ಸಾಂಕ್ರಾಮಿಕ ರೋಗಗಳ ಬಗ್ಗೆ ಎಚ್ಚರಿಕೆ ವಹಿಸಿ: ಡಾ.ರಶ್ಮಿ ಪೂಜಾರಿ

Ravi Talawar
ಸಾಂಕ್ರಾಮಿಕ ರೋಗಗಳ ಬಗ್ಗೆ ಎಚ್ಚರಿಕೆ ವಹಿಸಿ: ಡಾ.ರಶ್ಮಿ ಪೂಜಾರಿ
WhatsApp Group Join Now
Telegram Group Join Now

ರನ್ನ ಬೆಳಗಲಿ: ಜು.೧೨., ಮುಧೋಳ ತಾಲೂಕಿನ ರನ್ನ ಬೆಳಗಲಿಗೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರಿಗೆ  ಕಾಲರ, ಮಲೇರಿಯಾ, ಚಿಕ್ಕನ್ ಗುನ್ಯಾ ಹಾಗೂ ಡೆಂಗ್ಯೂ ಕುರಿತು ಜಾಗೃತಿ ಜಾತ ಕಾರ್ಯಕ್ರಮವು ನಡೆಯಿತು.

ಈ ಕಾರ್ಯಕ್ರಮಕ್ಕೆ ಡಾ. ರಶ್ಮಿ ಪೂಜಾರಿ ಇವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆಯನ್ನು ನೀಡುವುದರ ಜೊತೆಗೆ ಕಾಲರಾ, ಮಲೇರಿಯಾ, ಚಿಕ್ಕನ್ ಗುನ್ಯಾ ಹಾಗೂ ಡೆಂಗ್ಯೂದಂತಹ ಸಾಂಕ್ರಾಮಿಕ ರೋಗಗಳ ಬಗ್ಗೆ ಎಚ್ಚರಿಕೆ ವಹಿಸಬೇಕು, ಇಲ್ಲವಾದರೆ ಈ ಕಾಯಿಲೆಗಳಿಂದ ಪ್ರಾಣವನ್ನು ಕಳೆದುಕೊಳ್ಳುವ ಸ್ಥಿತಿ ಉಲ್ಬಣಗೊಳ್ಳುತ್ತದೆ. ಆದ್ದರಿಂದ ಸಾರ್ವಜನಿಕರು ತಮ್ಮ ಮನೆಯ ಸುತ್ತಲೂ
ನೀರು ನಿಲ್ಲದಂತೆ ಮತ್ತು ಪ್ರತಿನಿತ್ಯ ಕುಡಿಯುವ ನೀರನ್ನು ಕಾಯಿಸಿ ಆರಿಸಿ ಕುಡಿಯುವುದರ ಜೊತೆಗೆ ಪರಿಸರದಲ್ಲಿ ಯಾವುದೇ ರೀತಿಯ ಕಸ ತ್ಯಾಜ್ಯಗಳು ಸಂಗ್ರವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಪಟ್ಟಣ ಪಂಚಾಯತ್ ಪ್ರಥಮ ದರ್ಜೆ ಸಹಾಯಕರಾದ ಪಿ.ಡಿ. ನಾಗನೂರು ಅವರು ಮಳೆಗಾಲ ಆರಂಭವಾಗುತಿದಂತೆ ಕಲುಷಿತ ನೀರು ಸೇವನೆಯಿಂದ ವಾಂತಿ ಭೇದಿ ಕಾಲರಾ ಮುಂತಾದ ರೋಗಗಳು  ಹರಡುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ಹೆಚ್ಚಿನ ಸೊಳ್ಳೆಗಳು ಉತ್ಪತ್ತಿಯಾಗುವುದು ನಿಂತ ನೀರಿನಲ್ಲಿ ಅದಕ್ಕಾಗಿ ಎಲ್ಲೂ ನೀರು ನಿಲ್ಲದಂತೆ ಎಚ್ಚರಿಕೆಯಿಂದ ವಹಿಸಬೇಕು ಎಂದು ಪಟ್ಟಣದ ಪ್ರಮುಖ
ಬೀದಿಗಳಲ್ಲಿ ಸಂಚರಿಸಿ ಕರಪತ್ರವನ್ನು ನೀಡುತ್ತಾ. ಗ್ರಾಮಸ್ಥರ ಮನೆ ಮನೆಗೆ ಭೇಟಿ ನೀಡಿ ನೀರು ಸಂಗ್ರಹಿಸಿದ ಪಾತ್ರೆಗಳನ್ನು ವೀಕ್ಷಣೆ ಮಾಡುವುದರ ಜೊತೆಗೆ ಸೊಳ್ಳೆಗಳು ಉತ್ಪತ್ತಿಯಾಗದಂತೆ ಎಚ್ಚರಿಕೆ ವಹಿಸಬೇಕೆಂದು ಮಾಹಿತಿ ನೀಡಿದರು.

ಈ ಸದರಿ ಜಾಗೃತಿ ಜಾತದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪಟ್ಟಣ ಪಂಚಾಯಿತಿಯ ಪೌರಕಾರ್ಮಿಕರು ಮತ್ತು ಸಿಬ್ಬಂದಿ ವರ್ಗದವರಾದ ಬಿ.ಎಂ. ಜಕಾತಿ. ಎಸ್.ಹೆಚ್.ಸುನ್ನಾಳ, ಮುತ್ತು ದೇವರಾಳ, ಆರೋಗ್ಯ ಇಲಾಖೆ ಸಿಬ್ಬಂದಿಯವರಾದ ಚನ್ನಬಸು ದೇವರಡ್ಡಿ, ಸುಭದ್ರಾ ನಾಗರಾಳ, ಅಂಜನಾ ಕತ್ತಿ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

WhatsApp Group Join Now
Telegram Group Join Now
Share This Article