ಬೆಳಗಾವಿ4 :- ಡಾ ಫ ಗು ಹಳಕಟ್ಟಿ ಭವನ ಮಹಾಂತೇಶ ನಗರ ಲಿಂಗಾಯತ ಸಂಘಟನೆ, ಬೆಳಗಾವಿಯಲ್ಲಿ ದಿ.4.1.2026ರಂದು ಶ್ರೀಕಾಂತ ಶಾನವಾಡ ಅವರು ಉಪನ್ಯಾಸ ನಿಡುತ್ತಾ ಇಂದು ನಾವು ಮಕ್ಕಳಿಗೆ ಸಂಸ್ಕಾರ ಕಲಿಸುತ್ತಿಲ್ಲಾ ಅವರು ಕಲಿಯುತ್ತಿಲ್ಲ.ಅವರ ಅವರ ಉದ್ಯೋಗ ಹೊಂದಾಣಿಕೆ ಮಾಡಿ ಲಗ್ನ ಮಾಡುತ್ತಿದ್ದರು. ಆದರೆ ಈಗ ಆಯ್ಕೆ ಅವರಿಗೆ ಬಿಟ್ಟಿದ್ದಾರೆ. ಇಂದಿನ ದಾಂಪತ್ಯ ಏನಾಗಿದೆ ಎಂದರೆ ಹಿರಿಯರ ಮಾತು ಯುವಕರು ಕೇಳುತ್ತಿಲ್ಲಾ. ಪ್ರಕೃತಿ ಬಿಟ್ಟು ಮಾನವನಿಲ್ಲ. ಸಂಸಾರ ಸರಾಗವಾಗಿ ಸಾಗಬೇಕಾದರೆ ಇಬ್ಬರೂ ಹೊಂದಾಣಿಕೆ ಅಗತ್ಯ ಎಂದು ಶ್ರೀಕಾಂತ ಶಾನವಾಡ ಅವರು ಲಿಂಗಾಯತ ಸಂಘಟನೆಯ ವಾರದ ಸಾಮೂಹಿಕ ಪ್ರಾಥ೯ನೆಯ ಉಪನ್ಯಾಸ ದಲ್ಲಿ ತಿಳಿಸಿದರು.
ಮಹಾದೇವಿ ಅರಳಿ ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು. ಚಿನ್ಮಯ ಶಾನವಾಡ ದಾಸೋಹ ಸೇವೆಗೈದರು. ಅಧ್ಯಕ್ಷತೆಯನ್ನು ಈರಣ್ಣಾ ದೇಯಣ್ಣವರ ಅವರು ವಹಿಸಿದ್ದರು.
ದಾಂಪತ್ಯ ಧಮ೯ ಕುರಿತು ಶ್ರೀಕಾಂತ ಶಾನವಾಡ ಅವರು ಈಗಿನ ಸ್ಥಿತಿ ಗತಿ ಹನ್ನೆರಡನೆಯ ಶತಮಾನದ ದಾಂಪತ್ಯ ಕುರಿತು ಎಲ್ಲರಿಗೂ ಮನಮುಟ್ಟುವಂತೆ ತಿಳಿಸಿದರು.ಇದೇ ಸಂದಭ೯ದಲ್ಲಿ ಚಿನ್ಮಯ ಶಾನವಾಡ ಅವರ ಜನ್ಮ ದಿನ ಆಚರಿಸಲಾಯಿತು.
ವಿ ಕೆ ಪಾಟೀಲ ಸವ೯ರನ್ನು ಸ್ವಾಗತಿಸಿದರು.ಗುರುಸಿದ್ದಪ್ಪ ರೆವಣ್ಣವರ, ಜ್ಯೋತಿ ಬದಾಮಿ, ಬಸವರಾಜ ಕರಡಿಮಠ, ಶಾಂತಾ ಬಾಬಣ್ಣ ತಿಗಡಿ, ಸುನoದಾ ಮಹದೇವ ಕೆoಪಿಗೌಡ್ರ, ಅನುಪಮಾ ಶಾನವಾಡ, ಶಿವಲೀಲಾ ಗೌಡರ, ಶಾಂತಾ ಚಿನಿವಾಲರ, ಜಯಶ್ರೀ ನಷ್ಟೆ, ಅನೀಲ ರ,ಶoಕ್ರಪ್ಪಾ ಮೆಣಸಗಿ, ಪ. ಬ. ಕರಿಕಟ್ಟಿ,ಸುದೀರ ರಘಶೆಟ್ಟಿ,ಶೇಖರ ವಾಲಿಇಟಗಿ, ಎಂ ವೈ.ಮೆಣಸಿನಕಾಯಿ, ಸದಾಶಿವ ದೇವರಮನಿ, ಬಸವರಾಜ ಇಂಚಲ, ಬಸವರಾಜ ಬಿಜ್ಜರಗಿ ಉಪಸ್ಥಿತರಿದ್ದರು. ಸಂಗಮೇಶ ಅರಳಿ ಕಾಯ೯ಕ್ರಮ ನಿರೂಪಿಸಿದರು.


