ಬೆಳಗಾವಿ : ಇಲ್ಲಿನ ಕೆ ಎಲ್ ಇ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆಯವರನ್ನು ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸತ್ಕರಿಸಿ ಅಭಿನಂಧಿಸಿದರು.
ಕೇಂದ್ರ ಸರಕಾರ ಪ್ರತಿಷ್ಠಿತ ನಾಗರಿಕ ಸೇವಾ ಪ್ರಶಸ್ತಿ ಪದ್ಮಶ್ರೀಗೆ ಪುರಸ್ಕೃತರಾದ ಕೋರೆಯವರ ಸೇವೆ ಅಪಾರವಾದದು. ಶಿಕ್ಷಣ ಆರೋಗ್ಯ ಕ್ಷೇತ್ರದಲ್ಲಿ ನಾಡಿಗೆ ಅದ್ವಿತೀಯ ಕೊಡುಗೆಯನ್ನು ಸಲ್ಲಿಸಿದ್ದಾರೆ. ಸಮಾಜಮುಖಿಯಾಗಿ ಅವರು ನೀಡಿರುವ ಸೇವೆಗೆ ಬೆಲೆಕಟ್ಟಲಾಗದು. ಅವರಿಗೆ ಪದ್ಮಶ್ರೀ ಗೌರವ ಸಂದಿರುವುದು ಹೆಮ್ಮೆಯನ್ನು ತಂದಿದೆ ಎಂದು ವಿಜಯೇಂದ್ರ ಹೇಳಿದರು.
ಈ ವೇಳೆ ಮಾಜಿ ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕಮಟಗಿಮಠ, ಶರಣು ತಳ್ಳಿಕೇರೆ, ಮಾಜಿ ಶಾಸಕ ವಿಶ್ವನಾಥ ಪಾಟೀಲ, ಅರವಿಂದ ಪಾಟೀಲ, ಅನಿಲ ಬೆನಕೆ, ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ, ಸಂಜಯ್ ಪಾಟೀಲ್, ಮಹಾಂತೇಶ ದೊಡ್ಡಗೌಡ್ರ, ಅನಿಲ್ ಬೆನಕೆ, ವಿಶ್ವನಾಥ ಪಾಟೀಲ್,ಅರವಿಂದ್ ಪಾಟೀಲ ಸೇರಿದಂತೆ ಹಲವರು ಮುಖಂಡರು ಇದ್ದರು.


