ಮಹಿಳೆಯರು ಮಾಡುವ ವಿಶಿಷ್ಟ ಕೆಲಸಗಳನ್ನು ಪುರುಷರು ಮಾಡಲು ಸಾಧ್ಯವಿಲ್ಲ : ಡಾ. ಸವಿತಾ ಹಿರೇಗೌಡರ

MK HasiruKranti
ಮಹಿಳೆಯರು ಮಾಡುವ ವಿಶಿಷ್ಟ ಕೆಲಸಗಳನ್ನು ಪುರುಷರು ಮಾಡಲು ಸಾಧ್ಯವಿಲ್ಲ : ಡಾ. ಸವಿತಾ ಹಿರೇಗೌಡರ
WhatsApp Group Join Now
Telegram Group Join Now

ಗದಗ ೩೧ : ಸಧ್ಯದ ಪರಿಸ್ಥಿತಿಯು ಮಹಿಳೆಯರಿಗೆ ಪೂರಕವಾಗಿದೆ ಮಹಿಳೆ ಮಾಡುವ ವಿಶಿಷ್ಟ ಕೆಲಸಗಳನ್ನು ಪುರುಷರು ಮಾಡಲು ಸಾಧ್ಯವೇಇಲ್ಲ. ಮಹಿಳೆಯರಿಗೆ ಏನೇ ಇದ್ದರೂ ಸಮಾನತೆಯ ಉivi ಚಿಟಿಜ ಣಚಿಞe ಇರಬೇಕು. ನಿಯಮಿತ ಶಿಸ್ತುಬದ್ದ ಜೀವನದಿಂದ ಮಹಿಳೆ ಆರೋಗ್ಯವಾಗಿರಲು ಸಾಧ್ಯ ಎಂದು ಡಾ. ಸವಿತಾ ಹಿರೇಗೌಡರ ಪ್ರೋಬಸ್ ಕ್ಲಬ್ಬಿನ ಮಾಸಿಕ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಹಿಳೆ ಮತ್ತು ಆರೋಗ್ಯ ಕುರಿತು ಮಾತನಾಡಿದರು.
ಇನ್ನು ಮಹಿಳೆಯ ಆರೋಗ್ಯ ದೃಷ್ಟಿಯಿಂದ ಪುರುಷನಿಗೆ ಹೋಲಿಸಿದರೆ ಹೆಣ್ಣಿನ ದೇಹದ ಜೈವಿಕ ಕ್ರಿಯೆಯಲ್ಲಿ ವಿಶಿಷ್ಟ ವ್ಯತ್ಯಾಸಗಳಿದ್ದು ಮೈ ನೆರೆಯುವದು, ಋತು ಚಕ್ರ, ತಾಯಿಯಾಗುವ ವಿವಿಧ ಹಂತಗಳು ಬದುಕಿನಲ್ಲಿ ಪ್ರಾಣಾಪಾಯದ ಪ್ರಸಂಗಗಳನ್ನು ಎದುರಿಸಬೇಕಾಗುತ್ತದೆ.
ಹಾಗಾಗಿ ಮಹಿಳೆಯರಿಗಾಗಿಯೇ ಇರುವ ಅನೇಕ ರಾಷ್ಟ್ರೀಯ ಕಾರ್ಯಕ್ರಮಗಳು ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಲಭ್ಯವಾಗಿವೆ ಹೆಣ್ಣು ಹುಟ್ಟಿದಾಗಲೇ ಮಾಡಿಸುವ ಹೆಚ್ಚುಜನರನ್ನು ಆಕರ್ಷಿಸುತ್ತಿರುವ ತಾಯಿ ಕಾರ್ಡ ಅವಳಿಗೆ ರಕ್ಷಾ ಕವಚವಾಗಿದೆ.
ಮಹಿಳೆಯರು ದಂತ ರೋಗಗಳ ಬಗ್ಗೆ ಮೊದಲ ಆಧ್ಯತೆ ಕೊಡಬೇಕು ಬಾಯಿ ನಮ್ಮ ಇಡೀ ದೇಹದ ಹೆಬ್ಬಾಗಿಲು ದಂತಕ್ಷಯಕ್ಕೆ ಈಗ ಅತ್ಯಾದುನಿಕ ಚಿಕಿತ್ಸಾ ಪದ್ಧತಿಗಳು ಬಂದಿರುವದರಿಂದ ಚಿಕಿತ್ಸೆ ಪಡೆದು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಹಲ್ಲು ನೋವು ಅದು ಕಾಯಿಲೆ ಅಲ್ಲ ನಮ್ಮ ಜೀವನ ಕ್ರಮದಿಂದ ಹಾಳಾಗದಮತೆ ನೋಡಿಕೊಂಡು ಬದುಕಿರುವರೆಗೂ ಹಲ್ಲುಗಳು ಗಟ್ಟಿಯಾಗಿರುವಂತೆ ನೋಡಿಕೊಳ್ಳುವದು ಸಾಧ್ಯ ಎಂದು ಹೇಳಿದ ದಂತ ವೈದ್ಯರಾದ ಸವಿತಾ ಹಿರೇಗೌಡರ ಉಪನ್ಯಾಸ ನೀಡಿದರು.
