ಘಟಪ್ರಭಾ: ಇಲ್ಲಿನ ಶ್ರೀರಾಮಸೇನೆ ವತಿಯಿಂದ ದುರ್ಗಾಮಾತಾ ದೌಡ ಶುಕ್ರವಾರದಂದು ನವರಾತ್ರಿ ಉತ್ಸವದಲ್ಲಿ ದುರ್ಗಾಷ್ಟಮಿ ನಿಮಿತ್ತ ಶ್ರೀ ಕಾಳಿಕಾ ದೇವಸ್ಥಾನದಿಂದ ಮೃತ್ಯುಂಜಯ ವೃತ್ತದ ಶ್ರೀ ದಾನೇಶ್ವರಿ ದೇವಸ್ಥಾನದ ವರೆಗೆ ದುರ್ಗಾದೌಡ ಕಾರ್ಯಕ್ರಮ ನಡೆಯಿತು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ಸಾನಿಧ್ಯವನ್ನು ಹೊಸಮಠದ ಪೂಜ್ಯ ಶ್ರೀ ವಿರುಪಾಕ್ಷ ಮಹಾಸ್ವಾಮಿಗಳು ವಹಿಸಿದ್ದರು, ಶ್ರೀರಾಮಸೇನೆ ಬೆಳಗಾವಿ ಜಿಲ್ಲೆಯ ಕಾರ್ಯದರ್ಶಿ ರವಿ ಪೂಜಾರಿ, ಕೆ ಆರ್. ಹೆಚ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಮಣ್ಣ ಹುಕ್ಕೇರಿ , ಸುರೇಶ ಪಾಟೀಲ, ಶ್ರೀಕಾಂತ ಮಹಾಜನ ಅವರು ಮಾತನಾಡಿದರು.
ಮಲ್ಲಿಕಾರ್ಜುನ ತುಕ್ಕಾನಟ್ಟಿ. ಶ್ರೀಕಾಂತ ಕುಲಕರ್ಣಿ, ರಮೇಶ್ ತುಕ್ಕಾನಟ್ಟಿ, ಕಲ್ಲಪ್ಪಾ ಕಾಡದವರ, ಕೊಟ್ರೇಶ ಪಟ್ಟಣಶೆಟ್ಟಿ, ಗುರು ಚಚಡಿ, ನವೀನ ತುಕ್ಕಾನಟ್ಟಿ, ಪುಟ್ಟು ಖಾನಾಪುರೆ, ಸವಿತಾ ಪಟ್ಟಣಶೆಟ್ಟಿ, ಶಶಾಂಕ ಹುದ್ದಾರ, ಪ್ರಭು ಅಂತರಗಂಗಿ, ತಮ್ಮಣ್ಣ ಅರಭಾವಿ, ಕಲ್ಲಪ್ಪ ಕಾಳಗೆ ಅವರು ಸೇರಿದಂತೆ ನೂರಾರು ರಾಮ ಭಕ್ತರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.