ಭಾರಿ ಮಳೆಗೆ ನವದೆಹಲಿ ಹಲವು ಭಾಗಗಳಲ್ಲಿ ರಸ್ತೆಗಳು ಜಲಾವೃತ ; ಸಂಚಾರ ಅಸ್ತವ್ಯಸ್ತ

Ravi Talawar
ಭಾರಿ ಮಳೆಗೆ ನವದೆಹಲಿ ಹಲವು ಭಾಗಗಳಲ್ಲಿ ರಸ್ತೆಗಳು ಜಲಾವೃತ ; ಸಂಚಾರ ಅಸ್ತವ್ಯಸ್ತ
WhatsApp Group Join Now
Telegram Group Join Now

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬುಧವಾರ ಸಂಜೆಯಿಂದ ಸುರಿಯುತ್ತಿರುವ ಭಾರಿ ಮಳೆಗೆ ಹಲವು ಭಾಗಗಳಲ್ಲಿ ರಸ್ತೆಗಳು ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿದೆ. ಪರಿಣಾಮ ದೆಹಲಿ ನಿವಾಸಿಗಳು ಗುರುವಾರ ಬೆಳಗ್ಗೆ ಸಂಚಾರ ದಟ್ಟಣೆ ಸಮಸ್ಯೆ ಅನುಭವಿಸಿದರು. ಹವಾಮಾನ ಇಲಾಖೆ ಪ್ರಕಾರ, ಋತುವಿನ ಸರಾಸರಿಗಿಂತ ಮೂರು ಪಟ್ಟು ಕಡಿಮೆ, 23 ಡಿಗ್ರಿ ಸೆಲ್ಸಿಯಸ್​ನಷ್ಟು ಕನಿಷ್ಠ ತಾಪಮಾನ ದಾಖಲಾಗಿದೆ. ಇಂದು ಬೆಳಗ್ಗೆ 8.30ರ ವೇಳೆಗೆ ತೇವಾಂಶದ ಪ್ರಮಾಣ ಶೇ.100ರಷ್ಟಿತ್ತು.

ರಾಷ್ಟ್ರ ರಾಜಧಾನಿಗೆ ಪ್ರಾತಿನಿಧಿಕ ಡೇಟಾ ಒದಗಿಸುವ ಸಫ್ದರ್‌ಜಂಗ್ ವೀಕ್ಷಣಾಲಯವು ಕಳೆದ 24 ಗಂಟೆಗಳಲ್ಲಿ ಗುರುವಾರ ಬೆಳಗ್ಗೆ 8.30 ರವರೆಗೆ 77.1 ಮಿಮೀ ಮಳೆಯನ್ನು ದಾಖಲಿಸಿದೆ. ಲೋಧಿ ರಸ್ತೆಯ ವೀಕ್ಷಣಾಲಯ 92.2 ಮಿಮೀ, ರಿಡ್ಜ್ 18.2 ಮಿಮೀ, ಪಾಲಂ 54.5 ಮಿಮೀ ಮತ್ತು ಅಯಾನಗರದಲ್ಲಿ 62.4 ಮಿಮೀ ಮಳೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಐಎಂಡಿ ತಿಳಿಸಿದೆ.

ಜಿಟಿಕೆ ಡಿಪೋ ಬಳಿ ಜಲಾವೃತಗೊಂಡಿರುವುದರಿಂದ ಜಿಟಿಕೆ ರಸ್ತೆಯ ಎರಡೂ ಮಾರ್ಗಗಳಲ್ಲಿ, ಮುಕರ್ಬಾ ಚೌಕ್‌ನಿಂದ ಆಜಾದ್‌ಪುರ ಚೌಕ್ ಕಡೆಗೆ ಸಂಚಾರಕ್ಕೆ ತೊಂದರೆಯಾಗಿದೆ. ಎಂಬಿ ರಸ್ತೆಯಲ್ಲಿ ನೀರು ನಿಂತಿರುವ ಕಾರಣ ಖಾನ್​ಪುರದಿಂದ ಶೂಟಿಂಗ್​ ರೇಂಜ್​ ಟಿ- ಪಾಯಿಂಟ್​ಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಹಾಗೆಯೇ ರೋಹ್ಟಕ್ ರಸ್ತೆಯ ನಂಗ್ಲೋಯ್‌ನಿಂದ ಟಿಕ್ರಿ ಬಾರ್ಡರ್ ಕ್ಯಾರೇಜ್‌ವೇಯಲ್ಲಿ ಜಲಾವೃತದಿಂದಾಗಿ ಸಂಚಾರಕ್ಕೆ ತೊಂದರೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಪ್ರಯಾಣವನ್ನು ಪ್ಲ್ಯಾನ್​ ಮಾಡಿಕೊಳ್ಳಿ” ಎಂದು ದೆಹಲಿ ಟ್ರಾಫಿಕ್​ ಪೊಲೀಸರು ಸಾಮಾಜಿಕ ಜಾಲತಾಣ ಎಕ್ಸ್​ ಖಾತೆಯಲ್ಲಿ ಸಲಹೆಯನ್ನು ನೀಡಿದ್ದಾರೆ.

“GGR/PDR ಅಂಡರ್‌ಪಾಸ್ ಮತ್ತು ಧೌಲಾ ಕುವಾನ್ ಫ್ಲೈಓವರ್ ಅಡಿ ರಿಂಗ್ ರಸ್ತೆಯ ಬಳಿ ಜಲಾವೃತವಾಗಿರುವ ಕಾರಣ, ರಿಂಗ್ ರಸ್ತೆ, ವಂದೇ ಮಾತರಂ ಮಾರ್ಗ ಮತ್ತು NH 48 ನಲ್ಲಿ ಟ್ರಾಫಿಕ್ ಹೆಚ್ಚಾಗಿದೆ” ದಯವಿಟ್ಟು ಅದಕ್ಕೆ ಅನುಗುಣವಾಗಿ ನಿಮ್ಮ ಪ್ರಯಾಣವನ್ನು ಯೋಜಿಸಿ” ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article