ಸಾರ್ವಜನಿಕರು ಡೆಂಗ್ಯೂ ಜ್ವರದ ಬಗ್ಗೆ ಜಾಗೃತಿವಹಿಸಿ : ಡಾ. ಆರ್. ಅಬ್ದುಲ್ಲಾ

Ravi Talawar
ಸಾರ್ವಜನಿಕರು ಡೆಂಗ್ಯೂ ಜ್ವರದ ಬಗ್ಗೆ ಜಾಗೃತಿವಹಿಸಿ : ಡಾ. ಆರ್. ಅಬ್ದುಲ್ಲಾ
WhatsApp Group Join Now
Telegram Group Join Now

ಬಳ್ಳಾರಿ,ಅ.19:     ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತ ನೀರು ನಿಲ್ಲುವುದರಿಂದ ಡೆಂಗ್ಯು ಹರಡುವ ಈಡಿಸ್ ಇಜಿಪ್ಟೆöÊ ಸೊಳ್ಳೆಯ ಸಂತತಿ ಹೆಚ್ಚಾಗುವ ಸಾಧ್ಯತೆ ಇದ್ದು, ಡೆಂಗ್ಯು ಪ್ರಕರಣಗಳು ಹೆಚ್ಚು ಕಂಡು ಬರುವುದರಿಂದ ನೀರು ನಿಲ್ಲದಂತೆ ನೋಡಿಕೊಂಡು ಡೆಂಗ್ಯೂ ಜ್ವರದÀ ಬಗ್ಗೆ ಜಾಗೃತಿವಹಿಸಿವಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಆರ್.ಅಬ್ದುಲ್ಲಾ ಅವರು ಹೇಳಿದರು.
ನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಬ್ರೂಸ್‌ಪೇಟೆ ವ್ಯಾಪ್ತಿಯಲ್ಲಿ ಬರುವ ಕೋಟೆ ಪ್ರದೇಶದ 39ನೇ ವಾರ್ಡಿನಲ್ಲಿ ಡೆಂಗ್ಯೂ ಜ್ವರÀದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುತ್ತಾ ಮಾತನಾಡಿದರು.
ನೀರು ತುಂಬುವ ಪರಿಕರಣಗಳನ್ಮು ವಾರಕ್ಕೊಮ್ಮೆ ಸ್ವಚ್ಚಗೊಳಿಸಿ ಮತ್ತು ಯಾರಿಗಾದರೂ ಒಂದೇ ದಿನಕ್ಕಿಂತ ಹೆಚ್ಚು ಬಾರಿ ಜ್ವರ ಕಂಡು ಬಂದರೆ ವೈದ್ಯರ ಬಳಿ ಪರೀಕ್ಷಿಸಿ ಅಗತ್ಯ ಚಿಕಿತ್ಸೆ ಪಡೆಯಬೇಕು. ಅದರಲ್ಲೂ ಚಿಕ್ಕ ಮಕ್ಕಳು, ಗರ್ಭಿಣಿಯರು, ವಯೋವೃದ್ದರ ಕಾಳಜಿ ತೆಗೆದುಕೊಂಡು ನಿರ್ಲಕ್ಷ ವಹಿಸಬೇಡಿ, ವೈದ್ಯರಿಂದ ಪರೀಕ್ಷಿಸಿಕೊಳ್ಳಬೇಕು  ಎಂದು ಸಾರ್ವಜನಿಕರಿಗೆ ತಿಳಿಸಿದರು.
