ಚಿತ್ರದುರ್ಗ, ಫೆಬ್ರವರಿ 26: ಜಿಲ್ಲೆಯ ಶ್ರೀ ಮುರುಘಾ ಮಠದ ಆವರಣದಲ್ಲಿ 325 ಅಡಿ ಎತ್ತರದ ಶ್ರೀ ಜಗಜ್ಯೋತಿ ಬಸವೇಶ್ವರ ಕಂಚಿನ ಪುತ್ಥಳಿಗೆ ರಾಜ್ಯ ಸರ್ಕಾರ ನೀಡಿದ 35 ಕೋಟಿ ರೂ. ಅನುದಾನ ದುರುಪಯೋಗವಾಗಿದೆ ಎಂಬ ಆರೋಪ ಕೇಳಿಬಂದಿದೆ. ಹಾಗಾಗಿ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಮತ್ತೆ ಸಂಕಷ್ಟ ಸಾಧ್ಯತೆ ಎನ್ನಲಾಗುತ್ತಿದೆ.
ಹಣ ದುರುಪಯೋಗ ಬಗ್ಗೆ ಮಾಜಿ ಸಚಿವ ಏಕಾಂತಯ್ಯ ದೂರು ಹಿನ್ನೆಲೆ ಎಡಿಸಿ ಕುಮಾರಸ್ವಾಮಿ, PWD ಅಧಿಕಾರಿಗಳನ್ನೊಳಗೊಂಡಿದ್ದ ತನಿಖಾ ಸಮಿತಿ ವರದಿ ಸಿದ್ಧಪಡಿಸಿದೆ. ಸರ್ಕಾರದ ಅನುದಾನ ಅನುಷ್ಠಾನ ಬಗ್ಗೆ ಸ್ಪಷ್ಟತೆ ಇಲ್ಲವೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗೆ ಇಂದು ವರದಿ ಸಲ್ಲಿಸಲಾಗಿದೆ.