ರೈತರು ವೈಜ್ಞಾನಿಕ ಪದ್ಧತಿಯಲ್ಲಿ ಕೃಷಿ ಮಾಡಿದರೆ ಆರ್ಥಿಕ ಲಾಭ ಸಾಧ್ಯ : ಡಾ. ಪಿ. ಎಲ್. ಪಾಟೀಲ್

Hasiru Kranti
ರೈತರು ವೈಜ್ಞಾನಿಕ ಪದ್ಧತಿಯಲ್ಲಿ ಕೃಷಿ ಮಾಡಿದರೆ ಆರ್ಥಿಕ ಲಾಭ ಸಾಧ್ಯ : ಡಾ. ಪಿ. ಎಲ್. ಪಾಟೀಲ್
WhatsApp Group Join Now
Telegram Group Join Now

ಮಹಾಲಿಂಗಪುರ: ದೇಶದ ಶೇಕಡಾ ೫೦ ರಷ್ಟು ರೈತರು ಕೃಷಿಯಲ್ಲಿ ತೊಡಗಿದ್ದರೂ, ಅವರ ಆರ್ಥಿಕ ಪರಿಸ್ಥಿತಿ ಮಾತ್ರ ಅಂದಾಜು ೨೫ ರಷ್ಟಿದೆ ಎಂದರೆ, ವೈಜ್ಞಾನಿಕ ಪದ್ಧತಿಯ ಕೃಷಿ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ಸಂಪೂರ್ಣ ತೊಡಗಿಸಿಕ್ಕೊಂಡಿಲ್ಲ ಎನ್ನುವುದು ಎದ್ದು ಕಾಣುತ್ತದೆ ಎಂದು ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಪಿ.ಎಲ್.ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಶುಕ್ರವಾರ ಸೈದಾಪುರ – ಸಮೀರವಾಡಿಯ ಕೆ.ಜೆ. ಸೋಮಯ್ಯ ಕೃಷಿ ಅನ್ವಯಿತ ಸಂಶೋಧನಾ ಸಂಸ್ಥೆ ಮತ್ತು ಮುಂಬೈ ಇಂಜಿನಿಯರಿಂಗ್ ಸಹಯೋಗದಲ್ಲಿ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ನಡೆದ ಅಗ್ರಿಟೆಕ್ ಹೆಕತಾನ – ೨೦೨೬ ರ ಸಮಾರಂಭದಲ್ಲಿ ರೈತರು ಮತ್ತು ಮುಂಬೈಯಿಂದ ಆಗಮಿಸಿದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಕುರಿತು ಉಪನ್ಯಾಸ ನೀಡಿದರು.
ಪ್ರಸ್ತುತ ಇದು ಆಧುನಿಕ ಯುಗ ಎಲ್ಲ ರಂಗಗಳು ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿಕೊಂಡು ಆರ್ಥಿಕ ಸ್ವಾವಲಂಬನೆಯತ್ತ ಸಾಗಿವೆ.ಕೃಷಿ ವಲಯವು ಕೂಡ ಹೊರತಾಗಿಲ್ಲ ಪರ್ವಾಗಿಲ್ಲ ಎನ್ನುವಷ್ಟರ ಮಟ್ಟಿಗೆ ಚಟುವಟಿಕೆಗಳಲ್ಲಿ ತೊಡಗಿದ್ದು, ಇನ್ನೂ ಹೆಚ್ಚಿನ ಸಾಧನೆ ಮಾಡಬೇಕಿದೆ.ನಮ್ಮ ದೇಶದ ರೈತರು ಯಾವುದೇ ಬೆಳೆ ಬೆಳೆಯಲಿ ಅದಕ್ಕೆ ಒಳ್ಳೆಯ ಮತ್ತು ಕೆಟ್ಟದ್ದಕ್ಕೆ ವಾತಾವರಣದ ಸಬೂಬು ಹೇಳುತ್ತಾರೆ,ಇದು ಈಗಲೂ ಚಾಲ್ತಿಯಲ್ಲಿದೆ ಇದೊಂದು ಮೌಢ್ಯಕ್ಕೆ ಸಮವಾಗಿದೆ ಎಂದರು.
ನಾವು ಬೆಳೆಯುವ ಕಬ್ಬು ಬೆಳೆ ಮೂರು ಕುಳೆಗಳನ್ನು ದಾಟಬಾರದು.ಇದರಿಂದ ಮಣ್ಣಿನ ಸವಕಳಿಯಾಗುತ್ತದೆ. ಬದಲಾಗಿ ಸನಬು,ತೊಗರಿ, ಸೋಯಾಬೀನ್, ಗೋವಿನ ಜೋಳ ಮತ್ತು ಕಾಯಿಪಲ್ಯ ಇನ್ನೂ ಇತ್ಯಾದಿ ಬೆಳೆಗಳು ಲಾಭದಾಯಕ ಎನಿಸಿದ್ದು, ಇವುಗಳನ್ನು ಬೆಳೆ ಬೆಳೆಯಬಹುದು ಮತ್ತು ದೇಶದ ರಾಜಸ್ತಾನ ಹಾಗೂ ಇಸ್ರೇಲಿ ದೇಶದ ರೈತರ ಹನಿ ನೀರಾವರಿ ಪದ್ಧತಿಯು ಸವಳು ಜವಳಿಗೆ ಮುಕ್ತಿ ನೀಡುತ್ತದೆ. ಭೂಮಿಯಲ್ಲಿಯ ಸಾವಯವ ಗೊಬ್ಬರ,ಸೂಕ್ಷ್ಮಾಣುಗಳು ಮತ್ತು ಎರೆ ಹುಳುಗಳು, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದರಿಂದ, ತೋಟದಲ್ಲಿ ರೈತರು ಕೃಷಿ ತ್ಯಾಜ್ಯವನ್ನು ಸುಡದೆ ಬದಲಾಗಿ ಅದೆ ಮಣ್ಣಿನಡಿ ಹುದುಗಿಸಿ ಕೊಳೆಸಬೇಕು ಆಗ ಅದುವೆ ಸಾವಯವ ಗೊಬ್ಬರವಾಗಿ ಫಸಲು ಹುಲುಸಾಗಿ ಬರುತ್ತದೆ ಎಂದರು.
ಅಮೇರಿಕನ್ ವಿದ್ಯಾರ್ಥಿಗಳಿಗೆ ಕೃಷಿ ಮತ್ತು ಇತರ ವಿ?ಯಗಳ ಕುರಿತು ೪೦ ವ?ಗಳ ವರೆಗೆ ವಿದ್ಯಾ ದಾನ ಮಾಡಿದ ಡಾ.ಲ್ಯಾರಿ ವಾಕರ್ ಮತ್ತು ಅಮೇರಿಕದ ಇನ್ನೋರ್ವ ಡಾ.ಲಿಸಾ ಮಾತನಾಡಿ, ವೈಜ್ಞಾನಿಕ ಕೃಷಿಯ ಬಗ್ಗೆ ಬಹಳ? ಅಧ್ಯಯನ ಮಾಡಿದ್ದೇನೆ, ಆದರೆ ಈ ಸೈದಾಪುರ- ಸಮೀರವಾಡಿ ಭಾಗದ ರೈತರ ಜೊತೆ ಬೆರೆತು ನಾನು ಕಲಿತದ್ದು ಬಹಳಷ್ಟಿದ್ದು,ಈ ಭಾಗದ ರೈತರೆ ನನಗೆ ಗುರುಗಳು.ಇವರಲ್ಲಿರುವ ಪುರಾತನ ಕೃಷಿ ಪದ್ಧತಿ ನನಗೆ ಸಾಕ? ಚಿಂತನೆ ನಡೆಸುವಂತೆ ಮಾಡಿದೆ. ಈ ಭಾಗದ ರೈತರಿಗೆ ನೆರವಾಗಲಿ. ವೃತಾ ಶ್ರಮ ಹಾಳು ಮಾಡಿಕೊಳ್ಳದೆ ಕೃಷಿಯಲ್ಲಿ ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಂಡು ಉತ್ತಮ ಬೆಳೆ ಬೆಳೆಯಬೇಕು ಎಂದು ರೈತರ ಪರ ಕಾಳಜಿ ಮೆರೆದರು.
ಜಿಬಿಎಲ್ ತಾಂತ್ರಿಕ ಅಧಿಕಾರಿ ದಿನೇಶ ಶರ್ಮಾ ಪ್ರಾಸ್ತಾವಿಕವಾಗಿ ಮಾತನಾಡಿ, ಹೆಕತಾನ ಎನ್ನುವುದು ಕೇವಲ ಯೋಜನೆ ಅಲ್ಲ ಬದಲಾಗಿ ನೇರ ಕಲಿಕೆ ಮತ್ತು ರೈತರ ಸಮಸ್ಯೆಗಳನ್ನು ನೀಗಿಸುವ ವೇದಿಕೆಯಾಗಿದೆ. ರೈತರು ತಮ್ಮ ಅನಾದಿಕಾಲದ ಪಾರಂಪರಿಕ ಕೃಷಿ ಚಟುವಟಿಕೆಗಳಿಗೆ ವೈಜ್ಞಾನಿಕ ರೂಪ ನೀಡಿ ಉತ್ತಮ ಬೆಳೆ ಬೆಳೆದು ಆರ್ಥಿಕ ಅಭಿವೃದ್ಧಿ ಹೊಂದಬೇಕೆನ್ನುವುದೆ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ರೈತ ಗೀತೆಯೊಂದಿಗೆ ಅತಿಥಿಗಳು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಆರ್.ಭಕ್ಷಿ ವಹಿಸಿದ್ದರು.ಈ ಸಂದರ್ಭದಲ್ಲಿ ನಿಜಲಿಂಗಪ್ಪ ಇನ್ಸ್ಟಿಟ್ಯೂಟ್ ಡಾ.ರಾಜಗೋಪಾಲ, ಬೆಳಗಾವಿ ಕೃಷಿ ಜಂಟಿ ನಿರ್ದೇಶಕರು ಡಾ.ಎಚ್.ಡಿ.ಕೋಲೇಕಾರ, ಬಾಗಲಕೋಟ ಜಂಟಿ ನಿರ್ದೇಶಕರು ಟಿ.ಎಸ್.ರುದ್ರೇಶಪ್ಪ, ಪ್ರಗತಿಪರಾದ ರೈತ ಬಿ.ಬಿ.ಬೆಳಕೂಡ, ರಾಮನಗೌಡ ಪಾಟೀಲ್, ಡಾ.ನಿತಿನ ದೇಸಾಯಿ, ಹಿರಿಯ ಕಬ್ಬು ನಿರಿಕ್ಷಕರಾದ ವೆಂಕಟೇಶ್ ಕಣಬೂರ, ರಂಗನಗೌಡ ಪಾಟೀಲ್, ಡಾ.ಸುರೇಶ ಉಕರಂಡೆ ಇನ್ನಿತರರಿದ್ದರು.
೨೩ mಟಠಿ ೦೧ ಠಿhoಣo

WhatsApp Group Join Now
Telegram Group Join Now
Share This Article