ಬಳ್ಳಾರಿ,ಜ,30..- ಬುನಾದಿ ಕಲಿಕಾ ಸಾಮರ್ಥ್ಯಗಳೆ ಮಕ್ಕಳ ಶಿಕ್ಷಣಕ್ಕೆ ತಾಯಿಬೇರು ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ ನಿಷ್ಟಿ ರುದ್ರಪ್ಪ ಅಭಿಪ್ರಾಯಪಟ್ಟರು.
ಸ್ಥಳೀಯ ಪಟೇಲ್ ನಗರದ ಪಿ ಎಂ ಶ್ರೀ ಸ ಮಾ ಹಿ ಪ್ರಾ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಮಾತನಾಡುತ್ತಾ , 1 ರಿಂದ 5 ನೇ ತರಗತಿ ಮಕ್ಕಳಿಗೆ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಭಾಷೆ ಮತ್ತು ಗಣಿತದ ಮೂಲ ಸಾಮರ್ಥ್ಯಗಳನ್ನು ಕಲಿತು ವಿವಿಧ ಚಟುವಟಿಕೆಗಳ ಮೂಲಕ ಅಭಿವ್ಯಕ್ತಿಗೊಳಿಸುವ ಹಬ್ಬವೆ ಕಲಿಕಾ ಹಬ್ಬ ಬುನಾದಿ ಕಲಿಕಾ ಸಾಮರ್ಥ್ಯಗಳು ಮಕ್ಕಳ ಶಿಕ್ಷಣಕ್ಕೆ ತಾಯಿಬೇರು ಎಂದು ತಿಳಿಸಿದರು
ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಸಿದ್ದಲಿಂಗಪ್ಪ ರವರು ಮಕ್ಕಳಿಗೆ ಅಕ್ಷರ ಜ್ಞಾನ ಮತ್ತು ಮೌಲ್ಯಗಳನ್ನು ಬಿತ್ತುವ ಕಾಯಕ ಮಾಡಿದಾಗ ಮಾತ್ರ ಉತ್ತಮ ಕಲಿಕಾ ಪಟುಗಳು ಹೊರಹೊಮ್ಮಲು ಸಾಧ್ಯ ಎಂದು ತಿಳಿಸಿದರು
ಪಟೇಲ್ ನಗರ ಕ್ಲಸ್ಟರ್ ನ ಸಿಆರ್ಪಿಗಳಾದ ಎ ಎರ್ರಿಸ್ವಾಮಿ ರವರು ಮಕ್ಕಳು ವಿವಿಧ ಚಟುವಟಿಕೆಗಳ ಮೂಲಕ ಆಲಿಸುವ ಮಾತನಾಡುವ ಓದುವ ಬರೆಯುವ ಗ್ರಹಿಸಿಕೊಳ್ಳುವ ಅರ್ಥೈಸಿಕೊಳ್ಳುವ ವಿವಿಧ ರೀತಿಯ ಕಾಳುಗಳು ಹಣ್ಣುಗಳು ತರಕಾರಿಗಳು ಬಣ್ಣಗಳು ಆಕೃತಿಗಳು ಪರಿಸರದ ಮುಖಾಂತರ ಮಗು ಅಕ್ಷರ ಮತ್ತು ಅರಿವಿನ ಜ್ಞಾನವನ್ನು ಕಟ್ಟಿಕೊಳ್ಳುವ ಹಬ್ಬ ಕಲಿಕಾ ಹಬ್ಬವಾಗಿದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು
ಶಿಕ್ಷಣ ಸಂಯೋಜಕರಾದ ಮಂಜುನಾಥ, ಮಧು ಮೋಹನ ಹಾಗೂ ಬಿ ಆರ್ ಪಿಗಳಾದ ಶ್ರೀ ಸಿದ್ದಲಿಂಗಪ್ಪ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಕೇಂದ್ರ ಬಾಲ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಾ. ಶಿವಲಿಂಗಪ್ಪ ಹಂದಿಹಾಳ್ ಅವರನ್ನು ಸನ್ಮಾನಿಸಲಾಯಿತು
ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಮಹಾಂತೇಶ್ ಮೇಟಿ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಮಹಾಂತೇಶ್ ಹಾಗೂ ಕ್ಲಸ್ಟರ್ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪುರಸ್ಕೃತರಾದ ಎನ್ ತಿಪ್ಪನಗೌಡ, ಶ್ರೀಮತಿ ಜೆ ಸುಧಾ ಪರಿಮಳ, ಶ್ರೀಮತಿ ಸೌಮ್ಯ ಸಾಮಂತ್ರಿ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪಿ ಎಂ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಜಯಶ್ರೀ ಎಂ, ಸ ಹಿ ಪ್ರಾ ಶಾಲೆ ಕಕ್ಕಬೇವಿನಹಳ್ಳಿ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಶೇಶಮ್ಮ, ಟಿ ಬೂದಿಹಾಳ್ ಶಾಲೆ ಮುಖ್ಯ ಗುರುಗಳಾದ ನೇತ್ರ, ಗೋಡೆ ಹಾಳ್ ಶಾಲೆಯ ಮುಖ್ಯ ಗುರುಗಳಾದ ಧರ್ಮೇಂದ್ರ, ಬಿಸಲಹಳ್ಳಿ ಶಾಲೆಯ ಮುಖ್ಯ ಗುರುಗಳಾದ ಸಿರಾಜ್ ಪಾಶ, ಗೋನಾಳ್ ಶಾಲೆಯ ಮುಖ್ಯ ಗುರುಗಳಾದ ಭಾಸ್ಕರ್ ಬಿಕ್ಕಿ, ಜನತಾ ನಗರ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಹಸೀನಾ ಬಾನು ಹಾಜರಿದ್ದರು
ಎಲ್ಲಾ ಶಾಲೆಗಳಿಂದ ಮಕ್ಕಳು ಪೋಷಕರು ಎಸ್ ಡಿ ಎಂ ಸಿ ಅಧ್ಯಕ್ಷರು ಸದಸ್ಯರು ಭಾಗವಹಿಸಿದ್ದರು ಅಸುಂಡಿ ಶಾಲೆಯ ಮುಖ್ಯ ಗುರುಗಳಾದ ಅಶೋಕ್ ರೆಡ್ಡಿ ರವರು ಸ್ವಾಗತಿಸಿದರು, ಅಮರಾಪುರ ಶಾಲೆಯ ಮುಖ್ಯ ಗುರುಗಳಾದ ವೀರಭದ್ರಾಚಾರ್ ರವರು ನಿರೂಪಿಸಿದರು ಬಿಸಲಹಳ್ಳಿ ಶಾಲೆಯ ಮುಖ್ಯಗುರುಗಳಾದ ಸಿರಾಜ್ ಪಾಷ ರವರು ವಂದಿಸಿದರು


