ಬಳ್ಳಾರಿ,ಜ.07̲ ಬಳ್ಳಾರಿ ವಲಯ ನೂತನ ಪೊಲೀಸ್ ಉಪ ಮಹಾನಿರೀಕ್ಷಕರಾಗಿ ಡಾ.ಪಿ.ಎಸ್ ಹರ್ಷ ಅವರನ್ನು ನೇಮಿಸಿ ಸರ್ಕಾರ ಅದೇಶಿಸಿದ್ದು, ಅವರು ಬುಧವಾರ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು.
ಬಳಿಕ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಅವರು, ಕಾನೂನುಬದ್ಧ, ನಿಷ್ಪಕ್ಷಪಾತ ಹಾಗೂ ಕಾನೂನು ಸುವ್ಯವಸ್ಥೆಯನ್ನು ಭದ್ರ-ಬುನಾದಿಯಾಗಿಸಲು ಸರ್ಕಾರ ಮತ್ತು ಹಿರಿಯ ಅಧಿಕಾರಿಗಳ ನಿರ್ದೇಶನ ನೀಡಿದೆ. ಬಳ್ಳಾರಿ ವಲಯದ ಬಳ್ಳಾರಿ, ವಿಜಯನಗರ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು ಪ್ರಮುಖ ಮತ್ತು ಶಾಂತಿಪ್ರಿಯ ಜಿಲ್ಲೆಗಳಾಗಿದ್ದು, ಕಾನೂನು ಸುವ್ಯವಸ್ಥೆಯನ್ನು ಭದ್ರಗೊಳಿಸಲು ಹಾಗೂ ಜನಸ್ನೇಹಿ ಆಡಳಿತ ನೀಡಲು ಪೊಲೀಸ್ ಇಲಾಖೆ ಬದ್ಧವಾಗಿದೆ ಎಂದು ಹೇಳಿದರು.
ಬಳ್ಳಾರಿ ವಲಯ ನೂತನ ಡಿಐಜಿಯಾಗಿ ಡಾ.ಪಿ.ಎಸ್ ಹರ್ಷ ನೇಮಕ


