ಶುಶ್ರೂಷಕರಿಲ್ಲದೆ ಆಸ್ಪತ್ರೆಗಳು ಕಾರ್ಯನಿರ್ವಹಿಸುದು ಅಸಾಧ್ಯ: ಡಾ.ಪ್ರಭಾಕರ ಕೋರೆ

Ravi Talawar
ಶುಶ್ರೂಷಕರಿಲ್ಲದೆ ಆಸ್ಪತ್ರೆಗಳು ಕಾರ್ಯನಿರ್ವಹಿಸುದು ಅಸಾಧ್ಯ: ಡಾ.ಪ್ರಭಾಕರ ಕೋರೆ
WhatsApp Group Join Now
Telegram Group Join Now

ಬೆಳಗಾವಿಯ ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲದ ಶುಶ್ರೂಷಾ ಮಹಾವಿದ್ಯಾಲಯವು ರಾಷ್ಟ್ರೀಯ ಸಮ್ಮೆಳನವನ್ನು ಕೆ.ಎಲ್.ಇ, ಜೆ.ಎನ್.ಎಮ್.ಸಿ ಸಭಾಂಗಣದಲ್ಲಿ ” ಮಕ್ಕಳ ಶುಶ್ರೂಷಾ ಉತ್ತಮ ಆರೈಕೆಗಾಗಿ ಅಧ್ಯಯನ ಮತ್ತು ಸಂಶೋಧನೆ” ಎಂಬ ಶೀರ್ಷಿಕೆಯೊಂದಿಗೆ ಕೆ.ಎಲ್.ಇ, ವಿಶ್ವವಿದ್ಯಾಲದ ಆವರಣದಲ್ಲಿ ದಿನಾಂಕ ೨೩/೦೫/೨೦೨೫ ರಿಂದ ೨೪/೦೫/೨೦೨೫ ರವರೆಗೆ ಆಯೋಜಿಸಲಾಗಿದೆ. ಸಮ್ಮೆಳನವನ್ನು ಅತಿಥಿಗಳು ಗಿಡಕ್ಕೆ ನೀರೆರೆಯುವ ಮೂಲಕ ದಿನಾಂಕ ೨೩/೦೫/೨೦೨೫ ರಂದು ಉದ್ಘಾಟಿಸಿದರು.

ಕೆ.ಎಲ್.ಇ. ಸಂಸ್ಥೆಯ ಗೌರವಾನ್ವಿತ ಅಧ್ಯಕ್ಷರು ಹಾಗೂ ಬೆಳಗಾವಿಯ ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಪ್ರಭಾಕರ ಕೋರೆ, ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಶುಶ್ರೂಷಕರಿಲ್ಲದೆ ಆಸ್ಪತ್ರೆಗಳು ಕಾರ್ಯನಿರ್ವಹಿಸುದು ಅಸಾಧ್ಯ ಹಾಗೂ ಕೆ.ಎಲ್.ಇ. ಸಂಸ್ಥೆಯು ಸುಮಾರು ೧೦ ಶುಶ್ರೂಷಾ ಮಹಾವಿದ್ಯಾಲಯಗಳನ್ನು ತನ್ನದೆ ಆಸ್ಪತ್ರೆಯೊಂದಿಗೆ ನಡೆಸುತ್ತಿದೆ ಎಂದು ಹೇಳಿದರು, ಕೆ.ಎಲ್.ಇ. ಆಸ್ಪತ್ರೆ ಆಧುನಿಕ ತಂತ್ರಜ್ಙಾನವನ್ನು ಹೊಂದಿರುವ ಅತ್ಯುತ್ತಮ ಸಂಸ್ಥೆಗಳಲ್ಲಿ ಒಂದಾಗಿದೆ ಮತ್ತು ಕೌಶಲ್ಯಗಳನ್ನು ಹೆಚ್ಚಿಸಲು ಈ ಸಮ್ಮೆಳನವವು ತುಂಬಾ ಅವಶ್ಯಕವಾಗಿದೆ ಮತ್ತು ಸಮ್ಮೆಳನವನ್ನು ಉದ್ಘಾಟಿಸಲು ಸಂತೋಷಪಡುತ್ತೆನೆ ಎಂದು ಹೇಳಿದರು.

ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯ ಬೆಳಗಾವಿಯ, ಶುಶ್ರೂಷಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ.(ಡಾ).ವಿರೇಶಕುಮಾರ ನಂದಗಾವ ಅವರು ಸರ್ವರನ್ನು ಸ್ವಾಗತಿಸಿ ಗಣ್ಯರನ್ನು ಪರಿಚಯಿಸಿದರು. ನಂತರ ಅತಿಥಿಗಳನ್ನು ಅಭಿನಂದಿಸಲಾಯಿತು. ಈ ಸಂಧರ್ಭದಲ್ಲಿ ಮಕ್ಕಳ ಶುಶ್ರೂಷಾ ಉತ್ತಮ ಆರೈಕೆಗಾಗಿ ಅಧ್ಯಯನ ಮತ್ತು ಸಂಶೋಧನೆಯ ಕರಿತಾದ ಸ್ಮರಣಿಕೆ ಮತ್ತು ಮಕ್ಕಳ ಆರೋಗ್ಯ ಮೌಲ್ಯಮಾಪನ ಕುರಿತು ಅಭಿವೃದ್ದಿಪಡಿಸಿದ ಮೊಬೈಲ ಅಪ್ಲಿಕೆಷನ ಅನ್ನು ಬಿಡುಗಡಿಗೊಳಿಸಲಾಯಿತು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಯೋಜನಾ ಸಚಿವಾಲಯದ ನರ್ಸಿಂಗ್ ಸಲಹೆಗಾರರಾದ ಡಾ. ದೀಪಿಕಾ ಸೆಸಿಲ್ ಖಾಖಾ ಅವರು ಸಮ್ಮೆಳನವನ್ನು ಉದ್ದೇಶಿಸಿ, ಅಧ್ಯಯನ ಮತ್ತು ಸಂಶೋಧನೆಯು, ವೈದ್ಯಕೀಯ ಕೌಶಲ್ಯಗಳನ್ನು ಹೆಚ್ಚಿಸುತ್ತದೆ ಎಂದು ಹೇಳಿದರು ಹಾಗೂ ಅಭ್ಯಾಸವು ಎಂದಿಗೂ ನಮ್ಮನ್ನು ಪರಿಪೂರ್ಣರನ್ನಾಗಿ ಮಾಡುವುದಿಲ್ಲ ಆದರೆ ಪರಿಪೂರ್ಣವಾದ ಅಭ್ಯಾಸವು ನಮ್ಮನ್ನು ಯಶಸ್ವಿಗೊಳಿಸುತ್ತದೆ ಎಂದು ಉಲ್ಲೆಖಿಸಿದರು ಮತ್ತು ಮೌಲ್ಯಯುತವಾದ ಸಮ್ಮೆಳನವನ್ನು ಆಯೋಜಿಸಿದ್ದಕ್ಕಾಗಿ ಸಂಸ್ಥೆಯನ್ನು ಅಭಿನಂದಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ನಿತಿನ್ ಗಂಗನೆ ಅವರು ತಮ್ಮ ನುಡಿಗಳಲ್ಲಿ ಶುಶ್ರೂಷಾ ಶಿಕ್ಷಣವು ಕೌಶಲ್ಯ ಆಧಾರಿತ ವೃತ್ತಿಯಾಗಿದ್ದು ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯ ಬೆಳಗಾವಿಯ, ಶುಶ್ರೂಷಾ ಮಹಾವಿದ್ಯಾಲಯವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಕೃಷ್ಣ ವಿಶ್ವವಿದ್ಯಾಲಯ ಕರಾಡ, ಶುಶ್ರೂಷಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ವೈಶಾಲಿ ಮೋಹಿತೆ, ಅವರು ಕೆ.ಎಲ್.ಇ. ಸಂಸ್ಥೆಗಿ ತಮ್ಮ ಅಭಿನಂದನೆಯನ್ನು ಸಲ್ಲಿಸಿ, ಶುಶ್ರೂಷಕ ವೃತ್ತಿಯು ದೈವಿಕ ವೃತ್ತಿಯಾಗಿದ್ದು, ಉತ್ತಮ ಶುಶ್ರೂಷಕರು ಸಮಾಜಕ್ಕೆ ಸಹಾನುಭೂತಿಯ ಆರೈಕೆ ನೀಡಲು ನೆರವಾಗುತ್ತಾರೆ ಎಂದು ಹೇಳಿದರು

