ಬೆಳಗಾವಿ.ವಾಹನ ಚಾಲನೆ ಮಾಡುವಾಗ ಅಡ್ಡ ಬರುವವರನ್ನು ಉಳಿಸಲು ನೀವು ವಾಹನವನ್ನು ಅಡ್ಡಾಡಿದ್ದಿ ತಿರುಗಿಸಿದರೆ ಅಡ್ಡ ಬಂದವರನ್ನೇನೋ ನೀವು ಉಳಿಸುತ್ತೀರಿ ಆದರೆ ಅವರನ್ನು ಉಳಿಸಲು ನೀವು ನಿಮ್ಮ ಪ್ರಾಣವನ್ನೇ ಬಲಿ ಕೊಡಬೇಕಾಗುತ್ತದೆ.
ವಾಹನ ಚಾಲಕನಾದವನು ತನ್ನ ದಾರಿಗೆ ಅಡ್ಡ ಬರುವ ಯಾವುದೇ ಪ್ರಾಣಿ, ಪಶು, ವಾಹನ ಅಥವಾ ಮಾನವನನ್ನು ಕಾಪಾಡಬೇಕು ಎಂದುಕೊಂಡಿದ್ದರೆ ನಿಮ್ಮ ವಾಹನ ಚಲಿಸುತ್ತಿರುವ ಲೆನ್ ನಲ್ಲಿ ಇದ್ದುಕೊಂಡು, ಗೇರ್ ಇಳಿಸುತ್ತ ಎರಡು ಕೈಗಳಿಂದ ಸ್ಟೀರಿಂಗ್ ಗಟ್ಟಿಯಾಗಿ ಹಿಡಿದು, ಸಾಕಷ್ಟು ಬಲವಾಗಿ ಬ್ರೇಕ್ ಹಾಕುವ ಧೈರ್ಯ ತೋರಿಸಬೇಕು. ಅಡ್ಡ ಬರುತ್ತಿರುವ ವಸ್ತುವನ್ನು ತಪ್ಪಿಸಲು ನೀವಿರುವ ವೇಗದಲ್ಲೇ ಲೇನ್ ಬದಲಿಸಿ ಬ್ರೇಕ್ ಹಾಕಿದರೆ ? ವಾಹನ ಪಲ್ಟಿಯಾಗದೆ ಇದ್ದೀತೆ ?
ಮೂಲಗಳ ಮಾಹಿತಿಯ ಪ್ರಕಾರ IAS ಅಧಿಕಾರಿ ಮಹಾಂತೇಶ ಬಿಳಗಿಯವರ ಕಾರು ಪಲ್ಟಿಯಾದದ್ದೂ ಹೀಗೆ ಅಡ್ಡ ಬಂದ ದ್ವಿಚಕ್ರ ವಾಹನ ಸವಾರನ ಕಾರಣದಿಂದ. ಆ ಒಬ್ಬ ಸಾಮಾನ್ಯ ವಾಹನ ಸವಾರನನ್ನು ಉಳಿಸಲು ಹೋಗಿ ಒಬ್ಬ IAS ಅಧಿಕಾರಿ ಸೇರಿ ಮೂರು ಜನ ಪ್ರಾಣ ಕಳೆದುಕೊಂಡರು. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ರಸ್ತೆ ನಿಯಮ ಪಾಲಿಸದ ಅಯೋಗ್ಯರು, ಬುದ್ದಿಹೀನರು, ಸಾಮಾಜಿಕ ಜವಾಬ್ದಾರಿ ಇಲ್ಲದ ಅಬ್ಬೇಪಾರಿಗಳು ತಮ್ಮ ವಾಹನಗಳನ್ನು ರಸ್ತೆಗಿಳಿಸಿ ಒಬ್ಬ ದಕ್ಷ, ಪ್ರಾಮಾಣಿಕ ಅಧಿಕಾರಿಯ ಜೀವ ಬಲಿಪಡೆಯಬಹುದು ಎಂದಾದರೆ, ಮಹತ್ವದ ಜೀವಗಳನ್ನು ಹೊತ್ತು ವಾಹನ ಚಲಾಯಿಸುವ ಚಾಲಕ ಉತ್ತಮರನ್ನು ಬದುಕಿಸಲಿಕ್ಕಾಗಿ ಧೈರ್ಯದಿಂದ ವಾಹನ ನಿಲ್ಲಿಸಿದರೂ, ಅಯೋಗ್ಯರನ್ನು ಗುದ್ದಿ ಬೀಳಿಸಿದರೂ, ಅಪಘಾತ ಮಾಡಿ ಕೈ ಕಾಲು ಮುರಿದರೂ, ಕೊನೆಗೆ ಕೊಂದರೂ ತಪ್ಪಲ್ಲ – ಅದು ಅಪಘಾತವಷ್ಟೇ ಎಂಬುದು ನನ್ನ ಅನಿಸಿಕೆ.
ರಸ್ತೆ ನಿಯಮಗಳ ಪಾಲನೆ ಮಾಡುವುದು ಒಂದು ಭಾಗವಾದರೆ – ಅವುಗಳನ್ನು ಧೈರ್ಯದಿಂದ ನಮ್ಮೊಳಗೆ ಅಳವಡಿಸಿಕೊಂಡು ಬದುಕುವುದೂ ಅಷ್ಟೇ ಅವಶ್ಯಕ.
ಬ್ರೇಕ್ ಹಾಕಲು ಮೀನಮೇಷ ಎನಿಸಬೇಡಿ, ವಾಹನವನ್ನು ಲೇನ್ ನಿಂದ ಲೇನ್ ಗೆ ಓಲಾಡಿಸಬೇಡಿ, ಕೊನೆಗೆ ಇಂತಹ ಯಾವುದೇ ವಸ್ತು/ಜೀವ ಅಡ್ಡ ಬಂದರೂ ಇರುವಲ್ಲಿಯೇ ಬ್ರೇಕ್ ಹಾಕಿ ವಾಹನ ನಿಲ್ಲಿಸಿ, ನಿಲ್ಲಿಸಲಾಗದಿದ್ದರೆ ಗುದ್ದಿ- ಆದರೆ ತಪ್ಪಿಸಲು ಹೋಗಿ ನಿಮ್ಮ ಪ್ರಾಣ ಕಳೆದುಕೊಳ್ಳಬೇಡಿ. ಜನ ನಿಮ್ಮನ್ನು ಸ್ವಾರ್ಥಿ ಎಂದುಕೊಂಡರೂ ಪರವಾಗಿಲ್ಲ – ಮೊದಲು ನೀವು ಬದುಕಿ. ಈ ನಿಯಮವನ್ನೇ ಜಗತ್ತಿನ ಎಲ್ಲ ಮುಂದುವರಿದ ರಾಷ್ಟ್ರಗಳ ಸಾರಿಗೆ ನಿಯಮಗಳಲ್ಲಿ ಹೇಳಿಕೊಡುವುದು ಅತೀ ಅವಶ್ಯ.

ಮಹಾಂತೇಶ ವಕ್ಕುಂದ
ಮೇಕ್ಯಾನಿಕಲ್ ಇಂಜೀನಿಯರ ಹಾಗೂ ಬಿಜೆಪಿ ಮುಖಂಡರು,ಬೆಳಗಾವಿ.


