ಗೋಕಾಕ ಅರ್ಬನ್ ಬ್ಯಾಂಕಿನ ಸಾಧನೆ ಅಪಾರ: ಡಾ. ಸಿದ್ದರಾಮ ಮಹಾಸ್ವಾಮಿಗಳು 

Ravi Talawar
ಗೋಕಾಕ ಅರ್ಬನ್ ಬ್ಯಾಂಕಿನ ಸಾಧನೆ ಅಪಾರ: ಡಾ. ಸಿದ್ದರಾಮ ಮಹಾಸ್ವಾಮಿಗಳು 
WhatsApp Group Join Now
Telegram Group Join Now
ಬೆಳಗಾವಿ.  ಜಿಲ್ಲೆಯಲ್ಲಿ ನಿರಂತರವಾಗಿ 118 ವರ್ಷಗಳಿಂದ  ತನ್ನ ಸದಸ್ಯರಿಗೆ, ಗ್ರಾಹಕರಿಗೆ ಉನ್ನತ ಮಟ್ಟದ ಸೇವೆಯನ್ನು ನೀಡಿ ಅವರ ಬೆಳವಣಿಗೆಗೆ ಪ್ರಮುಖ ಕಾರ್ಯ ಮಾಡಿದ್ದು ದಿ ಗೋಕಾಕ ಅರ್ಬನ್ ಬ್ಯಾಂಕ ಎಂದು ಗದಗಿನ   ತೊಂಟಧಾರ್ಯ ಮಠದ ಜಗದ್ಗುರು ಡಾ. ಶಿದ್ದರಾಮ ಮಹಾಸ್ವಾಮಿಗಳು ಹೇಳಿದರು.
     ಅವರು ಮಂಗಳವಾರದಂದು ನಗರದ ದತ್ತ ಮಂದಿರದ ಹತ್ತಿರದ, ಮಹಾತ್ಮ ಪುಳೆ ರಸ್ತೆ, ಶಹಾಪುರದಲ್ಲಿ ದಿ ಗೋಕಾಕ ಅರ್ಬನ್ ಕೋ ಆಪ ಕ್ರೆಡಿಟ್ ಬ್ಯಾಂಕ ಲಿ. ಗೋಕಾಕ ಇದರ 9 ನೇ ಶಾಖೆಯ ಉದ್ಘಾಟನೆ ನೆರವೇರಿಸಿ ಮಾತನಾಡಿ ಈ ಬ್ಯಾಂಕಿನ ಆಡಳಿತ ಮಂಡಳಿ  ಮತ್ತು ಸಿಬ್ಬಂದಿಗಳ ಪರಿಶ್ರಮದಿಂದ ಇಂದು ಬ್ಯಾಂಕು 9 ನೇ ಶಾಖೆ ಆರಂಭಿಸಿ 118 ವರ್ಷಗಳ ಸಾರ್ಥಕ ಸಹಕಾರಿ ಬ್ಯಾಂಕಾಗಿ ಉನ್ನತ ಮಟ್ಟದ ಸೇವೆ ಸಲ್ಲಿಸುತ್ತಿದೆ ಎಂದರು.
     ಕಾರ್ಯಕ್ರಮದಲ್ಲಿ ನಿಕಟಪೂರ್ವ  ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ, ಕೆ ಎಲ್ ಇ ನಿರ್ದೇಶಕರು ಹಾಗೂ ಬ್ಯಾಂಕಿನ ನಿರ್ದೇಶಕರಾದ ಜಯಾನಂದ ಮುನವಳ್ಳಿ, ಬ್ಯಾಂಕಿನ ಅಧ್ಯಕ್ಷ ಬಸವರಾಜ ಈಶ್ವರಪ್ಪ ಕಲ್ಯಾಣಶೆಟ್ಟಿ, ಉಪಾಧ್ಯಕ್ಷರಾದ ಸುಧೀರ ಅಂಕಲಿ, ಪ್ರಧಾನ ವ್ಯವಸ್ಥಾಪಕರಾದ ಶಿವನಗೌಡ ಪಾಟೀಲ, ನಿರ್ದೇಶಕರಾದ ವೀರಣ್ಣ ಬಿದರಿ, ದುಂಡಪ್ಪ ಬಿದರಿ, ಮಹಾಂತೇಶ ಕಲ್ಲೋಳಿ, ರಾಜಶೇಖರ ತಾರಳಿ, ಮಲ್ಲಿಕಾರ್ಜುನ ಚುನಮರಿ, ಶ್ರೀಮತಿ ಶೋಭಾ ಕುರಬೇಟ, ಶ್ರೀಮತಿ ಶಾಂತದೇವಿ ಘೋಡಗೇರಿ, ಚಂದ್ರಕಾಂತ ಕುರಬೇಟ, ಅಶೋಕ ಹೆಗ್ಗಣ್ಣವರ, ಪ್ರಕಾಶ ಮಡ್ದೆಪ್ಪಗೋಳ, ಪ್ರಸಾದ ಸೊಲ್ಲಾಪೂರಮಠ, ಶ್ರೀಕಾಂತ ಪಟ್ಟಣಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಚಂದ್ರಶೇಖರ ಕಡೇವಾದಿ, ಬಸವಣ್ಣಿ ಮಾಳಿ, ಸೋಮಶೇಖರ ಮಗದುಮ್ಮ, ಬೆಳಗಾವಿ ಸಲಹಾ ಸಮಿತಿಯ ಸದಸ್ಯರಾದ ಆನಂದ ಚಹ್ವಾನ, ನಾಗರಾಜ  ವರ್ನೆಕರ, ಶಂಕರ ಚೋಣ್ಣದ, ಬಸವರಾಜ ಅರಬಳ್ಳಿ, ಉದಯ ಅನಂತ ಜೋಶಿ, ಲಕ್ಷ್ಮಣ ಸೊಂಟಕ್ಕಿ, ನವೀನ ಮೆಟಗುಡ, ಶಾಖಾ ವ್ಯವಸ್ಥಾಪಕ ಪ್ರಸಾದ ದೊಡ್ಡಮನಿ  ಸೇರಿದಂತೆ ರಾಜಕೀಯ ಮುಖಂಡರು, ಸಹಕಾರಿ ಬಂದುಗಳು,ಉದ್ಯಮಿಗಳು, ವ್ಯಾಪಾರಸ್ಥರು, ಸಿಬ್ಬಂದಿ  ವರ್ಗ ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article