ಧೂಳಿನಿಂದ ಕಂಗೆಟ್ಟ ಸಾರ್ವಜನಿಕರು

Hasiru Kranti
ಧೂಳಿನಿಂದ ಕಂಗೆಟ್ಟ ಸಾರ್ವಜನಿಕರು
WhatsApp Group Join Now
Telegram Group Join Now
ಚನಮ್ಮನ ಕಿತ್ತೂರು: ವಾಹನಗಳ ಓಡಾಟದಿಂದಾಗಿ ಮೇಲೇಳುತ್ತಿರುವ ಧೂಳಿನಿಂದಾಗಿ ಸಾರ್ವಜನಿಕರು ಕಂಗೆಟ್ಟುಹೋಗಿದ್ದಾರೆ.
ರಣಗಟ್ಟಿ ಕೆರೆ ಅಭಿವೃದ್ಧಿ ಕಾರ್ಯ ಪ್ರಾರಂಭಗೊಂಡಿದ್ದು ಹೂಳೆತ್ತಿದ ಮಣ್ಣನ್ನು ಪ್ರಮುಖ ಬೀದಿಯಿಂದಲೇ ಸಾಗಿಸುತ್ತಿರುವುದರಿಂದ ಹಾಗು ರಸ್ತೆ ಅಗಲೀಕರಣ ಕೆಲಸದಿಂದಾಗಿ ಮಣ್ಣು ರಸ್ತೆಯ ತುಂಬ ಹರಡಿ ವಾಹಗಳು ಸಂಚರಿಸಿದಾಗ ಧೂಳು ಮೇಲೆದ್ದು ಅಡ್ಡಾಡುವ ಜನ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ರಸ್ತೆಯ ಅಕ್ಕಪಕ್ಕದ ಅಂಗಾಡಿಕಾರರು ತಮ್ಮ ಅಂಗಡಿಗಳನ್ನು ದಿನಕ್ಕೆ ನಾಲ್ಕಾರು ಬಾರಿ ಸ್ವಚ್ಛಗೊಳಿಸಲು ಹೆಣಗಾಡುವುದರ ಜೊತೆಗೆ ಮಾಸ್ಕ್ ಹಾಕಿಕೊಂಡು ಕುಳಿತುಕೊಳ್ಳುವುದು ಅನಿವಾರ್ಯವಾಗಿಬಿಟ್ಟಿದೆ. ಧೂಳು ಮಿಶ್ರಿತ ಕಲುಷಿತ ವಾಯುವಿನ ಉಸಿರಾಟದ ಪರಿಣಾಮ ಬಹುತೇಕ ಜನರು ನೆಗಡಿ, ಕೆಮ್ಮು, ಅಲರ್ಜಿ ಹಾಗು ಅಸ್ತಮಾದಿಂದ ನರಳುತ್ತಿರುವುದು ಇಲ್ಲಿ ಸಾಮಾನ್ಯವಾಗಿಬಿಟ್ಟಿದೆ.
ಈ ದುಷ್ಪರಿಣಾಮವನ್ನು ತಪ್ಪಿಸಲು ಜನರ ಒತ್ತಾಯದ ಮೇರೆಗೆ ಟ್ರ್ಯಾಕ್ಟರ್ ಮುಖಾಂತರ ನೀರು ಸಿಂಪರಣೆಯನ್ನು ಮಾಡಲಾಗುತ್ತಿದೆಯಾದರೂ ಅದು ಕೆಲಮಟ್ಟಿಗೆ ಮಾತ್ರ ನಿಯಂತ್ರಿಸಲು ಸಾಧ್ಯವಾಗುತ್ತಿದೆ.
ಮಣ್ಣು ಸಾಗಿಸಲು ಪರ್ಯಾಯ ವ್ಯವಸ್ಥೆ ಕಷ್ಟ ಸಾಧ್ಯವಾಗಿರುವುದರಿಂದ ಜನರೇ ಮುನ್ನೆಚ್ಚರಿಕೆ ವಹಿಸಿ ಮಾಸ್ಕ್ ಧರಿಸುವಂತೆ ವೈದ್ಯರು ಸಲಹೆ ನೀಡುತ್ತಿದ್ದಾರೆ.
WhatsApp Group Join Now
Telegram Group Join Now
Share This Article