ದುರದುಂಡೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

Hasiru Kranti
ದುರದುಂಡೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ
WhatsApp Group Join Now
Telegram Group Join Now
ಸಂಕೇಶ್ವರದ : ಎಸ್.ಡಿ.ವಿ.ಎಸ್.ಸಂಘದ ದುರದುಂಡೇಶ್ವರ ಪ್ರೌಢ ಶಾಲೆಯ 2004-05 ನೇ ಸಾಲಿನ 10 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು 20 ವರ್ಷದ ನಂತರ ತಾವು ಓದಿದ ಶಾಲೆಯಲ್ಲಿ  ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಸಂಭ್ರಮಾಚರಣೆಯು ವಿಭಿನ್ನ ಸಮಾರಂಭಕ್ಕೆ ಸಾಕ್ಷಿಯಾಯಿತು.
ಭಾನುವಾರ ಎಸ್.ಡಿ.ವಿ.ಎಸ್.ಸಂಘದ ದುರದುಂಡೇಶ್ವರ ಪ್ರೌಢ ಶಾಲೆಯಲ್ಲಿನ ಸಭಾ ಭವನದಲ್ಲಿ 2005-05 ಸಾಲಿನ 10ನೇ ತರಗತಿಯ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮದ ಜರುಗಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ ಯಮಕನಮರಡಿಯ ಹುಣಸಿಕೊಳ್ಳ ಮಠದ ಪರಮ ಪೂಜ್ಯರಾದ ಸಿದ್ದಬಸವ ದೇವರು ಮಾತನಾಡಿ, ನಮ್ಮ ಬದುಕಿಗೆ ಶಿಕ್ಷಣ ಬಾಳು ನೀಡಿದ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಶೈಕ್ಷಣಿಕ ಸೌಲಭ್ಯದಿಂದ ವಂಚಿತರಾದವರಿಗೆ ಸೌಲಭ್ಯ ಒದಗಿಸಲು ಮುಂದಾಗಬೇಕು ಎಂದರು.
ತಮಗೆ ಪಾಠ ಮಾಡಿದ ನಿವೃತ್ತ ಶಿಕ್ಷಕರಾದ ಪುರಾಣಿಕಮಠ, ಡಿ.ಕೆ.ಮರಿಗುದ್ದಿ, ಐ.ಜಿ.ಪಾಟೀಲ, ಆರ್.ಎಸ್.ಪಾಟೀಲ, ಎಸ್.ಎಸ್. ಪಾಟೀಲ, ಭಾವಿಮನಿ, ಬಿ.ಎ.ತಳವಾರ್, ಎ.ಆರ್.ಕಿಲ್ಲೇದಾರ್, ಉಮಾ ಹಿರೇಮಠ, ವಿ.ಪಿ.ಪಾಟೀಲ, ಎಮ್.ಬಿ.ಕೊಳದೂರ ಶಿಕ್ಷಕರಾದ ಎಸ್.ಆರ್. ಚುನುಮುರಿ, ಎ.ಬಿ.ಕಾಮೇರಿ, ಎ.ಬಿ.ಹಲವಾಯಿ, ರೇಷ್ಮಿ ಮೆಂಡಗುದ್ದಲ್ಲಿ ಅವರನ್ನು ಪ್ರೀತಿಯಿಂದ ಸನ್ಮಾನಿಸಿ ಗುರುವಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಖುಷಿ ಖುಷಿಯಾಗಿ ಎಲ್ಲ ಸ್ನೇಹಿತರು
ಎಲ್ಲರೊಂದಿಗೆ ಬೆರೆತು ವಿದ್ಯಾರ್ಥಿ ಜೀವನದ ಸಿಹಿ-ಕಹಿ ನೆನಪುಗಳನ್ನು ಮೆಲುಕು ಹಾಕಿ ತಮ್ಮ ಶಾಲೆಯಲ್ಲಿನ ಅನುಭವಗಳನ್ನು ನೆನೆದು ಸಂತಸ ವ್ಯಕ್ತಪಡಿಸಿದರು.
WhatsApp Group Join Now
Telegram Group Join Now
Share This Article