ಕಾಗವಾಡ: ಪೂಜ್ಯ ಡಾ .ವಿರೇಂದ್ರ ಹೆಗಡೆ ಧರ್ಮಸ್ಥಳ ಸಂಸ್ಥೆಯ ಮೂಲಕ ಕೈಗೊಂಡಿರುವ ಸಮಾಜಮುಖಿ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಆಗುತ್ತಿರುವ ಸರ್ವಾಂಗೀಣ ಅಭಿವೃದ್ಧಿ, ಸಮಾಜದಲ್ಲಿ ಬಡತನ ನಿರ್ಮೂಲನೆ ಆಗಿ ಅರ್ಥಿಕ ಅಭಿವೃದ್ಧಿ ಹೊಂದಲು ಕೈಗೊಂಡ ಯೋಜನೆಗಳ ಬಗ್ಗೆ ಶ್ಲಾಘನೀಯ ಕಾರ್ಯ ಎಂದು ಜೈನ್ ಅಸೋಸಿಯೇಷನ್ ಉಪಾಧ್ಯಕ್ಷ ರಾದ ಶೀತಲ ಪಾಟೀಲ ಹೇಳಿದರು.
ಕಾಗವಾಡ ಪಟ್ಟಣದ ವಿದ್ಯಾಸಾಗರ ಶಾಲೆಯ ಸಭಾಂಗಣದಲ್ಲಿ ಸುಜ್ಞಾನನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ 160 ವಿದ್ಯಾರ್ಥಿಗಳಿಗೆ 75ಲಕ್ಷ ಮೊತ್ತದ ಸುಜ್ಞಾನನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರವನ್ನು ವಿತರಿಸಿ ಮಾತನಾಡಿದ ಅವರು ಮಕ್ಕಳು ಸಹ ಉನ್ನತ ಶಿಕ್ಷಣ ಪಡೆಯಬೇಕು ಅನ್ನುವ ದೃಷ್ಟಿಕೋನದಿಂದ ಪ್ರತಿವರ್ಷ ಸಾವಿರಾರು ಕೋಟಿ ಶಿಷ್ಯ ವೇತನ ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿ ನೀಡುತ್ತಿದ್ದಾರೆ, ಶಿಷ್ಯ ವೇತನ ಮಂಜೂರಾತಿ ಆಗಿರುವ ಮಕ್ಕಳು ಇದರ ಸದುಪಯೋಗ ಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು ಎಂದರು.
ಇನ್ನು ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೆಶಕರಾದ ಶ್ರೀಮತಿ ನಾಗರತ್ನಾ ಹೆಗಡೆ ಮಹಿಳೆಯರು ಸ್ವಾವಲಂಬನೆಯ ಜೀವನ ನಡೆಸುವಲ್ಲಿ ಸಂಘದ ಮಹತ್ವದ ಬಗ್ಗೆ ಮಾಹಿತಿ ಹಾಗೂ ಸುಜ್ಞಾನನಿಧಿ ಶಿಷ್ಯ ವೇತನ ಪಡೆದುಕೊಳ್ಳುವ ಮಕ್ಕಳು ತಮ್ಮ ಶಿಕ್ಷಣಕ್ಕೆ ಪೂರಕವಾಗಿ ಹಣವನ್ನು ಬಳಸಿಕೊಳ್ಳಬೇಕು ಜೊತೆಗೆ ವಿದ್ಯಾರ್ಥಿಗಳಿಗಳು ಮುಂದಿನ ಜೀವನ ಉಜ್ವಲವಾಗಲಿ ಎಂದರು.
ಈ ಸಮಯದಲ್ಲಿ ಉಪತಹಶೀಲ್ದಾರ ಶ್ರೀಮತಿ ರಶ್ಮೀ ಜಕಾತಿ, ಬಿಇಓ ಪಿ ಬಿ ಮದಭಾವಿ, ಗಣ್ಯರಾದ ನ್ಯಾತಗೌಡ ಪಾಟೀಲ,ಪಿಕೆಪಿಎಸ್ ಅಧ್ಯಕ್ಷರಾದ ಸ್ವಪ್ನೀಲ ಪಾಟೀಲ, ಐನಾಪುರ ಪಟ್ಟಣ ಪಂಚಾಯತ ಸದಸ್ಯರಾದ
ಅರುಣ ಗಾಣಿಗೇರ,ವಿದ್ಯಾಸಾಗರ ಶಿಕ್ಷಣ ಸಂಸ್ಥೆ ಪದ್ಮಾಕರ ಕರವ,ಭಮ್ಮಣ್ಣ ಚೌಗಲಾ, ಖಂಡೇರಾವ ಗೋರ್ಪಡೆ,ವಿಠ್ಠಲ ಹಳ್ಳೊಳ್ಳಿ,ಕಾಗವಾಡ ಕ್ಷೇತ್ರ ಯೋಜನಾದಿಕಾರಿಗಳಾದ ಸಂಜೀವ ಮರಾಠಿ,ಕಾಗವಾಡ ವಲಯ ಮೇಲ್ವಿಚಾರಕರು, ಕೃಷಿ ಮೇಲ್ವಿಚಾರಕರು, ಕಾಗವಾಡ ವಲಯ ಸೇವಾಪ್ರತಿನಿಧಿಗಳು ವಿದ್ಯಾರ್ಥಿಗಳು ಪಾಲಕರು ಉಪಸ್ಥಿತರಿದ್ದರು.