ಈ ಎರಡು ದಿನಗಳಲ್ಲಿ ಉಪನ್ಯಾಸ, ಫಲಕ ಚರ್ಚೆ, ಪೇಪರ್ ಹಾಗು ಪೊಸ್ಟರ್ ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಳ್ಳಲಿವೆ. ಭಾರತದ ಕರ್ನಾಟಕ, ಮಹಾರಾಷ್ಟ್ರ, ಗೋವಾ, ಗುಜರಾತ, ತೆಲಂಗಾಣ, ಉತ್ತರ ಪ್ರದೇಶ, ಪಂಜಾಬ, ಮತ್ತು ತಮಿಳುನಾಡು ರಾಜ್ಯಗಳಿಂದ ಸುಮಾರು ೫೨೦ ಪ್ರತಿನಿಧಿಗಳು, ಉನ್ನತ ಸಂಪನ್ಮೂಲ ವ್ಯಕ್ತಿಗಳು, ಪ್ರಸವಶಾಸ್ತ್ರದ ಶಿಕ್ಷಣ ತಜ್ಞರು, ಶುಶ್ರೂಷಾ ಅಧಿಕಾರಿಗಳು, ಅಧ್ಯಾಪಕರು ಮತ್ತು ಪಿಎಚ್.ಡಿ ವಿದಾಂಸರು ಸಮ್ಮೆಳನದಲ್ಲಿ ಭಾಗವಹಿಸಲಿದ್ದಾರೆ.

ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯರು ಮತ್ತು ಕೆ.ಎಲ್.ಇ. ಸಂಸ್ಥೆಯ ನಿರ್ದೇಶಕರಾದ ಶ್ರೀ ಮಹಾಂತೇಶ ಕವಟಗಿಮಠ, ಕೆ.ಎಲ್.ಇ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಬೆಳಗಾವಿಯ, ವೈದ್ಯಕೀಯ ನಿರ್ದೇಶಕರಾದ ಡಾ.ಎಂ.ದಯಾನಂದ ಕೆ.ಎಲ್.ಇ. ವಿ.ಕೆ.ದಂತ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲರಾದ, ಡಾ. ಅಲ್ಕಾ ಕಾಳೆ ಮತ್ತು ಕೆ.ಎಲ್.ಇ ವಿವಿಧ ಸಂಸ್ಥೆಗಳ ಪ್ರಾಂಶುಪಾಲರು ಹಾಗು ಅಧಿಕಾರಿಗಳು ಉಪಸ್ಥಿತರಿದ್ದರು.

ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯ, ನರ್ಸಿಂಗ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಸಮ್ಮೆಳನವದ ಸಂಘಟನಾ ಕಾರ್ಯದರ್ಶಿ ಪ್ರೊ.(ಡಾ). ಗವಿಸಿದ್ದಯ್ಯ ಸಾಲೀಮಠ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು., ಉಪಪ್ರಾಂಶುಪಾಲರಾದ ಪ್ರೊ.(ಡಾ). ಸಂಗೀತಾ ಖರಡೆ, ಡೀನ ಪ್ರೊ.(ಡಾ).ಪ್ರೀತಿ ಭೂಪಾಲಿ ವೇದಿಕೆಯನ್ನು ಹಂಚಿಕೊಂಡಿದ್ದರು.

 

WhatsApp Group Join Now
Telegram Group Join Now
Share This Article