ಬಳ್ಳಾರಿ,25: ಶ್ರೀ ಮಹಾದೇವ ಎಜುಕೇಶನ್ ಆರ್ಟ್ & ಕಲ್ಚರಲ್ ಟ್ರಸ್ಟ್(ರಿ) ಬಳ್ಳಾರಿ ಹಾಗೂ ರಂಗ ಜಂಗಮ ಸಂಸ್ಥೆ(ರಿ) ಡಿ.ಕಗ್ಗಲ್ ಇವರ ಸಹಯೋಗದಲ್ಲಿ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ “ಡಾ. ರಾಜ್ ಸಂಗೀತ ಸಂಜೆ” ಎನ್ನುವ ಕಾರ್ಯಕ್ರಮವನ್ನು ಡಿ.ಆರ್.ಕೆ ರಂಗಸಿರಿಯ ರಾಮಕೃಷ್ಣ ವಿಲಾಸ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ ಅಣ್ಣಾಜಿ ಕೃಷ್ಣಾರೆಡ್ಡಿ ಅವರು “ರಂಗಭೂಮಿಯ ಮುಖಾಂತರ ನಟನಾಗಿ ಪಾದಾರ್ಪಣೆ ಮಾಡಿದ ರಾಜಕುಮಾರ್ ರವರು ಇಡೀ ವಿಶ್ವ ಮೆಚ್ಚುವಂತಹ ನಟಸಾರ್ವಭೌಮರಾದರು ಇವರು ನಟರಾಗಿ ನಿರ್ಮಾಪಕರಾಗಿ ಗಾಯಕರಾಗಿ ಸಹ ಸೇವೆ ಸಲ್ಲಿಸಿದ್ದಾರೆ” ಎಂದು ಹೇಳಿದರು
“ಕನ್ನಡ ಚಿತ್ರರಂಗವು ರಾಜಕುಮಾರ್ ಅವರಿಗೆ ರಾಜನ ಸ್ಥಾನ ನೀಡಿದೆ ಐದು ದಶಕಗಳ ಕಾಲ ಚಿತ್ರರಂಗದಲ್ಲಿ 205ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅವರ ಗೀತೆಗಳನ್ನು ಸ್ಮರಿಸಿ, ಇಂತಹ ಸಂಗೀತ ಕಾರ್ಯಕ್ರಮಗಳು ಹಮ್ಮಿಕೊಳ್ಳುವುದರಿಂದ ಹಲವಾರು ಹೊಸ ಪ್ರತಿಭೆಗಳಿಗೆ ವೇದಿಕೆಯಾಗುತ್ತದೆ” ಎಂದು ಸ್ಮಿಯಾಕ್ ಟ್ರಸ್ಟ್ ಗೌರವಾಧ್ಯಕ್ಷರಾದ ಬಸವರಾಜ್ ಬಿಸಲಹಳ್ಳಿ ರವರು ಹೇಳಿದರು
ನಟನೆ ಮತ್ತು ಗಾಯನದ ಮುಖಾಂತರ ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿಯನ್ನು ಪಡೆದ ಮೊದಲ ನಟ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ ಎಂದು ರಂಗ ನಿರ್ದೇಶಕರಾದ ನೇತಿ ರಘುರಾಮರವರ ಹೇಳಿದರು.
ನಂತರ ಎಲ್ಲಾ ಗಣ್ಯರು ಮತ್ತು ಗಾಯಕರು ಸೇರಿ ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಬಳ್ಳಾರಿಯ ಹೆಸರಾಂತ ಗಾಯಕರದ ದೊಡ್ಡಬಸವ ಗವಾಯಿಗಳು, ವಲಿಅಹ್ಮದ್, ಎರೇಗೌಡ, ವಿಜಯೇಂದ್ರ, ಡಾ.ಸಿ ಭರತ್, ಸೋಮನಾಥ್ ಸಾಲಿಮಠ, ಮಾನ್ಯತಾ, ಜಯಲಕ್ಷ್ಮಿ, ಭಾಗ್ಯಲಕ್ಷ್ಮಿ, ಶಿವಪ್ರಕಾಶ್, ನಾಗೇಂದ್ರ, ಮಂಜುನಾಥ, ದುರ್ಗೆಶ್, ಜಡೇಶ್ ಜೆಪಿ, ಮಧುಮತಿ, ಡಾ.ಅಣ್ಣಾಜಿ ಕೃಷ್ಣಾರೆಡ್ಡಿ, ಕಾರ್ತಿಕ್, ಬಸವರಾಜ್ ಬಿಸಲಹಳ್ಳಿ, ಶ್ರೀನಿವಾಸ ರೆಡ್ಡಿ ಹಾಗೂ ಹಲವಾರು ಬಳ್ಳಾರಿಯ ಗಾಯಕರು ಡಾ.ರಾಜ್ ಕುಮಾರ್ ಅವರ ಹಾಡುಗಳನ್ನು ಪ್ರಸ್ತುತಪಡಿಸಿದರು. ಡಾ.ಮಂಜುನಾಥ್, ಶಿವಪ್ಪ, ಕಣೇಕಲ್ ರ‍್ರಿಸ್ವಾಮಿ, ವೆಂಕೋಬಾಚಾರ್, ಶ್ರೀನಾಥ್ ಜೋಷಿ, ಇತರರು ಉಪಸ್ಥಿತರಿದ್ದರು. ನೂರಾರು ಕನ್ನಡ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಶಿವಗೀತ ಮತ್ತು ಚಂದ್ರಶೇಖರ್ ನೆರವೇರಿಸಿಕೊಟ್ಟರು.