩ ವ? ಅವಧಿಗೆ ಅಮಾನತ್ತಿನಲ್ಲಿಡಲು ಹಾಗೂ ಎರಡು ಕಾಲೇಜುಗಳಿಗೆ ತಲಾ ೩೦ ಲಕ್ಷ ದಂಡ ವಿಧಿಸಲು ಸಭೆಯು ತೀರ್ಮಾನಿಸಿದೆ. ಮುಂದುವರೆದು ಹಿಂದಿನ ಶೈಕ್ಷಣಿಕ ವ?ದಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಸಮೀಪದ ಮಹಾವಿದ್ಯಾಲಯಗಳಲ್ಲಿ ವರ್ಗಾಯಿಸಲು ಸದರಿ ಸಭೆಯು ತೀರ್ಮಾನಿಸಿದೆ.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಈ ನಡೆಯು ದಲಿತ ವಿದ್ಯಾರ್ಥಿ ಪರಿ?ತ್ ಸ್ವಾಗತಿಸುತ್ತದೆ. ಕೊಡಲೇ ಎರಡು ಕಾಲೇಜುಗಳಲ್ಲಿ ಹಿಂದಿನ ಶೈಕ್ಷಣಿಕ ವ?ದಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಒಳ್ಳೆಯ ಶೈಕ್ಷಣಿಕ ವಾತಾವರಣ ಇರುವ ಮಹಾವಿದ್ಯಾಲಯಗಳಲ್ಲಿ ವರ್ಗಾಯಿಸಬೇಕು ಜೊತೆಗೆ ಸದರಿ ಎರಡು ಕಾಲೇಜುಗಳು ಗುಣಮಟ್ಟ ಶಿಕ್ಷಣ ನೀಡದೇ ಮತ್ತು ಸರ್ಕಾರ ನಿಯಮಗಳ ಪಾಲನೆ ಮಾಡದೇ ಇರುವುದು ಕಂಡು ಬಂದಿದೆ. ಕೊಡಲೇ ಸರ್ಕಾರ ಇವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳುವ ಮೂಲಕ ಡೋನೆ?ನ್ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಠಿಣ ಸಂದೇಶ ರವಾನೆ ಮಾಡಬೇಕು.
ಮುಂದಿನ ದಿನಗಳಲ್ಲಿ ಜಿಲ್ಲೆಯ ಹಲವಾರು ಭಾಗಗಳಲ್ಲಿ ಅನಧಿಕೃತ, ಕಾನೂನು ಬಾಹಿರ ಸರ್ಕಾರ ನಿಯಮಗಳನ್ನು ಪಾಲಿಸದೆ ಇರುವ ಶಾಲಾ, ಕಾಲೇಜು ಹಾಗೂ ಸಂಸ್ಥೆಗಳ ವಿರುದ್ಧ ನಮ್ಮ ಹೋರಾಟ ತೀವ್ರವಾಗಿರಲಿದೆ ಎಂದು ಶ್ರೀನಾಥ ಪೂಜಾರಿ ಹೇಳಿದರು.
ಈ ವೇಳೆ ಪರಿ?ತ್ ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ, ವಿಜಯಪುರ ಜಿಲ್ಲಾ ಸಂಚಾಲಕ
ಅಕ್ಷಯಕುಮಾರ ಅಜಮನಿ, ಜಿಲ್ಲಾ ಸಹ ಸಂಚಾಲಕ ಮಹಾದೇವ ಚಲವಾದಿ, ಮುಖಂಡರಾದ ಸಂದೇಶ ಹಾಗೂ ಯಾಸೀನ ಇನಾಮದಾರ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.