•ಸ್ನೇಹ ಬಳಗದ ವತಿಯಿಂದ ಡಾ. ರಾಧಾಕೃಷ್ಣನ್ರ ಹಾಗೂ ಶಿಕ್ಷಕರ ದಿನೋತ್ಸವ
ಬೆಳಗಾವಿ,ಸೆ.೧೦: ಡಾ. ರಾಧಾಕೃಷ್ಣನ್ ಅವರು ರಾಷ್ಟ್ರಪತಿಗಳು ಅಷ್ಟೇ ಅಲ್ಲದೇ ತತ್ವಜ್ಞಾನಿಯೂ ಆಗಿದ್ದರು. ಉತ್ತಮ ಸಮಾಜಕ್ಕಾಗಿ ಶ್ರಮಿಸಿದರು. ಅವರ ಆದರ್ಶಗುಣಗಳನ್ನು ಇವತ್ತಿನ ಶಿಕ್ಷಕರು ಅವಳಸಿಕೊಳ್ಳಬೇಕಿದೆ ಎಂದು ನಿವೃತ್ತ ಸಹನಿರ್ದೇಶಕ ಎಸ್.ಆರ್.ಹೆಗಡೆ ಹೇಳಿದರು.
ಸಹ್ಯಾದ್ರಿ ನಗರದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಪ್ರಾಚಾರ್ಯರು ಹಾಗೂ ಸಹ ಸಿಬ್ಬಂದಿ ವರ್ಗದ ’ಸ್ನೇಹ ಬಳಗ’ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನೋತ್ಸವದಲ್ಲಿ ಅವರು ಮಾತನಾಡಿದರು.
ಶಿಕ್ಷಕರ ಕಾರ್ಯ, ಜಬಾಬ್ದಾರಿ, ಸವಾಲುಗಳ ಬಗ್ಗೆ ಮಾತನಾಡಿದ ಹೆಗಡೆ ಅವರು ರಾಧಾಕೃಷ್ಣನ್ ಅವರ ವ್ಯಕ್ತಿತ್ವವನ್ನು ಮಾದರಿಯಾಗಿಟ್ಟುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಡಾ. ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನಾಲ್ಕು ಶಿಕ್ಷಕರನ್ನು ಸನ್ಮಾನಿಸಲಾಯಿತು. ಸನ್ಮಾನಿತರಾದ ಎಸ್.ಎಮ್.ಪಾಟೀಲ, ಪಿ.ಎಫ್.ಅಂಬೆ, ಎಸ್.ಆರ್.ಹಿರೇಮಠ, ಶಿವಕಾಂತ ಕಲ್ಲೋಳಿಮಠ ಮಾತನಾಡಿದರು.
ಸ್ನೇಹ ಬಳಗದ ಸದಸ್ಯರಾದ ಜಿ.ವ್ಹಿ.ನಾಯ್ಕ್, ಚೌಗಲಾ, ಎನ್ಎಲ್ ಕಾಂಬಳೆ, ಎನ್ಎನ್ಪಾಟೀಲ, ಶಿದ್ಲಿಂಗನ್ನವರ, ರಮೇಶ ಮುತಗೇಕರ, ಕುಂಬಾರ, ಇಂದುಮತಿ ಹೆಗಡೆ, ನರಟ್ಟಿ, ಪಾಟೀಲ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.