“ತಾಳ್ಮೆಯೇ ಯುವಕರ ಉತ್ತಮ ಶಕ್ತಿ”- ಡಾ. ರಮೇಶ್ ಬಾಬು

Ravi Talawar
“ತಾಳ್ಮೆಯೇ ಯುವಕರ ಉತ್ತಮ ಶಕ್ತಿ”- ಡಾ. ರಮೇಶ್ ಬಾಬು
WhatsApp Group Join Now
Telegram Group Join Now
ಬಳ್ಳಾರಿ  ಜುಲೈ 14. ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಬಳ್ಳಾರಿ ಶಾಖೆ ಹಾಗೂ ಸರ್ಕಾರಿ ಮಾಜಿ ಪುರಸಭೆ ಸಂಯುಕ್ತ ಪದವಿ ಪೂರ್ವ ಕಾಲೇಜು ಸಹಯೋಗದೊಂದಿಗೆ ಜುಲೈ 11 ನೇ ವಿಶ್ವ ಜನಸಂಖ್ಯಾ ದಿನದ ಅಂಗವಾಗಿ ಅರಿವು ಮತ್ತು ಪ್ರಬಂಧ ಸ್ಪರ್ಧೆಯನ್ನು ಕಾಲೇಜಿನ ಸಾಬಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾಡಿದ ಕಾರ್ಯಕ್ರಮದ ಉದ್ಘಾಟಕರು ಡಾ. ರಮೇಶ್ ಬಾಬು ಬಳ್ಳಾರಿ  ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ   ಅಧಿಕಾರಿಗಳು ಮಾತನಾಡುತ್ತಾ ಯುವಕರೇ ನಿಮ್ಮ ಉತ್ತಮ ಶಕ್ತಿ ಎಂದರೆ ತಾಳ್ಮೆ ಅದನ್ನು ನೀವು ಅಭ್ಯಾಸ ಮಾಡಿಕೊಂಡಲ್ಲಿ ಸಾದನೆ ಎನ್ನುವುದು ಕಟ್ಟಿಟ್ಟ ಬುತ್ತಿ ಆದ್ದರಿಂದ ಯುವಕರೇ ಹೆಣ್ಣಾಗಲಿ ಗಂಡಾಗಲೀ ಅವಸರದಲ್ಲಿ ಮದುವೆ ಮಾಡಿ ಕೊಳ್ಳಬೇಡಿ  ಏಕೆಂದರೆ  ನಿಮ್ಮ ಸ್ವತಃ ತೀರ್ಮಾನ ತೆಗೆದುಕೊಳ್ಳುವ ಶಕ್ತಿ ಹಾಗೂ ಜೀವನ ಸಂಗಾತಿಯನ್ನು ಆಯ್ದುಕೊಳ್ಳುವ ಶಕ್ತಿ ಮತ್ತು   ವಿದ್ಯಾಭಾಸ ಮುಗಿಸಿ  ಉತ್ತಮ ಜೀವನ ಕಟ್ಟಿಕೊಳ್ಳಲು ಸಮಯ ಬೇಕಾಗುತ್ತದೆ ಆದ್ದರಿಂದ 25 ವರ್ಷದವರೆಗೂ ಮದುವೆ ಆಗಬೇಡಿ ಎಂದು ಕರೆ ಕೊಟ್ಟರು.
ತದನಂತರ ಮಾತನಾಡಿದ  ಎಫ್ಪಿಎಐ ಅಧ್ಯಕ್ಷರಾದ ಟಿ.ಜಿ. ವಿಠ್ಠಲ್, “ಉತ್ತಮ ಸಮಾಜ ನಿರ್ಮಾಣದೊಂದಿಗೆ ಭದ್ರ ಭವಿಷ್ಯದ ಬದುಕು ಕಟ್ಟಿಕೊಳ್ಳುವುದು ಪ್ರಮುಖ. ಸಂತಾನೋತ್ಪತ್ತಿ, ಪ್ರಜನನ ಆರೋಗ್ಯ ಹಾಗೂ ಸಂಬಂಧಿತ ಹಕ್ಕುಗಳ ಅರಿವು ಯುವಕರಿಗೆ ಅಗತ್ಯವಾಗಿದೆ. ಎಫ್ಪಿಎಐ ಈ ವಿಷಯಗಳಲ್ಲಿ ಮಾಹಿತಿ ನೀಡಲು ಯಾವಾಗಲೂ ಸಿದ್ಧವಾಗಿದೆ” ಎಂದು ಹೇಳಿದರು.
ತದನಂತರ ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿದ   ಸುಂಕಪ್ಪ ಪ್ರಾಂಶುಪಾಲರು ಅಧ್ಯಕ್ಷೀಯ ಭಾಷಣದಲ್ಲಿ ಯುವಕರಲ್ಲಿ ಜಾಗೃತಿ ಮೂಡಬೇಕು ಏನು ಮಾಡಬೇಕು ಏನು ಮಾಡಬಾರದು ಎನ್ನುವ ಚಿಂತನೆ ಬಂದಾಗ ಮಾತ್ರ ಯುವಕರು ಸಭಲೀಕರಣಗೊಳ್ಳುವುದು ಆದ್ದರಿಂದ ನೆರದಂಥ ಎಲ್ಲಾ ಯುವಕರೇ
ನಿಮ್ಮ ಆರೋಗ್ಯದ ಕಡೆ ಗಮನಹರಿಸಿ ಸುಸಜಿತ  ಕುಟುಂಬದ ಕನಸನ್ನು ನನಸುಮಾಡುವುದಕ್ಕೆ ಬೇಕಾದ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ S ವಿಜಯಲಕ್ಷ್ಮಿ ವ್ಯವಸ್ಥಾಪಕರು ಎಫ್ಪಿಎಐ ಪ್ರಾಸ್ತಾವಿಕ ನುಡಿಗಳನ್ನು ನುಡಿದರು
ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಒಟ್ಟಾರೆ 48 ಮಕ್ಕಳು ಭಾಗವಾಗಿದ್ದು ಮೊದಲನೇ ಸ್ಥಾನ  ಪವನ್ ಎರಡನೇ ಸ್ಥಾನ ಪದ್ಮಾವತಿ ಹಾಗೂ ಮೂರನೇ ಸ್ಥಾನ ಮಣಿಕಂಠ ಪಡೆದರು ಗೆದ್ದ ಸ್ಪರ್ಧಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಯಿತು ಹಾಗೂ ಎಲ್ಲಾ ಸ್ಪರ್ಧಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.
WhatsApp Group Join Now
Telegram Group Join Now
Share This Article