ನಿಂತ ನೀರಿನಿಂದ ಸೊಳ್ಳೆ ಉತ್ಪತ್ತಿಯಾಗುವ ಜೊತೆಗೆ ಡೆಂಗ್ಯೂ ಸೇರಿದಂತೆ ಸೊಳ್ಳೆಯ ಕಚ್ಚುವಿಕೆಯಿಂದ ಹರಡುವ ಚಿಕುನ್‌ಗುನ್ಯಾ, ಮಲೇರಿಯಾ, ಆನೇಕಾಲು ರೋಗ, ಮೆದುಳು ಜ್ವರ ಮುಂತಾದವುಗಳು ಕಂಡುಬರುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ಜ್ವರವನ್ನು ನಾವು ನಿರ್ಲಕ್ಷಿಸುತ್ತೆವೆ, ಇಂತಹ ಸಂದರ್ಭಗಳಲ್ಲಿ  ಡೆಂಗ್ಯು ಸಂಬAಧಿತ ಜ್ವರವಾಗಿದ್ದರೆ ರೋಗಿಯು ಪ್ಲೇಟ್‌ಲೆಟ್ಸ್ಗಳ ಶೀಘ್ರ ಕುಸಿಯುವಿಕೆಯಿಂದ ಆರೋಗ್ಯ ಸಮಸ್ಯೆ ಎದುರಾಗಿ ರಕ್ತಸ್ರಾವದಂತಹ ಗಂಭಿರ ಸಮಸ್ಯೆ ಉಂಟಾಗಬಹುದು. ಯಾರಿಗಾದರೂ 3 ದಿನಗಳ ಕಡಿಮೆಯಾಗದ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಮಾಂಸಖAಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಂಡಲ್ಲಿ ನಿರ್ಲಕ್ಷಿಸಿದೆ ಹತ್ತಿರದ  ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿ ಅಗತ್ಯ ಪರೀಕ್ಷೆ ಮಾಡಿಸಿ ವೈದ್ಯರ ಸಲಹೆಯಂತೆ ಲಕ್ಷಣಗಳ ಆಧಾರದ ಮೇರೆಗೆ ಚಿಕಿತ್ಸೆ ಪಡೆಯಲು ತಿಳಿಸಿದರು.
ಡ್ರಮ್, ಬ್ಯಾರಲ್, ನೀರಿನ ತೊಟ್ಟಿ, ಕಲ್ಲಿನ ಡೋಣಿ, ಹೂವಿನ ಕುಂಡಲ ಮುಂತಾದ ಪರಿಕರಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಲು ಹಾಗೂ ಮುಚ್ಚಳ ಮುಚ್ಚಿ ಬಟ್ಟೆ ಕಟ್ಟಲು, ಬಳಕೆ ಮಾಡದ ನೀರು ಸಂಗ್ರಹಕಗಳಿಗೆ ಕೊಬ್ಬರಿ ಎಣ್ಣೆಯನ್ನು ಹಾಕುವ ಮೂಲಕ ಸೊಳ್ಳೆ ಉತ್ಪತ್ತಿ ತಡೆಯಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ 39 ನೇ ವಾರ್ಡಿನ ಕಾರ್ಪೋರೇಟರ್ ಶಶಿಕಲಾ ಜಗನ್ನಾಥ, ಆಡಳಿತ ವೈದ್ಯಾಧಿಕಾರಿ ಡಾ. ಸುರೇಖ, ಎನ್.ವಿ.ಬಿ.ಡಿ.ಸಿಪಿ ಸಲಹೆಗಾರ ಪ್ರತಾಪ್, ಜಿಲ್ಲಾ ನೋಡಲ್ ಕಿರಿಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ  ನಂದಿನಿ, ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ ನಾಗೇಂದ್ರಪ್ಪ, ಆರೋಗ್ಯ ನೀರಿಕ್ಷಣಾಧಿಕಾರಿಗಳಾದ ಮರಿ ಬಸವನಗೌಡ, ರವೀಂದ್ರ ಜಿನಗ, ನಾಗರಾಜ ಸೇರಿದಂತೆ ಬ್ರೂಸ್‌ಪೇಟೆ ಆಸ್ಪತ್ರೆಯ ಸಿಬ್ಬಂದಿಗಳು, ಆಶಾಕಾರ್ಯಕರ್ತೆಯರು, ಸಾರ್ವಜನಿಕರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article