ಘಟಪ್ರಭಾ. ಪಟ್ಟಣದ ಮತ್ತು ಸುತ್ತಮುತ್ತಲಿನ ಭಾಗದ ರೈತರ ಅನುಕೂಲಕ್ಕಾಗಿ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ವತಿಯಿಂದ ಇಫ್ಕೊ ರಸಗೊಬ್ಬರ ಹಾಗೂ ಕೀಟನಾಶಕಗಳ ಮಳಿಗೆಯ ಉದ್ಘಾಟನೆ ನಿಮಿತ್ತ ಮಲ್ಲಾಪೂರ ಪಿ ಜಿ ವಿಠ್ಠಲ ರುಕ್ಮಿಣಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಸಭಾ ಮಾಜಿ ಸದಸ್ಯರು ಹಾಗೂ ಕೆ ಎಲ್ ಈ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರನ್ನು ಶಿವಪುತ್ರ ಕೊಗನೂರ, ಶ್ರೀಕಾಂತ ವಿ ಮಹಾಜನ, ಗಂಗಾಧರ ಬಡಕುಂದ್ರಿ, ಅಶೋಕ ಕಮತ ಅವರುಗಳು ಆತ್ಮೀಯವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸಹಕಾರಿ ಧುರೀಣರಾದ ಮಹಾಂತೇಶ ಕವಟಗಿಮಠ, ಕೆ ಎಲ್ ಇ ಸಂಸ್ಥೆಯ ನಿರ್ದೇಶಕ ರಾಜು ಮುನವಳ್ಳಿ ರಾಮಣ್ಣ ಹುಕ್ಕೇರಿ,ಮಾರುತಿ ಹುಕ್ಕೇರಿ, ಮಾರುತಿ ವಿಜಯನಗರ, ಮಲ್ಲಾಪೂರ ಪಿಕೆಪಿಎಸ್ ಅಧ್ಯಕ್ಷ ಮುತ್ತಣ್ಣ ಹತ್ತರವಾಟ,ನಿರ್ದೇಶಕರಾದ ಉಮೇಶ ತುಕ್ಕಾನಟ್ಟಿ,ಶಿವರಾಜ ಬಡಕುಂದ್ರಿ, ಪುಟ್ಟು ಖಾನಾಪುರೆ, ಸುರೇಶ ಪಾಟೀಲ, ರಾಜು ಕತ್ತಿ,ಕುಮಾರ ಹುಕ್ಕೇರಿ,ಮಲ್ಲಪ್ಪ ಹುಕ್ಕೇರಿ, ಮಲ್ಲು ತುಕ್ಕಾನಟ್ಟಿ, ಚಿದಾನಂದ ಕೋರೆ ಸಕ್ಕರೆ ಕಾರ್ಖಾನೆಯ ನಿರ್ದೇಶಕರು ಸಿಬ್ಬಂದಿಗಳು, ಈ ಭಾಗದ ರೈತರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ನೂರಾರು ರೈತರು ಭಾಗವಹಿಸಿದ್ದರು.