ಬೆಳಗಾವಿ : ಕಂಗ್ರಾಳಿ ಬಿಕೆ ಗ್ರಾಮದ ಚರ್ಚ್ ಗಲ್ಲಿಯ ರಸ್ತೆ ನಿರ್ಮಾಣ ಹಾಗೂ ಶಾರೋನ್ ತೆಲಗು ಕ್ರಿಶ್ಚಿಯನ್ ಬ್ರೆಶರ್ನ್ ಚರ್ಚ್ ಅಭಿವೃದ್ಧಿ ಕಾಮಗಾರಿಗೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಸ್ಥಳೀಯ ಜನರೊಂದಿಗೆ ಸೇರಿ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ರಸ್ತೆ ನಿರ್ಮಾಣಕ್ಕಾಗಿ 80 ಲಕ್ಷ ಹಾಗೂ ಚರ್ಚ್ ಅಭಿವೃದ್ಧಿಗೆ 24 ಲಕ್ಷ ರೂ,ಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಂಜೂರು ಮಾಡಿಸಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನಿರಂತರವಾಗಿ ನಡೆಯುತ್ತಿದ್ದು, ಜನರ ಸಹಕಾರದಿಂದಾಗಿ ಇದು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಹಲವಾರು ಹೊಸ ಯೋಜನೆಗಳನ್ನು ತರಲು ಲಕ್ಷ್ಮೀ ಹೆಬ್ಬಾಳಕರ್ ಅವರು ಯೋಜನೆ ಹಾಕಿಕೊೆಡಿದ್ದಾರೆ ಎಂದು ಮೃಣಾಲ ಹೆಬ್ಬಾಳಕರ್ ತಿಳಿಸಿದರು.
ಈ ವೇಳೆ ಚರ್ಚ್ ನ ಅಧ್ಯಕ್ಷರಾದ ಮಾರ್ಕ್, ಉಪಾಧ್ಯಕ್ಷರಾದ ಮೋಸಿಚ್, ಪ್ರಭುದಾಸ್, ಅಡಿವೆಪ್ಪ, ಗ್ರಾಮ ಪಂಚಾಯತ್ ಸದಸ್ಯರಾದ ಮಲ್ಲೇಶ್ ಬುಡ್ರಿ, ಸದೆಪ್ಪ ರಾಜ ಕಟ್ಟಿ, ಜಯರಾಮ್ ಪಾಟೀಲ, ದತ್ತಾ ಪಾಟೀಲ, ನಾತಾಜೀ ಪಾಟೀಲ, ನಾಮದೇವ್ ರಾಥೋಡ್, ಸಿದ್ರಾಯಿ ಬೆಳಗಾವಿ ಮುಂತಾದವರು ಇದ್ದರು.