ಚನ್ನಮ್ಮನ ಕಿತ್ತೂರು: ಚನ್ನಮ್ಮನ ಕಿತ್ತೂರಿನ ಬಸರಕೋಡ ಗ್ರಾಮದಲ್ಲಿ 13 ವರ್ಷಗಳ ನಂತರ ದುರ್ಗಾ ಮತ್ತು ಲಕ್ಷ್ಮೀ ದೇವಿಯ ಜಾತ್ರೆಯು ಭಕ್ತಿಭಾವ ಹಾಗೂ ಅಪಾರ ವಿಜೃಂಭಣೆಯಿಂದ ಜರುಗಿತು.
ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಜಾತ್ರೆಯ ಸಂದರ್ಭದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದವು. ಬೆಳಗ್ಗೆ ನಡೆದ ಹೋಮ-ಹವನಗಳಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು. ನಂತರದ ಹೊನ್ನಾಟ ಉತ್ಸವದಲ್ಲಿ ದೇವಿಯ ಪಲ್ಲಕ್ಕಿ ಮೆರವಣಿಗೆ ಭಕ್ತರಲ್ಲಿ ಸಂಭ್ರಮ ಮೂಡಿಸಿತು. ದೇಶಿಯರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ವಿಶೇಷ ಆಕರ್ಷಣೆಯ ಕೇಂದ್ರಬಿಂದುವಾಯಿತು.
ಸಂಜೆಯ ವೇಳೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜಾತ್ರೆಗೆ ಮೆರಗು ತಂದವು. ಭಜನೆ, ಕೀರ್ತನೆ, ಹರಿಕಥೆಯ ಜೊತೆಗೆ ಸ್ಥಳೀಯ ಕಲಾವಿದರಿಂದ ನೃತ್ಯ-ನಾಟಕ ಪ್ರದರ್ಶನಗಳು ಭಕ್ತರನ್ನು ರಂಜಿಸಿದವು. ಗ್ರಾಮದಾದ್ಯಂತ ಹಬ್ಬದ ವಾತಾವರಣ ಮನೆ ಮಾಡಿತ್ತು. ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸಾಹ ಎಲ್ಲೆಡೆ ಕಾಣಿಸಿತು. ಈ ಜಾತ್ರೆಯು ಗ್ರಾಮಸ್ಥರ ಒಗ್ಗಟ್ಟು ಮತ್ತು ಭಕ್ತಿಯ ಸಂಕೇತವಾಗಿ ಮತ್ತೊಮ್ಮೆ ದೇವಿಯ ಕೃಪೆಗೆ ಪಾತ್ರವಾಯಿತು.
ಹೊನ್ನಾಟ ಆಡುತ್ತ ದೇವಿಯರನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡುತ್ತಿರುವ ಭಕ್ತರು.