ಜಮಖಂಡಿ; ಒನಕೆ ಓಬವ್ವ ಧೈರ್ಯ ಮತ್ತು ದೇಶಭಕ್ತಿಯ ಪ್ರತೀಕವಾಗಿದ್ದಾರೆ. ಚಿತ್ತದುರ್ಗದ ಕೋಟೆಯ ಬಾಗಿಲಲ್ಲಿ ಒಬ್ಬ ಶತ್ರುವನ್ನೂ ಒಳಗೆ ನುಗ್ಗದಂತೆ ತಡೆಯಲು ಒಬ್ಬಳೇ ಹೋರಾಡಿದ ಅವರ ಸಾಹಸ ಇಂದಿಗೂ ಸ್ಫೂರ್ತಿಯಾಗಿದೆ. ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಸುನಂದಾ ಎಸ್, ಶಿರೂರ ಹೇಳಿದರು. ಮಂಗಳವಾರ ಮಹಿಳಾ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ರಾಜ್ಯಶಾಸ್ತ್ರ ವಿಭಾಗ ಹಾಗೂ ಐ.ಕ್ಯೂ.ಎ.ಸಿ. ಘಟಕದ ಅಡಿಯಲ್ಲಿ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಯ್ನಾಡಿನ ರಕ್ಷಣೆಗೆ ತಮ್ಮ ಪ್ರಾಣವನ್ನೇತ್ಯಾಗ ಮಾಡಿದ ಓಬವ್ವಅವರಧೈರ್ಯವು ಮಹಿಳೆಯರ ಶೌರ್ಯ, ತ್ಯಾಗ ಮತ್ತು ಸಂಕಲ್ಪದ ಮಹತ್ತ್ವವನ್ನು ನಮಗೆ ನೆನಪಿಸುತ್ತದೆ. ಅವರ ಜೀವನವು ಪ್ರತಿಯೊಬ್ಬಯುವತಿಯಿಗೂ ಪ್ರೇರಣೆ ಯದಾರಿ ತೋರಿಸುತ್ತದೆ. ಸತ್ಯ, ಧೈರ್ಯಮತ್ತು ದೇಶಪ್ರೇಮದ ಅಡಿಗಲ್ಲುಗಳ ಮೇಲೆನಿಂತುಬದುಕುವ ಪಾಠವನ್ನು ಕಲಿಸುತ್ತದೆ ಎಂದುಹೇಳಿದರು. ಶ್ರೀಮತಿ ಅನುಸೂಯಾ ಮಬ್ರುಮಕರ, ಶ್ರೀಮತಿ ಸುಜಾತಾ ಬಸಪ್ಪಗೋಳ, ಎಸ್. ಬಿ. ತೇರದಾಳ, ಸಂಜೀವ ಕಾಂಬಳೆ, ವಿನಾಯಕ ಹಿಮಕರ, ಶ್ರೀಮತಿ ಸುನಂದಾ ಸಣ್ಣಕ್ಕಿ, ಸುದೈವ ಪಾಣಿ, ಗಂಗಪ್ಪ ನಾಯಕ, ಸಂತೋಷ ಯಡಹಳ್ಳಿ ಉಪಸ್ಥಿತರಿದ್ದರು.


