ಬಳ್ಳಾರಿ ಜುಲೈ 24. ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 16ನೇ ಸಂಸ್ಥಾಪನ ದಿನಾಚರಣೆ ಪ್ರಯುಕ್ತ ವಿಶ್ವವಿದ್ಯಾಲಯದ ಬೋದಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಕ್ರೀಡೆಗಳು ಏರ್ಪಡಿಸಿದ್ದು , ಕ್ರಿಕೆಟ್ ರೋಚಕ ಸ್ಪರ್ಧೆಯಲ್ಲಿ ಬೋಧಕ ಸಿಬ್ಬಂದಿ “ಕ್ಲಾಸಿಕ್ 11” ತಂಡ ಸೆಮಿಫೈನಲ್ಗೆ ತೆರಳಿದ್ದು.ಇಂದು ಕ್ರಿಕೆಟ್ ಆಟದಲ್ಲಿ ಅತ್ಯುತ್ತಮ ಆಟಗಾರ ಮತ್ತು ಕ್ಯಾಚ್ ಹಿಡಿದು ಆಟಕ್ಕೆ ಸ್ಪೂರ್ತಿ ತಂದ ಸಮಾಜ ಶಾಸ್ತ್ರ ವಿಭಾಗದ ಡಾ.ರಾಜೇಂದ್ರ ಪ್ರಸಾದ್ರವರು ಮತ್ತು ಪ್ರದರ್ಶನ ಕಲೆ ನಾಟಕ ವಿಭಾಗದ ಅಸೂಟಿ ಶ್ರೀನಿವಾಸ . ತಂಡದ ನಾಯಕರು ಚೆಲುವಾದಿ ಚೆನ್ನಬಸಪ್ಪ ಇನ್ನೂ ಮುಂತಾದ ವಿಭಾಗದ ಬೋಧಕ ಸಿಬ್ಬಂದಿಯವರು ಭಾಗವಹಿಸಿದ್ದರು.