ನಿಮ್ಮಂಥ ಹಿರಿಯರ ಮಧ್ಯ ನಾನು ಸಣ್ಣವಳು ಎಂದು ಚಿಕ್ಕ ಚೊಕ್ಕ ಮೌಲ್ಯಯುತ ಮಾತುಗಳನ್ನು ಆಡಿದ ಡಾ. ಸವಿತಾ ಹಿರೇಗೌಡರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ದಾಸೋಹ ಸೇವೆ ಮಾಡಿದ ರಾಜಶೇಖರ ಹಿರೇಮಠ, ಶಿವಲೀಲಾ ಕುರಡಗಿ, ಬಿ.ಎಸ್. ಶಿದ್ನೆಕೊಪ್ಪ, ಜಿ.ವಿ. ಪಾಟೀಲ, ಬಸವರಾಜ ತೋಟಿಗೇರ ಮತ್ತು ಎಸ್.ಎಸ್. ಸಜ್ಜನರ ಇವರ ಹುಟ್ಟು ಹಬ್ಬವನ್ನು ಆಚರಿಸುವದರೊಂದಿಗೆ ಸನ್ಮಾನಿಸಿ ಶುಭ ಹಾರೈಸಲಾಯಿತು. ಸನ್ಮಾನಕ್ಕೆ ಉತ್ತರವಾಗಿ ಉಪಾಧ್ಯಕ್ಷ ರಾಜಶೇಖರ ಹಿರೇಮಠ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಬೆಂಗಳೂರಿನಿಂದ ಆಗಮಿಸಿದ ನಂದಿನಿ ಮತ್ತು ವಿವೇಕ ಉಸಿರಿನ ಮಹತ್ವ ಹೇಳುವದರೊಂದಿಗೆ ಪ್ರಾತ್ಯಕ್ಷಿತೆ ತೋರಿಸಿ ಂಡಿಣ oಜಿ ಐiviಟಿg ನ ಶಿಬಿರದಲ್ಲಿ ಭಾಗಿಯಾಗಲು ಕೇಳಿಕೊಂಡರು.
ಬರಲಿರುವ ಕ್ಲಬಿನ ಸ್ಮರಣ ಸಂಚಿಕೆಗೆ ಸದಸ್ಯರು ಲೇಖನಗಳನ್ನು ಕಳಿಸಲು ಸಂಪಾದಕ ಎಚ್.ಬಿ. ಯಲಬುರ್ಗಿ ವಿನಂತಿಸಿದರು.
ಅಧ್ಯಕ್ಷ ಬಿ.ಎಸ್.ಗೌಡರ ಮಾತನಾಡಿ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆ ಮತ್ತು ಬಾಲಕಿಯರ ಹಕ್ಕು ನ್ಯಾಯ ಕಾರ್ಯಗಳ ೨೦೨೬ ಮಾರ್ಚ ೮ ರ ಘೋಷ ವಾಕ್ಯವಾಗಿರುವದರಿಂದ ಸ್ತ್ರೀಯರ ಘನತೆ, ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಬೇಕಾಗಿದೆ ಎಂದು ಹೇಳಿದರು.
ಆರಂಭದಲ್ಲಿ ಬಿ.ಎಸ್.ಜಾಧವ್ ಕಾಲರ ಧಾರಣ ಮಾಡಿದರು. ಶ್ರೀಮತಿ ನಂದಿನಿ ಪ್ರಾರ್ತಿಸಿದರು. ಸಹ ಕಾರ್ಯದರ್ಶಿ ಎಚ್.ಬಿ. ಯಲಬುರ್ಗಿ ನಿರೂಪಿಸಿದರು. ವಾರ್ತಾಧಿಕಾರಿ ಬಸವರಾಜ ಗಣಪ್ಪನವರ ವಂದಿಸಿದರು.
ಸಭೆಯಲ್ಲಿ ಪ್ರೊ. ಕೆ.ಎಚ್. ಬೇಲೂ, ಬಿ.ಎಂ. ಬಿಳೆಯಲಿ, ಎಂ.ಎಫ್. ಡೋನಿ, ಶೈಲಾ ಕೋಡೆಕಲ್ಲ, ರತ್ನಾ ಗಿಡ್ನಂದಿ, ವಿ.ಎಂ. ಮಂದಿನಮನಿ, ಎಸ್.ಎ. ಸೋಮಗೊಂಡ, ಯಾನಮಶೆಟ್ಟಿ ದಂಪತಿಗಳು, ಎಸ್.ಕೆ. ನಾಲತ್ವಾಡಮಠ ಮುಂತಾದವರು ಉಪಸ್ಥಿತರಿದ್ದರು.
-ಬಸವರಾಜ ಗಣಪ್ಪನವರ
ವಾರ್ತಾಧಿಕಾರಿ, ಪ್ರೋಬಸ್ ಕ್ಲಬ್, ಗದಗ

WhatsApp Group Join Now
Telegram Group Join Now
Share This Article