ವಿಜಯನಗರ(ಹೊಸಪೇಟೆ), : ಕ್ಷಯರೋಗಿಗಳು ನಿರಂತರ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಬೇಗ ಗುಣಮುಖರಾಗಬಹುದು ಎಂದು ವೈದ್ಯೆ ಡಾ.ಪೂಜಾ ಹೇಳಿದರು.
ಹೊಸಪೇಟೆ ತಾಲೂಕು ಗಾದಿಗನೂರು ಅರೋಗ್ಯ ಕೇಂದ್ರದಲ್ಲಿ ಕ್ಷಯರೋಗ ಪತ್ತೆ ಹಚ್ಚುವ ನೂತನ ಆಂಡ್ರಾಯ್ಡ್ ಎಕ್ಷರೇ ಯಂತ್ರಕ್ಕೆ ಚಾಲನೆ ನೀಡಿ ಮಂಗಳವಾರ ಅವರು ಮಾತನಾಡಿದರು, ಕ್ಷಯರೋಗಿಗಳು ನಿರಂತರ ಆರು ತಿಂಗಳ ಸೂಕ್ತ ಚಿಕಿತ್ಸೆ ಪಡೆದರೆ ಅಡ್ಡ ಪರಿಣಾಮಗಳು ಉಂಟಾಗಬಹುದು,ಆದ್ದರಿAದ ಚಿಕಿತ್ಸೆ ಜೊತೆಗೆ ಪೌಷ್ಟಿಕ ಆಹಾರ ಸೇವೆನೇ ಮಾಡಬೇಕು, ಕ್ಷಯರೋಗಿಗಳು, ಮೆದುಮೇಹ ಇರುವವರು, ಧೂಮಪಾನ ಮತ್ತು ಮಧ್ಯಪಾನ ಮಾಡುವವರು, ಕ್ಯಾನ್ಸರು, ದೀರ್ಘಕಾಲ ಕಾಯಿಲೆ ಇರುವವರು ಮುಂತಾದ ಕ್ಷಯರೋಗ ಲಕ್ಷಣ ಇರುವವರು ಈ ಅರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಬಂದು ತಪಾಸಣೆ ಮಾಡಿಸಿಕೊಳ್ಳಿ, ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಸಂಜೆ ವೇಳೆ ಜ್ವರ ಬರುವುದು, ಕಫದಲ್ಲಿ ರಕ್ತ ಬೀಳುವುದು, ತೂಕ ಕಡಿಮೆ ಆಗುವುದು, ಕಂಕುಳಲ್ಲಿ ಗಡ್ಡೆ, ಇರುವವರು ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಭೇಟಿ ನೀಡಿ. ಉಚಿತವಾಗಿ ಕಫ ಪರೀಕ್ಷೆ ಮಾಡಿಸಿಕೊಳ್ಳಿ ಕ್ಷಯರೋಗಿಗಳು ಕೆಮ್ಮಿದಾಗ ಸಿನಿದಾಗ ಹೊರ ಬರುವ ಬ್ಯಾಕ್ಟೀರಿಯಾ ಅರೋಗ್ಯವಂತ ವ್ಯಕ್ತಿಗೆ ದೇಹ ಸೇರಿ ಸೋಂಕು ಉಂಟು ಮಾಡುತ್ತದೆ, ಸರಿಯಾಗಿ ಸಮಯಕ್ಕೆ ಸೂಕ್ತ ಚಿಕಿತ್ಸೆ ಪಡೆದರೆ ಕ್ಷಯರೋಗ ನಿಯಂತ್ರಿಸಬಹುದು ಎಂದರು.
ಈ ವೇಳೆ ಅರೋಗ್ಯ ಶಿಕ್ಷಣ ಅಧಿಕಾರಿ ಎಂ.ಪಿ.ದೊಡ್ಡಮನಿ, ತಾಲೂಕು ಕ್ಷಯರೋಗ ಮೇಲ್ವಿಚಾರಕರಾದ ಕಾಸಿಮ್ ಸಾಬ್, ಎಚ್‌ಐಓ ರಾಜೀವ್ ಗಾಂಧಿ, ಪಿಎಚ್‌ಸಿ ಓ.ಸಾವಿತ್ರಿ, ರಾಘವೇಂದ್ರ, ಶ್ವೇತಾ, ಮಂಜುನಾಥ ಸೇರಿದಂತೆ ಅರೋಗ್ಯ ಕೇಂದ್ರದ ಸಿಬ್ಬಂದಿಗಳು ಭಾಗವಹಿಸಿದ್ದರು.
ಗಾದಿಗನೂರು ಗ್ರಾಮದಲ್ಲಿ ಕ್ಷಯರೋಗ ಪತ್ತೆ ಹಚ್ಚುವ ಯಂತ್ರಕ್ಕೆ ಚಾಲನೆ
